September 23, 2026
Mumbai News Kannada
ಪ್ರಕಟಣೆ

ಮುಂಬೈನಲ್ಲಿ ಆಗಸ್ಟ್ 9ಕ್ಕೆ ಕದಿಕೆ ಮೊಗವೀರ ಮಹಿಳಾ ಸಭಾದ ಆಯೋಜನೆಯಲ್ಲಿ ‘ಆಟಿಡ್ ಒಂಜಿ ದಿನ’ ಸಂಭ್ರಮ:



ಕದಿಕೆ ಮೊಗವೀರ ಸಭಾ ಮುಂಬೈ (ರಿ.) ಹಾಗೂ ಕದಿಕೆ ಮೊಗವೀರ ಮಹಿಳಾ ಸಭಾ ಮುಂಬೈ ಇವುಗಳ ಜಂಟಿ ಆಶ್ರಯದಲ್ಲಿ ತುಳುನಾಡಿನ ಸಾಂಪ್ರದಾಯಿಕ ವೈಭವ, ಸಂಸ್ಕೃತಿ ಮತ್ತು ವಿಶಿಷ್ಟ ಖಾದ್ಯಗಳ ಸಂಭ್ರಮದ “ಆಟಿಡ್ ಒಂಜಿ ದಿನ” ಕಾರ್ಯಕ್ರಮವು ಇದೇ ಆಗಸ್ಟ್ 9, 2026ರ ರವಿವಾರದಂದು ಸಂಜೆ 4:00 ಗಂಟೆಯಿಂದ ಮುಂಬೈನ ಅಂಧೇರಿ (ಪಶ್ಚಿಮ) ಎಂವಿಎಂ ಕ್ಯಾಂಪಸ್ ಮಾರ್ಗದಲ್ಲಿರುವ ಮೊಗವೀರ ಭವನದ 2ನೇ ಮಹಡಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.


ಈ ವೈಭವೋಪೇತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಕವಿತಾ ವೇದಪ್ರಕಾಶ್ ಶ್ರೀಯಾನ್ ಹಾಗೂ ಶ್ರೀ ವೇದಪ್ರಕಾಶ್ ಶ್ರೀಯಾನ್ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಕದಿಕೆ ಮೊಗವೀರ ಮಹಾಸಭಾ ಸಸಿಹಿತ್ಲು , (ದಕ್ಷಿಣ ಕನ್ನಡ) ಇದರ ಅಧ್ಯಕ್ಷರಾದ ಗಿರೀಶ್ ಶ್ರೀಯಾನ್ ಮತ್ತು ಕದಿಕೆ ಮೊಗವೀರ ಮಹಿಳಾ ಸಭಾ ಸಸಿಹಿತ್ಲು (ದಕ್ಷಿಣ ಕನ್ನಡ) , ಇದರ ಅಧ್ಯಕ್ಷರಾದ ಶ್ರೀಮತಿ ಸವಿತಾ ಯು. ಸಸಿಹಿತ್ಲು ಉಪಸ್ಥಿತರಿರಲಿದ್ದಾರೆ.
ಕದಿಕೆ ಮೊಗವೀರ ಸಭಾ ಮುಂಬೈನ ಅಧ್ಯಕ್ಷರಾದ ಶ್ರೀ ದೇವ್‌ರಾಜ್ ಕುಂದರ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸುನಿಲ್ ಪುತ್ರನ್, ಗೌರವ ಕೋಶಾಧಿಕಾರಿ ಶ್ರೀಮತಿ ನೀತಾ ಕರ್ಕೇರ ಹಾಗೂ ಕದಿಕೆ ಮೊಗವೀರ ಮಹಿಳಾ ಸಭಾ ಮುಂಬೈನ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ (ಮಮತಾ) ನಿರುಲ್ಕರ್, ಗೌರವ ಕಾರ್ಯದರ್ಶಿ ಶ್ರೀಮತಿ ಅಮಿತಾ ಶ್ರೀಯಾನ್ ಮತ್ತು ಗೌರವ ಕೋಶಾಧಿಕಾರಿ ಶ್ರೀಮತಿ ಹರಿಣ ಅಮಿನ್ ಅವರು ಸರ್ವರನ್ನೂ ಹಾರ್ದಿಕವಾಗಿ ಆಹ್ವಾನಿಸಿದ್ದಾರೆ. ಸಮಾರಂಭದ ಕೊನೆಯಲ್ಲಿ ಸೌಹಾರ್ದಯುತ ರಾತ್ರಿಯ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.



Related posts

ಮಾ.7: ಸಸಿಹಿತ್ಲು ಭಗವತಿಗೆ ಕಲಾಸೌರಭದ ಸ್ವರ ಸಂಗೀತಾಭಿಷೇಕಂ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) : ಸೆ. 5 ರಂದು 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ

Mumbai News Desk

ಸೆ.21.ಶ್ರೀ ಸಾಯಿಬಾಬಾ ಪೂಜಾ ಸಮಿತಿ,ಕಾಲಘೋಡ (ರಿ).ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ, 31ನೇ ವಾರ್ಷಿಕ ಮಹಾಸಭೆ.

Mumbai News Desk

ಶ್ರೀ ವಿಠೋಬ ಗೋಪಾಲಕ್ರಷ್ಣ ಭಜನಾ ಮಂದಿರ ಹೆಜಮಾಡಿ : ಎ. 21(ಇಂದು) ರಂದು ವಾರ್ಷಿಕ ಮಂಗಳೋತ್ಸವ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ

Mumbai News Desk

ಶ್ರೀ ಅಯ್ಯಪ್ಪ ಸೇವ ಸಮಿತಿ, ಕಿಸನ್ ನಗರ ಥಾಣೆ – ಡಿ.16, ಮತ್ತು 17ರಂದು 23ನೇ ವಾರ್ಷಿಕ ಮಹಾಪೂಜೆ.

Mumbai News Desk

ಆಗಸ್ಟ್ 10 ರಂದು ಡೊಂಬಿವಲಿಯಲ್ಲಿ ‘ಚತುರ್ಜನ್ಮ ಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk