September 6, 2026
Mumbai News Kannada
ತುಳುನಾಡು

ಕೋಡಿಕಲ್‌ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿಗಾರ್ ಆಯ್ಕೆ





ಮಂಗಳೂರು: ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಕೋಡಿಕಲ್‌ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್‌ನ ನೂತನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.

​ಮಾರ್ಚ್ 22ರಂದು ಸಂಘದ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಶೀನ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ನಾಯ್ಕ ಮಂಡಿಸಿದರು. ಸದಸ್ಯರು ಸರ್ವಾನುಮತದಿಂದ ಇದಕ್ಕೆ ಅನುಮೋದನೆ ನೀಡಿದರು.

ಆಯ್ಕೆಯಾದ ನೂತನ ಪದಾಧಿಕಾರಿಗಳ ವಿವರ:

  • ಗೌರವಾಧ್ಯಕ್ಷರು: ಯೋಗೀಶ್ ಕಲ್ಪನೆ
  • ಅಧ್ಯಕ್ಷರು: ರವಿಪ್ರಸಾದ್ ಶೆಟ್ಟಿಗಾರ್
  • ಉಪಾಧ್ಯಕ್ಷರು: ರಾಜೇಶ್ ಕುಡ್ಲ
  • ಪ್ರಧಾನ ಕಾರ್ಯದರ್ಶಿ: ದಿನೇಶ್ ಕೋಡಿಕಲ್
  • ಜೊತೆ ಕಾರ್ಯದರ್ಶಿ: ವಜ್ರೇಶ್ ಗಾಣಿಗ
  • ಕೋಶಾಧಿಕಾರಿ: ಶಿವಪ್ರಸಾದ್ ಶೆಟ್ಟಿ
  • ಗೌರವ ಸಲಹೆಗಾರರು: ಅಶೋಕ್ ಕಲ್ಪನೆ

​ಸಭೆಯಲ್ಲಿ ಒಟ್ಟು 10 ಜನರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಶಿವಪ್ರಸಾದ್ ಶೆಟ್ಟಿ ವಂದಿಸಿದರು.



Related posts

  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ  ಹೊರೆ ಕಾಣಿಕೆ   ಸಮರ್ಪಣೆ.

Mumbai News Desk

ಮುಲ್ಕಿ ಅರಸು ಕಂಬಳದಲ್ಲಿ ಗುತ್ತಿನಾರ್ ರವೀಂದ್ರ ಶೆಟ್ಟಿಯವರಿಗೆ ಸನ್ಮಾನ :

Mumbai News Desk

ಇಂದ್ರಾಳಿ ಮೇಲ್ಸೇತುವೆ ಸೆಪ್ಟೆಂಬರ್ 22 ವಾಹನ ಸಂಚಾರಕ್ಕೆ ಮುಕ್ತ, ಸೋಮವಾರದಿಂದಲೇ ಕೆಳ ಪರ್ಕಳ ರಸ್ತೆ ಕಾಮಗಾರಿ ಆರಂಭ : ಯಶ್ಪಾಲ್ ಸುವರ್ಣ

Mumbai News Desk

ಹೆಜಮಾಡಿ ಬಿಲ್ಲವರ ಸಂಘದ ಬ್ರಹ್ಮ ಶ್ರೀ ಗುರು ನಾರಾಯಣ ಜಯಂತಿ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಪಿ ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk

ಮೂಲ್ಕಿ ಪುನರೂರು ಶ್ರೀದೇವರ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ

Mumbai News Desk

ವಿಜ್ಞಾನದಲ್ಲಿ ಪ್ರಯೋಗಶೀಲತೆ ಅತಿ ಮುಖ್ಯ: ಸುರೇಶ್ ಶೆಟ್ಟಿ ನಾಡಿಯಾಳು ಗುತ್ತು

Mumbai News Desk