October 31, 2026
Mumbai News Kannada
ತುಳುನಾಡು

ವೃತ್ತಿಯೊಂದಿಗೆ ಸಮಾಜ ಸೇವೆ ಮಾದರಿ ಡಾ. ಹರಿಕೃಷ್ಣ ಪುನರೂರು



ಸಮಾಜದಲ್ಲಿ ಕಷ್ಟಗಳಿಗೆ ಸ್ಪಂದಿಸಿ ತನ್ನ ವೃತ್ತಿಯನ್ನು ಮಾಡುವುದು ಇತರರಿಗೆ ಆದರ್ಶವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.

ಅವರು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಹೊಸ ಅಂಗಣ ತಿಂಗಳ ಬೆಳಕು’ ಹಾಗೂ ಸಾಧಕರಾದ ಶಿವರಾಮ ಎಸ್. ಸುವರ್ಣರವರಿಗೆ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ‘ಮೊಗವೀರ’ ಮಾಸಿಕ ಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ ಮಾತನಾಡಿ, ಛಾಯಾಗ್ರಾಹಕ ಶಿವರಾಮ ಎಸ್. ಸುವರ್ಣರವರು ತಮ್ಮ ವೃತ್ತಿಯೊಂದಿಗೆ ಸಮಾಜಸೇವೆ ಮಾಡಿ ಇತರರಿಗೆ ಆದರ್ಶರಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮುಲ್ಕಿ ವಲಯದ ಅಧ್ಯಕ್ಷ ಶ್ರೀನಿವಾಸ ಬಪ್ಪನಾಡು ಉಪಸ್ಥಿತರಿದ್ದರು. ಚಿತ್ರಾಪು ಮೂಕಾಂಬಿಕಾ ಮಂದಿರದ ಕೇಶವಾನಂದ ಗುರೂಜಿ, ನಿವೃತ್ತ ಪ್ರಾಂಶುಪಾಲ ವೈ. ಎನ್. ಸಾಲ್ಯಾನ್, ಜೋನ್ ಕ್ವಾಡ್ರಾಸ್, ಅತಿಕಾರಿಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಮನೋಹರ ಕೋಟ್ಯಾನ್, ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ಸುರೇಂದ್ರ ಜಿ. ಶೆಣೈ, ಸರೋಜಿನಿ ಸುವರ್ಣ, ಶೇಖರ್ ಪಿ. ಪೂಜಾರಿ ಕೊಳಚಿಕಂಬಳ, ‘ಹೊಸ ಅಂಗಣ’ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ವಿಜಯಾ ಹರಿಶ್ಚಂದ್ರ ಸಾಲ್ಯಾನ್, ಗೀತಾ ಗಣೇಶ್, ಸಾಧು ಅಂಚನ್ ಮಟ್ಟು, ವಿಜಯ ಕುಮಾರ್ ಕುಬೆವೂರು ಮತ್ತಿತರರು ಹಾಜರಿದ್ದರು.

ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ಜೆಸಿ ದಿನೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.



Related posts

ಜೇಸಿಐ ಕಾಪು ನೇತೃತ್ವದಲ್ಲಿ ಕಾಪು ಕಡಲ ಕಿನಾರೆ ಸ್ವಚ್ಛತೆ: ತ್ಯಾಜ್ಯ ವಿಲೇವಾರಿ

Mumbai News Desk

ಇನ್ನಂಜೆ ಕನ್ನಡ ಮಾಧ್ಯಮ ಶಾಲೆಯ ಉಚಿತ ವಿದ್ಯಾಭ್ಯಾಸದ ಸಹಾಯಾರ್ಥವಾಗಿ  ಕ್ರಿಕೆಟ್ ಪಂದ್ಯಾಕೂಟ : ಶಾಲೆಗೆ ರೂಪಾಯಿ 1,67,875/ ಹಸ್ತಾಂತರ.

Mumbai News Desk

ಗರೋಡಿಗಳ ಚಾಕರಿ ವರ್ಗದವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಶ್ಲಾಘನೀಯ: ವಿನಯಕುಮಾರ್ ಸೊರಕೆ

Mumbai News Desk

ಯಕ್ಷಧ್ರುವ ಪಟ್ಲ ಸಂಭ್ರಮ ರಾಷ್ಟ್ರೀಯ ಕಲಾ ಸಮ್ಮೇಳನ

Mumbai News Desk

ಓಂ ಶ್ರೀ ಜಗದೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ.)ಯ ವತಿಯಿಂದ ಆಟಿದ ಪೊರ್ಲು ಕಾರ್ಯಕ್ರಮ

Mumbai News Desk

ಕೋಡಿಕಲ್; ವಿಶ್ವ ಭಾರತಿ ಫ್ರೆಂಡ್ ಸರ್ಕಲ್. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

Mumbai News Desk