33 C
Mumbai
October 5, 2026
Mumbai News Kannada
ಸುದ್ದಿ

ಗುಜರಾತ್ ಭರುಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಅದ್ದೂರಿಯ ಶ್ರೀ ಬಾಲಾಜಿ ವೆಂಕಟೇಶ್ವರ ಸ್ವಾಮಿ ಪ್ರಾಣಪ್ರತಿಷ್ಠೆ , ಬ್ರಹ್ಮಕಲಶೋತ್ಸವ , ಶ್ರೀನಿವಾಸ ಕಲ್ಯಾಣ.



ತಾಯಿಯ ಆಶೀರ್ವಾದದಿಂದ ಧಾರ್ಮಿಕ ಕಾರ್ಯದಲ್ಲಿಯೂ ತೊಡಗುವಂತಾಗಿದೆ – ರವಿನಾಥ್ ಶೆಟ್ಟಿ ತೋನ್ಸೆ

ಭರುಚ್ (ಗುಜರಾತ್‌) : ಮುಂಬಯಿಯಲ್ಲಿ ಹುಟ್ಟಿ ಬೆಳೆದ ನನಗೆ ಮೊದಲು ಧಾರ್ಮಿಕ ಸೇವೆಯ ಬಗ್ಗೆ ಅಷ್ಟೇನು ತಿಳಿದಿರಲಿಲ್ಲ. ನನ್ನ ತಾಯಿಯ ಆಶೀರ್ವಾದ, ಗುರುಹಿರಿಯರ ಬೆಂಬಲ ಹಾಗೂ ದೇವರ ಕೃಪೆಯಿಂದ ನಾನು ಉದ್ಯಮದೊಂದಿಗೆ ದೇವರ ಸೇವೆ ಮಾಡುವಂತಾಗಿದೆ ಎಂದು ಗುಜರಾತಿನ ಖ್ಯಾತ ಉದ್ಯಮಿ, ಸಮಾಜ ಸೇವಕ ಕೊಡುಗೈ ದಾನಿ ರವಿನಾಥ್ ಶೆಟ್ಟಿ ತೋನ್ಸೆ ನುಡಿದರು.

ಮೇ. 6 ರಿಂದ ಮೇ 12 ರ ತನಕ ಗುಜರಾತ್‌ನ ಇತಿಹಾಸ ಪ್ರಸಿದ್ದ ಭರುಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಅದ್ದೂರಿಯಾಗಿ ನಡೆದ ಭಗವಾನ್ ಶ್ರೀ ಬಾಲಾಜಿ ವೆಂಕಟೇಶ್ವರ ಸ್ವಾಮಿ ಪ್ರಾಣಪ್ರತಿಷ್ಠೆ / ಬ್ರಹ್ಮಕಲಶೋತ್ಸವ ಭಗವಾನ್ ಶ್ರೀ ವೇಣುಗೋಪಾಲ ಕೃಷ್ಣ ಶ್ರೀಮದ್ ಭಾಗವತ ಸಪ್ತಾಹ, ಸಂಪೂರ್ಣ ರಾಮಾಯಣ ನೃತ್ಯರೂಪಕಲಾ, ಶ್ರೀ ತಿರುಪತಿ ಬಾಲಾಜಿ ವಿವಾಹ ಮಹೋತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗುಜರಾತ್ ನಲ್ಲಿರುವ ಏಕೈಕ ತಿರುಪತಿ ದೇವಾಲಯ ಇದಾಗಿದ್ದು ಸುಮಾರು ಏಳು ವರ್ಷಕ್ಕೆ ಮೊದಲು ಇಲ್ಲಿ ದಾರ್ಮಿಕ ಕಾರ್ಯಕ್ರಮವನ್ನು ನಡೆಸುವ ಭಾಗ್ಯವೂ ನನಗೆ ದೊರಕಿದ್ದು ಇದೀಗ ಅದನ್ನು ಮುಂದುವರಿಸಿರುವೆನು. ದೇವರ ಇಚ್ಚೆಯಂತೆ ದೇವಸ್ಥಾನವನ್ನು ನಿರ್ಮಿಸಿ ಮಠದವರಿಗೆ ನೀಡುವುದರ ಮೂಲಕ ನನ್ನ ಪರಿವಾರದವರೊಂದಿಗೆ ಲೋಕಾರ್ಪಣೆ ಮಾಡಿರುವೆನು. ಇಲ್ಲಿ ನಮ್ಮ ಊರಿನ ಪುರೋಹಿತರು ಪೂಜೆ ಮಾಡುವುದರೊಂದಿಗೆ ಎಲ್ಲಾ ಧಾರ್ಮಿಕ ಕಾರ್ಯಗಳು ನಮ್ಮ ಊರಿನ ಕ್ರಮದಲ್ಲೇ ನಡೆಯುವುದು ಎಂದರು.

ರವಿನಾಥ್ ಶೆಟ್ಟಿ ತೋನ್ಸೆ ಯವರು ಹಲವು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಈ ಮಂದಿರದಲ್ಲಿ ತಿರುಪತಿಯ ಬಾಲಾಜಿ ಮಾತ್ರವಲ್ಲದೆ, ಗೋಶಾಲೆ, ಕೃಷ್ಣ ಮಂದಿರ, ನಾಗದೇವರ ಪ್ರತಿಮೆಗಳೂ ಇದ್ದು ಕಾರ್ಕಳದಿಂದ ಕಲ್ಲನ್ನು ತರಿಸಿದ್ದು ಶ್ರೀ ಗುಮನ್ ದೇವ್ ಮಂದಿರದಲ್ಲಿ ಮಂದಿರವು ದಕ್ಷಿಣ ಕನ್ನಡ ಜಿಲ್ಲೆಯ ಶೈಲಿಯಲ್ಲಿದೆ.

ಮೇ 6 ರಂದು ಅಪರಾಹ್ನ ವಿನೋದಾ ಬಾಯಿ ಶಾಸ್ತ್ರಿ ಯವರಿಂದ ಶ್ರೀಮದ್ ಭಗವತ್ ಕಥಾ ಪೂರ್ತಿ ಯಾತ್ರಾ ನಡೆಯಿತು. ಮರುದಿನ ಶ್ರೀಮದ್ ಭಗವತ್ ಕಥಾ ನಡೆಯಿತು. ಮೇ 8 ರಂದು ಅಪರಾಹ್ನ 3ರಿಂದ ತಿರುಪತಿ ಬಾಲಾಜಿ ಮತ್ತು ಭಗವಾನ್ ಗೋಪಾಲಕೃಷ್ಣ ವಿಗ್ರಹಗಳ ವೈಭವಯುತ ಮೆರವಣಿಗೆಯ ಶೋಭ ಯಾತ್ರೆ ನಡೆಯಿತು. ಶ್ರೀಮದ್ ಭಗವತ್ ಕಥಾ ನಂತರ ಸಂಜೆ ಹೊಸದಾಗಿ ನಿರ್ಮಿಸಿದ ಕಲ್ಲಿನ ಗರ್ಭಗ್ರಹ ದೇವತಾಪ್ರಾರ್ಥನೆ, ತೋರಣ ಪ್ರತಿಷ್ಠೆ, ಉಗ್ರಾಣ ಮುಹೂರ್ತಂ, ಗೋಪೂಜಂ, ಪ್ರಸಾದ ಶುದ್ಧಿ, ರಕ್ಷೋಘ್ನ ಹವನ, ವಾಸ್ತು ಪೂಜೆ ನಡೆದು ಮಹಾಪ್ರಸಾದ ವಿತರಣೆ ಮಾಡಲಾಯಿತು. ರಾತ್ರಿ 8 ರಿಂದ ಹನುಮಾನ್ ಚಾಲೀಸಾ ಪಠಣೆ ನಡೆಯಿತು. ಮೇ 9 ರಂದು ಬೆಳಿಗ್ಗೆ 9ಕ್ಕೆ ಮಹಾಗಣಪತಿ ಹವನ, ರಾಮ ಮಂತ್ರ ಹವನ ನೇತ್ರೋನ್ಮೀಲನಂ, ಬಿಂಬ ಶುದ್ಧಿ ಕಲಶಾಭಿಷೇಕಂ ಶಯ್ಯಕಲ್ಪಂ ನಂತರ ಅಪರಾಹ್ನ 3 ರಿಂದ 5 ರವರೆಗೆ ಶ್ರೀಮದ್ ಭಗವತ್ ಕಥಾ, ಸಂಜೆ 5 ರಿಂದ ಚಕ್ರಾಬ್ಜ ಮಂಡಲ ಪೂಜೆ, ಶಾಂತಿ ಹವನ, ರತ್ನಾಷ್ಟಬಂಧ ​​ಅಧಿವಾಸ ಹವನ, ಬಾಲಾಜಿಯ ಬಿಂಬಾದಿವಾಸ, ಗೋಪಾಲಕೃಷ್ಣ & ನಾಗದೇವತೆ, ಶಿಖರಾಧಿವಾಸ, ರಾತ್ರಿ 9.30 ಕ್ಕೆ ಭಜನೆ ಮತ್ತು ಗರ್ಬಾ ನೃತ್ಯ ನಡೆಯಿತು. ಭಾನುವಾರ ಮೇ 10 ರಂದು ಬೆಳಿಗ್ಗೆ 9ಕ್ಕೆ ನವಗ್ರಹ ಹವನ ನಂತರ ಶುಭ ಮುಹೂರ್ತ – ಶಿಖರ ಪ್ರತಿಷ್ಠಾ ನಂತರ ಭಗವಾನ್ ತಿರುಪತಿ ಬಾಲಾಜಿ ಮೂರ್ತಿ ಪ್ರತಿಷ್ಠಾ, ಭಗವಾನ್ ಗೋಪಾಲಕೃಷ್ಣ ಮೂರ್ತಿ ಪ್ರತಿಷ್ಠಾ ನಾಗದೇವತಾ ಮೂರ್ತಿ ಪ್ರತಿಷ್ಠಾ ಅಷ್ಟಬಂಧ ​​ಲೇಪನಂ, ಪ್ರಾಣ ಪ್ರತಿಷ್ಠಾ ಶಾಂತಿ ಪ್ರಾಯಶ್ಚಿತ್ ಹವನ, ಕಲಶಾಭಿಷೇಕ, ಪ್ರಸನ್ನ ಪೂಜೆ ಮಧ್ಯಾಹ್ನ ಮಹಾಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ 3ರಿಂದ 4 ರವರೆಗೆ ಶ್ರೀಮದ್ ಭಗವತ್ ಕಥಾ, 4 ರಿಂದ ಅಖಾಡ ಫಲವನ್ ಮಲ್ ಯುದ್ಧ್ (ಕುಸ್ತಿ), ನಂತರ ದೀಪಾರಾಧನೆ, ಮಂಟಪ ಸಂಸ್ಕಾರ ಸಂಜೆ 7ಕ್ಕೆ ಭಾವ ತರಂಗ್ ಅಕಾಡೆಮಿ ಮತ್ತು ತಂಡದ ನಿರ್ದೇಶಕಿ ಮತ್ತು ಸಂಸ್ಥಾಪಕಿ ವಿಧುಷಿ ಮನಿಷಾ ಅವರಿಂದ ಸಂಪೂರ್ಣ ರಾಮಾಯಣ ನೃತ್ಯರೂಪಕಲಾ ನಡೆಯಿತು. ಮೇ 11 ರಂದು ಬೆಳಗ್ಗೆ 8 ರಿಂದ ತತ್ವ ಹವನ, ಮಹಾವಿಷ್ಣು ಯಾಗ, ಕಳಸ ಅಭಿಷೇಕ, ಮತ್ತು ಪ್ರಸನ್ನ ಪೂಜೆ, ಅಪರಾಹ್ನ 3 ರಿಂದ 5 ತನಕ ಮಂಡಲ ಪೂಜೆ, ಕಳಸಹಾರಾಧನೆ ಬ್ರಹ್ಮಕಲಶ ಅಧಿವಾಸ, ಅಧಿವಾಸ ಹವನ, ರಾತ್ರಿ 8 ರಿಂದ ಲಾತೂರಿ ಲಾತ್ ಅವರಿಂದ ಹಾಸ್ಯ ಕಲಾಕಾರ್ ಕಾರ್ಯಕ್ರಮ ನಡೆದಿದ್ದು ಮೇ 12 ರಂದು ಬೆಳಿಗ್ಗೆ 9 ರಿದ ಕಲಶಾಭಿಷೇಕದ ಆರಂಭ, ಬೆಳಗ್ಗೆ 10 ರಿಂದ ಬ್ರಹ್ಮಕಲಶಾಭಿಷೇಕ ತಿರುಪತಿ ಬಾಲಾಜಿಯಲ್ಲಿ ಗೋಪಾಲಕೃಷ್ಣ ಮತ್ತು ನಾಗದೇವತಾ ಕಲಾಶಾಭಿಷೇಕ ಪ್ರಸನ್ನ ಪೂಜೆ, ಮಧ್ಯಾಹ್ನ 1 ರಿಂದ ಮಹಾಪ್ರಸಾದ ವಿತರಣೆ. ಅಪರಾಹ್ನ 3 ರಿಂದ ಶ್ರೀ ಮಹಂತ್ ಶ್ರೀ ಮತ್ತು ಸಾಧು ಸಂತರ ಆಶೀರ್ವಚನ, ಸಂಜೆ 4ರಿಂದ ಶ್ರೀಮದ್ ಭಗವತ್ ಕಥಾ ಸಮಾಪನ. ಸಂಜೆ 6 ರಿಂದ ಅದ್ದೂರಿಯ ಶ್ರೀನಿವಾಸ ಕಲ್ಯಾಣೋತ್ಸವ (ಶ್ರೀ ತಿರುಪತಿ ಬಾಲಾಜಿ ವಿವಾಹ ಮಹೋತ್ಸವ), ಸಂಜೆ 7.45 ಮಹಾಪ್ರಸಾದ ವಿತರಣೆ ನಡೆಯಿತು.
ಎಲ್ಲಾ ಧರ್ಮಿಕ ಕಾರ್ಯಗಳು ಅಂಕಲೇಶ್ವರದ ಖ್ಯಾತ ಉದ್ಯಮಿಗಳೂ ಆದ ರವಿನಾಥ್ ಶೆಟ್ಟಿ ತೋನ್ಸೆ ಮತ್ತು ಪರಿವಾರ ಮತ್ತು ಗುಮನ್ ದೇವ್ ಪೀಠಾದೀಶರಾದ ಮಹಂತ್ ಶ್ರೀ ಮನಮೋಹನ್ ದಾಸ್ ಜೀ ಇವರ ನೇತೃತ್ವದಲ್ಲಿ ದೇವೀ ದಾಮೋದರ ದಾಸ್ ಜೀ ದವೆ, ಶ್ರೀಮತಿ ಲಕ್ಷ್ಮೀ ವಿಶ್ವನಾಥ ಶೆಟ್ಟಿ ಮತ್ತು ಶ್ರೀಮತಿ ರಾಮ್ ರತಿ ಬಾಯಿ ಮಖನ್ ಲಾಲ್ ಜೀ ಹರ್ದೇನಿಯಾ ಇವರ ಶುಭಾಶ್ರೀರ್ವಾದದೊಂದಿಗೆ ನಡೆದಿದ್ದು, ಗುಜರಾತ್‌ನಲ್ಲಿ ಮೊದಲ ಬಾರಿಗೆ ಇಂತಹ ಮಹತ್ವದ ಧಾರ್ಮಿಕ ಕಾರ್ಯಕ್ರಮವನ್ನು ತಿರುಮಲ ತಿರುಪತಿ ದೇವಸ್ಥಾನಗಳ ಪ್ರತಿಷ್ಠಿತ ಪುರೋಹಿತರು ಮತ್ತು ವೈದಿಕ ವಿದ್ವಾಂಸರ ಮಾರ್ಗದರ್ಶನದಲ್ಲಿ ನೆರವೇರಿಸಲಾಗಿದ್ದು ಸುಮಾರು 50 ಮಂದಿ ಸಂತರು ಆಗಮಿಸಿದ್ದರು. ಸ್ಥಳೀಯ ಹಾಗೂ ಊರಿನ ನೂರಾರು ರಾಜಕೀಯ ಧುರೀಣರು, ಉದ್ಯಮಿಗಳು, ಸಮಾಜ ಸೇವಕರು, ಗಣ್ಯರು ಹಾಗೂ ಧಾರ್ಮಿಕ ಮುಂದಾಳುಗಳು ಸೇರಿ ಸುಮಾರು ಎಪ್ಪತ್ತು ಸಾವಿರ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಬ್ರಹ್ಮಕಲಶೋತ್ಸವ ಮತ್ತು ಇತರ ಪವಿತ್ರ ಆಚರಣೆಗಳ ಮೊದಲು ಪ್ರಾಣ ಪ್ರತಿಷ್ಠೆಯನ್ನು ಗುರು ಶ್ರೀ ರಾಮಲಕ್ಷ್ಮಣ ದಾಸ್ ಜಿಯವರ ಆಶೀರ್ವಾದದೊಂದಿಗೆ, ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯಿತು. ಶ್ರೀನಿವಾಸ ಕಲ್ಯಾಣೋತ್ಸವವನ್ನು ತಿರುಪತಿಯ ಅರ್ಚಕ ಡಾ. ಎನ್. ಕೆ. ವಿಷ್ಣುವರ್ಧನ್ ಅವರು ನೆರವೇರಿಸಿದರು. ಪೂಜಾ ವಿಧಿಯಲ್ಲಿ ರವಿನಾಥ್ ಶೆಟ್ಟಿ ತೋನ್ಸೆ, ತಾಯಿ ಲಕ್ಷ್ಮೀ ವಿಶ್ವನಾಥ ಶೆಟ್ಟಿ, ಪತ್ನಿ ಭಾರತಿ ಶೆಟ್ಟಿ, ಅಳಿಯ ಪಾರಿತೋಷ್ ರಾಮಕೃಷ್ಣ ಶೆಟ್ಟಿ, ಪುತ್ರಿಯರಾದ ಡಾ. ಆಸ್ನ ಪಿ. ಶೆಟ್ಟಿ ಮತ್ತು ಕು. ಅಸ್ತ ಹಾಗೂ ಮಾವ ಮುಂಬಯಿಯ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಬಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪಂಕಜ್ ದಾಮೋದರದಾಸ್ ಮೋದಿ ವಿಶೇಷ ಅತಿಥಿಯಾಗಿ ಆಗಮಿಸಿದ್ದು, ಉಡುಪಿಯ ಶಾಸಕ ಯಶ್ಪಾಲ್ ಸುವರ್ಣ, ಮಧ್ಯ ಪ್ರದೇಶದ ಮಾಜಿ ಗ್ರಹ ಸಚಿವ ಬಾಳ ಬಚ್ಚನ್, ಗುಜರಾತ್ ನ ನೀರಾವರಿ ಸಚಿವ ಈಶ್ವರ ಸಿಂಗ್ ಠಾಕೋರ್ಬಾಯಿ ಪಟೇಲ್, ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕಲಾವಿದ ಮೋಹನ್ ರೈ ಕರ್ನೂರು, ದಾಮೋದರ ಶೆಟ್ಟಿ ಮೀರಾರೋಡ್, ದಿವಾಕರ ಶೆಟ್ಟಿ ಸಾಯಿಬಾಬ ಮಂದಿರ ಕೊಡವೂರು, ನವೀನ್ ಶೆಟ್ಟಿ ನಿತ್ಯಾನಂದ ಮಂದಿರ ಉಡುಪಿ, ಮುಂಬಯಿ, ಬಂಟರ ಸಂಘ ತೋನ್ಸೆಯ ಅಧ್ಯಕ್ಷರಾದ ಮನೋಹರ ಶೆಟ್ಟಿ, ಉಡುಪಿಯ ಉದ್ಯಮಿ ವಿಕ್ರಾಂತ್ ಶೆಟ್ಟಿ, ರವಿ ಪೂಜಾರಿ ಮೀರಾ ರೋಡ್, ಸೂರತ್ ನ ರಾಧಾಕೃಷ್ಣ ಶೆಟ್ಟಿ, ರಾಮಚಂದ್ರ ಶೆಟ್ಟಿ, ಜಯಂತ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಗುಜರಾತ್ ಪಟ್ಲ ಪೌಂಡೇಶನ್ ನ ಅಧ್ಯಕ್ಷ ಅಜಿತ್ ಶೆಟ್ಟಿ, ನವೀನ್ ಶೆಟ್ಟಿ, ಮಿಜಾರು, ಕಿಶೋರ್ ಕುಮಾರ್ ಕುತ್ಯಾರ್, ಅಂಕಲೇಶ್ವರ ತುಳು ಸಂಘದ ಅಧ್ಯಕ್ಷ ಶಂಕರ ಕೆ ಶೆಟ್ಟಿ, ಕಾರ್ಯದರ್ಶಿ ರಾಮಕೃಷ್ಣ ಗಾಂಭೀರ್, ಕೋಶಾಧಿಕಾರಿ ಶಂಕರ ಆರ್ ಶೆಟ್ಟಿ, ಅಲ್ಲದೆ ಹರೀಶ್ ಶೆಟ್ಟಿ ಹೆಬ್ರಿ, ಪುಷ್ಪನಾಥ್ ಶೆಟ್ಟಿ, ಸತೀಶ್ ಶೆಟ್ಟಿ, ರವಿ ಶೆಟ್ಟಿ, ಗಣಪತಿ ಆಚಾರ್ಯ, ದೀಕ್ಷಿತ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಕಿರಣ್ ಶೆಟ್ಟಿ, ಪ್ರತಾಪ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಮನೋಜ್ ಪೂಜಾರಿ ಭರೂಚ್ ಮೊದಲಾದವರು ಉಪಸ್ಥಿತರಿದ್ದು ಎಲ್ಲಾ ಕಾರ್ಯಕ್ರಮಕ್ಕೆ ಸಹಕರಿಸಿದರು.

===
ದಕ್ಶಿಣ ಭಾರತದ ಧಾರ್ಮಿಕ ಕ್ಷೇತ್ರವನ್ನು ಗುಜರಾತ್ ನಲ್ಲಿ ನೆಲೆಯುರುವಂತೆ ಮಾಡಿದ ರವಿನಾಥ್ ಶೆಟ್ಟಿ ತೋನ್ಸೆ – ಮೋದಿ ಪ್ರಶಂಸೆ
ತಿರುಪತಿ ವೆಂಕಟೇಶನ ಧರ್ಶನ ಮಾಡಲು ತಿರುಪತಿಗೆ ಹೋಗಲು ಅಸಾಧ್ಯವಾದವರಿಗೆ ಭರುಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಅವಕಾಶವಿದೆ. ಇಲ್ಲಿ ತಿರುಪತಿ ದರ್ಶನ ಮಾಡಬಹುದಾಗಿದೆ. ದಕ್ಷಿಣ ಕನ್ನಡದಿಂದ ಗುಜಾರಾತ್ ಗೆ ಬಂದು ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ಅದೆಷ್ಟೋ ಸ್ಥಳೀಯರಿಗೆ ಉದ್ಯೋಗ ನೀಡುವುದರೊಂದಿಗೆ ಕೆಲವು ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಗುಮನ್ ದೇವ್ ಮಂದಿರ ನಿರ್ಮಿಸಿ ಅದರ ಭ್ರಹ್ಮ ಕಲಶ ಮಾಡಿ ಲೋಕಾರ್ಪಣೆ ಮಾಡಿದ ಕೀರ್ತಿ ರವಿನಾಥ್ ಶೆಟ್ಟಿ ತೋನ್ಸೆ ಪರಿವಾರಕ್ಕೆ ಸಲ್ಲುತ್ತದೆ. ಎರಡನೇ ಬಾರಿ ನಾನು ಈ ದೇವಸ್ಥಾನಕ್ಕೆ ಬಂದಿದ್ದು ರವಿನಾಥ್ ಶೆಟ್ಟಿ ತೋನ್ಸೆ ಯವರ ಧಾರ್ಮಿಕ ಹಾಗೂ ಸಮಾಜ ಸೇವೆಯನ್ನು ಮೆಚ್ಚಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪಂಕಜ್ ದಾಮೋದರದಾಸ್ ಮೋದಿ ನುಡಿದರು.



Related posts

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ, ಕಟೀಲ್ ಕ್ಷೇತ್ರದಲ್ಲಿ ವಿಶೇಷ ಪೂಜೆ.

Mumbai News Desk

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

Mumbai News Desk

ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶ್ರೀ ದೇವೀ ಜಪಪಾರಾಯಣ ಸಂಪನ್ನ

Mumbai News Desk

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ, ಬಿ ಜೆ ಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು

Mumbai News Desk

ಭಿವಂಡಿ:ಹಿರಿಯ ಹೋಟೆಲ್ ಉದ್ಯಮಿ ಸಮಾಜ ಸೇವಕ ದೇವು ಎಸ್ ಪೂಜಾರಿ ನಿಧನ

Mumbai News Desk

19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ – 2024

Mumbai News Desk