31 C
Mumbai
September 21, 2026
Mumbai News Kannada
ಮುಂಬಯಿ

ಪಡುಬಿದ್ರಿ (ಕಡಿಪಟ್ಣ) ಮೊಗವೀರ ಮಹಾಸಭಾ – ಮುಂಬಯಿ ವಾರ್ಷಿಕ ಮಹಾಸಬೆ




ಪಡುಬಿದ್ರಿ (ಕಡಿಪಟ್ಣ) ಮೋಗವೀರ ಮಹಾಸಭಾ, ಮುಂಬಯಿ ಇದರ ವಾರ್ಷಿಕ ಮಹಾಸಭೆಯು ವಿಜಯ ಕೆ. ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಸೆಪ್ಟೆಂಬರ್ 13, 2026 ರಂದು ಬೆಳಿಗ್ಗೆ 9.30 ನೆರವೇರಿತು..
ಗೌರವ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕಾಂಚನ್ ಗತವರ್ಷದ ವರದಿಯನ್ನು ಮಂಡಿಸಿದರು, ಕೋಶಾಧಿಕಾರಿ ಹೇಮಂತ್ ಮೆಂಡನ್ ಅವರು ಆಯವ್ಯಯ ಪಟ್ಟಿಯನ್ನು ಸಭೆಗೆ ಮಂಡಿಸಿದರು. ಅವುಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ನಂತರ 2025-26 ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ, ಹೆಚ್.ಎಸ್.ಸಿ, ಪದವಿ ಹಾಗೂ ಇನ್ನಿತರ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮುಂಬಯಿ ಸಭೆಯ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಉಪಾಧ್ಯಕ್ಷರಾದ ಶಶಿಕಾಂತ್ ಕೊಟ್ಯಾನ್ ಸಭೆಯ ಪರವಾಗಿ ವಿತರನೆ ಮಾಡಿದರು. .
ಪಡುಬಿದ್ರಿ (ಕಡಿಪಟ್ಣ) ಮೊಗವೀರ ವೆಲ್ಫೇರ್ ಅಸೋಸಿಯೇಷನ್ (ರಿ.) ನಿಂದ ಊರಿನ
ಮತ್ತು ಮುಂಬಯಿ ಸಭೆಯ ಸದಾಸ್ಯರಿಗೆ ವೈದ್ಯಕೀಯ ನೆರವಿಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಅಧೀರ್ಕವಾಗಿ ಹಿಂದುಳಿದ ಕುಟುಂಬಗಳಿಗೆ ವೈದ್ಯಕೀಯ ನೆರವುಗಳನ್ನು ನೀಡಲಾಯಿತು.
ಮುಂದಿನ 2 ವರ್ಷಗಳ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ವಿಜಯ ಕೆ.ಸಾಲ್ಯಾನ್, ಉಪಾಧ್ಯಕ್ಷರಾಗಿ ಶಶಿಕಾಂತ್ ಕೊಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಮಹೇಂದ್ರ ಕಾಂಚನ್, ಜೊತೆ ಕಾರ್ಯದರ್ಶಿಯಾಗಿ ಯುವರಾಜ್ ಶ್ರೀಯಾನ್, ಕೋಶಾಧಿಕಾರಿ ಹೇಮಂತ್ ಮೆಂಡನ್, ಜೊತೆ ಕೋಶಾಧಿಕಾರಿ ಕಿಶೋರ್ ಕಾಂಚನ್, ಸಮಿತಿ ಸದಾಸ್ಯರಾಗಿ ಗಣೇಶ ಬಂಗೇರ, ನಾರಾಯಣ ಕೋಟ್ಯಾನ್, ದೀಪಕ್ ಪುತ್ರನ್, ನಾಗರಾಜ ಅಮೀನ್, ಪ್ರಕಾಶ್ ಪುತ್ರನ್, ಯಶವಂತ್ ಕರ್ಕೇರಾ, ಪ್ರಜ್ವಲ್ ಸಾಲ್ಯಾನ್, ಶರತ್ ಸಾಲ್ಯಾನ್, ಲಕ್ಷ್ಮಣ್ ಕರ್ಕೇರಾ, ವಜ್ರಕಾಂತ್ ಕುಂದರ್, ಜಯಶೀಲಾ ಕುಂದರ್
ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಮಹೇಂದ್ರ ಕಾಂಚನ್ ರವರು ಧನ್ಯವಾದ ನೀಡಿದರು
.



Related posts

ದಾಸ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ ಅನನ್ಯ: ಮಧುಸೂದನ್‌ ಟಿ.ಆರ್‌.

Mumbai News Desk

ಸಾಂತಾಕ್ರೂಜ್ ಕನ್ನಡ ಸಂಘದ 68ನೇ ವಾರ್ಷಿಕ ಮಹಾಸಭೆ: ಸಮಾಜ ಸೇವೆಗೆ ನಿಸ್ವಾರ್ಥ ಮನೋಭಾವದ ಕರೆ

Mumbai News Desk

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಥಾ ಸತೀಶ್ ಶೆಟ್ಟಿ ಗೆ ಶೇ 92 ಅಂಕ.

Mumbai News Desk

ಸಾನ್ವಿ ಸುಧೀರ್ ಆಚಾರ್ಯಗೆ ಶೇ. 82 ಅಂಕ

Mumbai News Desk

ಶಿವಸೇನಾದಕ್ಷಿಣ ಭಾರತ ಘಟಕದಿಂದ ಮಾಹಿತಿ ಶಿಬಿರ.

Mumbai News Desk