32 C
Mumbai
September 27, 2026
Mumbai News Kannada
ಪ್ರಕಟಣೆ

ಮುಂಬೈ ಘಾಟ್‌ಕೋಪರ್‌ನ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಜೂನ್ 26 ರಂದು ಶ್ರೀ ದೇವಿಯ ದರ್ಶನ ಸೇವೆ ಮತ್ತು ಅನ್ನಸಂತರ್ಪಣೆ



ಮುಂಬೈನ ಘಾಟ್‌ಕೋಪರ್ ಪಶ್ಚಿಮದ ಅಸಲ್ಪಾದ ಎನ್.ಎಸ್.ಎಸ್. ರಸ್ತೆಯಲ್ಲಿರುವ ಪ್ರಸಿದ್ಧ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಮಂದಿರದಲ್ಲಿ ಶ್ರೀ ದೇವಿಯ ದರ್ಶನ ಸೇವೆಯು ಕೊನೆಯ ಶುಕ್ರವಾರ ಜರುಗಲಿದ್ದು, ಈ ಅಪರೂಪದ ಧಾರ್ಮಿಕ ವಿಧಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಶ್ರೀ ದೇವಿಯ ಆವೇಶ ಭರಿತ ದರ್ಶನ ನೀಡಲು ಊರಿನ ಕಟಪಾಡಿಯ ಚೌಡೇಶ್ವರಿ ದೇವಸ್ಥಾನದ ಪಾತ್ರಿಗಳಾಗಿರುವ ಶ್ರೀ ಸಚಿನ್ ಶೆಟ್ಟಿ ಅವರು ಆಗಮಿಸುತ್ತಿದ್ದು, ದೇವಸ್ಥಾನದ ದೇವಿ ಪಾತ್ರಿಗಳಾಗಿ ದರ್ಶನ ಸೇವೆಯನ್ನು ನಡೆಸಿ ಕೊಡಲಿದ್ದಾರೆ.


ದಿನಾಂಕ 26-06-2026 ರಂದು ಈ ಶ್ರೀ ದೇವಿಯ ಭವ್ಯ ದರ್ಶನ ಸೇವೆಯು ಜರುಗಲಿದ್ದು, ಭಕ್ತಾಧಿಗಳು ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ರಾತ್ರಿ 8.00 ಗಂಟೆಗೆ ಸರಿಯಾಗಿ ದೇವಸ್ಥಾನದಲ್ಲಿ ಉಪಸ್ಥಿತರಿದ್ದು ದರ್ಶನ ಸೇವೆಯಲ್ಲಿ ಭಾಗವಹಿಸಿ ತನು-ಮನ-ಧನಗಳಿಂದ ಪುನೀತರಾಗಬೇಕಾಗಿ ವಿನಂತಿಸಲಾಗಿದೆ. ಇದೇ ಶುಭ ದಿನದಂದು ದೇವಸ್ಥಾನದ ಕಾರ್ಯಕರ್ತರೂ ಆಗಿರುವ ಖ್ಯಾತ ಹೋಟೆಲ್ ಉದ್ಯಮಿ ಹಾಗೂ ಕೊಡುಗೆ ದಾನಿಗಳಾಗಿರುವ ಶ್ರೀ ರಮಾನಾಥ್ ಕೋಟ್ಯಾನ್ ಅವರ ಕುಟುಂಬಸ್ಥರ ಪರವಾಗಿ ವಿಶೇಷ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.

ಭಕ್ತ ಮಹಾಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅನ್ನ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಕ್ಷೇತ್ರ ಮಾತೆ ಗೀತಾಂಬಿಕೆಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಅಧ್ಯಕ್ಷರು, ಗೌರವಾಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮಹಿಳಾ ವಿಭಾಗದ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂಪರ್ಕಕ್ಕಾಗಿ ಭಕ್ತರು 9867143299 ಮತ್ತು 9594930536 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.



Related posts

ಬಂಟರ ಸಂಘ ಮುಂಬಯಿ: ವಸಾಯಿ-ಡಹಾಣು ಪ್ರಾದೇಶಿಕ ಸಮಿತಿ : ಜೂ. 16 ರಂದು  ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ವಿದ್ಯಾರ್ಥಿವೇತನ, ದತ್ತು ಸ್ವೀಕಾರ, ವಿಧವಾವೇತನ, ಅಂಗವಿಕಲರಿಗೆ ಆರ್ಥಿಕ ನೆರವು ವಿತರಣೆ

Mumbai News Desk

ಸೆ.7 ರಂದು ಕಲ್ಯಾಣ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಭವ್ಯ ಸಮಾರಂಭ

Mumbai News Desk

ಜೂ.1ರಂದು ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ ಹುಟ್ಟೂರು ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಆರ್ಥಿಕ ನೆರವು ಕಾರ್ಯಕ್ರಮ.

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಸೆ. 27 ರಂದು ನವರಾತ್ರಿ ಉತ್ಸವ .ಯಕ್ಷಗಾನ ತಾಳಮದ್ದಳೆ, ದಾಂಡಿಯಾ ರಾಸ್

Mumbai News Desk

ಫೆ. 08 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ನಾಲ್ಕನೇ ವರ್ಷದ ರಕ್ತದಾನ ಶಿಬಿರ.

Mumbai News Desk

ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿಜ.20ಕ್ಕೆ ಸುವರ್ಣ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ.

Mumbai News Desk