
ಬಿಲ್ಲವ ಘಾಟ್ಕೋಪರ್ ಇದರ ಉಸ್ತುವಾರಿ ವಹಿಸಿದ ಗಣೇಶ್ ಡಿ ಪೂಜಾರಿ ಹಾಗೂ ತುಳು ಕೂಟ ಅಸಲ್ಫ ಇದರ ಅಧ್ಯಕ್ಷರಾದ ರಮಾನಾಥ್ ಟಿ ಕೋಟ್ಯಾನ್ ಇವರ ಜಂಟಿ ಆಯೋಜನೆಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮವನ್ನು ತಾರೀಕು 10/08/2025 ರಂದು ಸಾಯಂಕಾಲ ಗಂಟೆ 5.30 ರಿಂದ ಘಾಟ್ಕೋಪರ್ ಪಶ್ಚಿಮ ಅಸಲ್ಫಾ ಶ್ರೀ ಗೀತಾಂಬಿಕಾ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಆ ಪ್ರಯುಕ್ತ ತಾವೆಲ್ಲರೂ ಬಂದು ತುಳುನಾಡಿನ ಆಟಿ ತಿಂಗಳಲ್ಲಿ ಮಾಡುವ ವಿವಿಧ ಖಾದ್ಯ ಪದಾರ್ಥ ಗಳ ಸವಿ ರುಚಿಯನ್ನು ಸ್ವಾದಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ಕಾರ್ಯಕ್ರಮದ ಆಯೋಜಕರು ವಿನಂತಿಸಿದ್ದಾರೆ.




