33 C
Mumbai
October 5, 2026
Mumbai News Kannada
ಪ್ರಕಟಣೆ

ಅಕ್ಟೋಬರ್ 11ರಿಂದ ಬೋರಿವಲಿ ನ್ಯಾನ್ಸಿ ಕಾಂಪ್ಲೆಕ್ಸ್‌ನ ಶ್ರೀ ಜಗದೀಶ್ವರಿ ಮಂದಿರದಲ್ಲಿ 51ನೇ ವರ್ಷದ ನವರಾತ್ರಿ ಹಾಗೂ ದಸರಾ ಮಹೋತ್ಸವ



ಮುಂಬೈ: ಬೋರಿವಲಿ ಪೂರ್ವದ ರಾಷ್ಟ್ರೀಯ ಉದ್ಯಾನವನದ ಸನಿಹವಿರುವ ಶ್ರೀಕೃಷ್ಣ ನಗರದ ನ್ಯಾನ್ಸಿ ಕಾಂಪ್ಲೆಕ್ಸ್‌ನಲ್ಲಿ (ನವನಿರ್ಮಿತ ಶೀತಲ್ ರಿಗಾಲಿಯಾ) ನೆಲೆಸಿರುವ ಶ್ರೀ ಜಗದೀಶ್ವರಿ ಮಂದಿರದಲ್ಲಿ 51ನೇ ವರ್ಷದ ನವರಾತ್ರಿ ಹಾಗೂ ದಸರಾ ಮಹೋತ್ಸವವು ಅಕ್ಟೋಬರ್ 11ರಿಂದ 20ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ನೂತನವಾಗಿ ಪುನರ್‌ ನಿರ್ಮಾಣಗೊಂಡು, ಶಿಲಾಮಯ ಗರ್ಭಗುಡಿಯಲ್ಲಿ ಪುನಃ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ನೆರವೇರಿದ ಬಳಿಕ ನಡೆಯುತ್ತಿರುವ ಪ್ರಥಮ ನವರಾತ್ರೋತ್ಸವ ಇದಾಗಿದೆ ಎಂಬುದು ವಿಶೇಷ.

ಅ. 11ರ ಭಾನುವಾರ ಬೆಳಿಗ್ಗೆ 6:31ಕ್ಕೆ ಘಟಸ್ಥಾಪನೆಯೊಂದಿಗೆ ಧಾರ್ಮಿಕ ವಿಧಿ-ವಿಧಾನಗಳು ಆರಂಭವಾಗಲಿದ್ದು, ಅ. 20ರ ವಿಜಯದಶಮಿಯಂದು ಘಟ ವಿಸರ್ಜನೆಯೊಂದಿಗೆ ಸಂಪನ್ನಗೊಳ್ಳಲಿವೆ.

ಉತ್ಸವದ ಪ್ರಯುಕ್ತ ಪ್ರತಿದಿನ ಬೆಳಿಗ್ಗೆ 7:30ಕ್ಕೆ ನಿತ್ಯಾರತಿ, ಸಂಜೆ 5:00ರಿಂದ 7:00ರ ವರೆಗೆ ಬೋರಿವಲಿ-ದಹಿಸರ್‌ನ ಶ್ರೀ ಹನುಮಾನ್ ಮಹಿಳಾ ಭಜನಾ ಮಂಡಳಿ ಹಾಗೂ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ರಾತ್ರಿ 7:30ಕ್ಕೆ ಮಹಾಪೂಜೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆ ನೆರವೇರಲಿದೆ.

ಅ. 18ರ ಭಾನುವಾರ ಬೆಳಿಗ್ಗೆ 8:15ರಿಂದ ಶ್ರೀ ದುರ್ಗಾ ಹೋಮ, ಮಧ್ಯಾಹ್ನ 1:00ರಿಂದ 3:00ರ ವರೆಗೆ ಅನ್ನಸಂತರ್ಪಣೆ ಹಾಗೂ ಸಂಜೆ 6:00ರಿಂದ ದುರ್ಗಾ ಕಲ್ಪೋಕ್ತ ಪೂಜೆ ಜರುಗಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ, ವಿಪ್ರವೃಂದ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ)* ಪುನರ್ ನಿರ್ಮಾಣ, ಅ 15.:   ಗೋರೆಗಾಂವ್ ಪೂರ್ವದಲ್ಲಿ ನಂದಾದೀಪ ಆಡಿಟೋರಿಯಮ್ ನಲ್ಲಿ ಮನವಿಪತ್ರ ಬಿಡುಗಡೆ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ‘ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳ’ಸೆಪ್ಟೆಂಬರ್ 7ರಂದು ರಾಮಾಂಜನೇಯ ಯಕ್ಷಗಾನ ಪ್ರದರ್ಶನ – ಕುಮಟಾ ಗಣಪತಿ ನಾಯಕ್ ಅವರ ಆಂಜನೇಯನ ಪಾತ್ರ ಪ್ರಮುಖ ಆಕರ್ಷಣೆ

Mumbai News Desk

ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಪ :ಜ. 18ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಪರಿವಾರ ದೇವತೆಗಳಿಗೆ ದೀಪಾರಾಧನೆ.

Mumbai News Desk

ವರ್ಲಿ    ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್, ನ. 16 ರಂದು ಮಾಲೆ ಧಾರಣೆ , ಶಿಬಿರದಲ್ಲಿ ಅನ್ನದಾನ, ಪೂಜಾ ಕಾರ್ಯಗಳು ಪ್ರಾರಂಭ 

Mumbai News Desk

ದೇವಾಡಿಗ ಸಂಘ ಮುಂಬಯಿ: ಪೆ. 2 ರಂದು ಶ್ರೀರಾಮದೇವರ ಪೂಜೆಸ್ಥಾನದ ಪುನರ್ ಪ್ರತಿಷ್ಠೆ

Mumbai News Desk

ಉಡುಪಿ : ನೇಜಾರು ಶ್ರೀ ಭಗವತೀ ತೀಯಾ ಯುವ ಘಟಕದಿಂದ ಮೇ 24 ರಂದು ಭವ್ಯ ‘ಯುವ ಸಮ್ಮಿಲನ’ ಕಾರ್ಯಕ್ರಮ

Mumbai News Desk