
ಸೋಮೇಶ್ವರದ ಒಡೆಯ ಸೋಮನಾಥ ದೇವರ ಮಹಾದ್ವಾರದ ಸನಿಹ ” ದಿವ್ಯ ಶ್ರೀ ” ನಿವಾಸ ದ ಯಾಜಮಾನ ಮುಂಬೈಯ ಸಾಫಲ್ಯ ಸೇವಾ ಸಂಘದ ಅದ್ಯಕ್ಷರು ಹಾಗೂ ಶ್ರೀ ಮಹತೋಬಾರ ಶನಿ ಮಹಾತ್ಮ ಪೂಜಾ ಸಮಿತಿ ಮಲಾಡ್ ನ ಅಧ್ಯಕ್ಷರೂ ಆದ ಶ್ರೀನಿವಾಸ ಸಾಫಲ್ಯ ಮತ್ತು ಅವರ ಪತ್ನಿ ರತಿಕಾ ಶ್ರೀನಿವಾಸ ಸಾಫಲ್ಯ ಅವರು ತಮ್ಮ ನಿವಾಸದಲ್ಲಿ ದಿನವಿಡೀ ಧಾರ್ಮಿಕ ಕಾರ್ಯಕ್ರಮ ವನ್ನು ಆಯೋಜಿಸಿದ್ದರು.

ತಾ- 16-11-23 ರ ವೃಶ್ಚಿಕ ಸಂಕ್ರಮಣದ ಪರ್ವಕಾಲದಲ್ಲಿ ಬೆಳಿಗ್ಗೆ ಶ್ರೀ ಸತ್ಯನಾರಯಣ ಮಹಾ ಪೂಜೆ ಯು ಶ್ರೀಪತಿ ಭಟ್ ಅವರ ಪೌರೋಹಿತ್ಯ ದಲ್ಲಿ ಸಾಂಗವಾಗಿ ನಡೆಯಿತು. ಪೂಜೆಯ ನಂತರ ಮಹಾ ಮಂಗಳಾರತಿ ನಡೆಯಿತು.
ಮದ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ನೂರಾರು ಭಕ್ತ ಭಾಂದವರು ಭಾಗಿಗಳಾದರು.

ಅಪರಾಹ್ನ ಎರಡುಘಂಟೆ ನಲವತ್ತ ಐದು ನಿಮಿಷ ಕ್ಕೆ ಶ್ರೀಪತಿ ಭಟ್ ಅವರು ಶನಿ ದೇವರ ಕಲಶ ಪೂಜೆ ನೆರವೆರಿಸಿದರು.
ಬಳಿಕ ಶ್ರೀ ಶನಿಗ್ರಂಥ ಪಾರಯಾಣ ಯಕ್ಷಗಾನ ತಾಳ ಮದ್ದಳೆ ರೂಪಕ ದಲ್ಲಿ ನಡೆಯಿತು. ಶ್ರೀ ಮಹತೋಬರ ಶನಿ ಮಹಾತ್ಮ ಪೂಜಾ ಸಮಿತಿ ಮಲಾಡ್ ದ ಸದಸ್ಯರು ಹಾಗೂ ಯಕ್ಷಗಾನದ ಹೆಸರಾಂತ ಹಾಸ್ಯಗಾರ ಸೀತಾರಾಮ ಕುಲಾಲ್, ಶ್ರೀಪತಿ ಭಟ್ , ನಾರಾಯಣ ಶೆಟ್ಟಿ ,ವಾಸು ಸಾಲಿಯಾನ್ , ಸದಾನಂದ ಕಾಮತ್ , ಚಂದ್ರ ಕುಮಾರ್ ಶೆಟ್ಟಿ , ಗಂಗಾಧರ ಸುವರ್ಣ , ಸಹದೇವ ಸಾಲಿಯಾನ್ , ಉಮೇಶ್ ಕಾಂ ತರ ಮತ್ತು ಸ್ವತಹ ಶ್ರೀನಿವಾಸ ಸಾಫಲ್ಯ ಅವರು ಪಾರಾಯಣದಲ್ಲಿ ಭಾಗವಹಿಸಿದ್ದರು. ನಂತರ ಶ್ರೀ ಶನಿ ದೇವರಿಗೆ ಭಜನೆಯ ಜತೆಗೆ ಮಂಗಳಾರತಿ ಮಾಡಲಾಯಿತು. ಭಕ್ತ ಭಾಂದವರು ಶ್ರೀ ಸತ್ಯನಾರಾಯಣ ದೇವರ, ಶ್ರೀ ಶನಿದೇವರ ಮಹಾಪ್ರಸಾದ ಸ್ವೀಕರಿಸಿದರು. ಮುಂಬಯಿ ಸಾಫಲ್ಯ ಸಮಾಜ ಭಾಂದವರು, ಶ್ರೀ ಮಹತೋಬಾರ ಶನಿ ಮಹಾತ್ಮ ಪೂಜಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಶ್ರೀನಿವಾಸ ಸಾಫಲ್ಯ ಅವರ ಕುಟುಂಬಸ್ತರು, ಪರಿಸರದ ಭಕ್ತರು ದಿನವಿಡೀ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದೀಪಾವಳಿಹಬ್ಬದ ಶುಭಾಶಯಗಳು