September 23, 2026
Mumbai News Kannada
ಕರ್ನಾಟಕ

ಅಕ್ಷಯಧಾರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾಪು: ವಾರ್ಷಿಕ ಮಹಾಸಭೆ



ಸರ್ವ ಸದಸ್ಯರ ಸಹಕಾರವೇ ಅಕ್ಷಯಧಾರಾ ಸೊಸೈಟಿಯ ಬೆಳವಣಿಗೆಯ ಶಕ್ತಿ: ಲವ ಕರ್ಕೇರ

ಕಾಪು: ಇಲ್ಲಿನ ಹೆಸರಾಂತ ಆರ್ಥಿಕ ಸಂಸ್ಥೆಯಾದ ಅಕ್ಷಯಧಾರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 19ರಂದು ಸಂಸ್ಥೆಯ ಅಧ್ಯಕ್ಷ ಲವ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಕಾಪುವಿನ ಭಾಸ್ಕರ ಸೌಧ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಲವ ಕರ್ಕೇರ ಅವರು, “ಸೊಸೈಟಿಯ ಬೆಳವಣಿಗೆ ಹಾಗೂ ಪ್ರಗತಿಯಲ್ಲಿ ಸರ್ವ ಸದಸ್ಯರ ಸಹಕಾರ ಮತ್ತು ವಿಶ್ವಾಸ ಶ್ಲಾಘನೀಯ. ಸಂಸ್ಥೆಯ ಅಭಿವೃದ್ಧಿಗೆ ನಿರಂತರವಾಗಿ ಕೈಜೋಡಿಸುತ್ತಿರುವ ಸಾಲಗಾರರು, ಠೇವಣಿದಾರರು ಹಾಗೂ ಗ್ರಾಹಕರಿಗೆ ಕೃತಜ್ಞತೆಗಳು. ಸಂಸ್ಥೆಯ ಮೇಲಿನ ಸದಸ್ಯರ ವಿಶ್ವಾಸವೇ ಅಕ್ಷಯಧಾರಾದ ಮುಂದಿನ ಹೆಜ್ಜೆಗಳಿಗೆ ಶಕ್ತಿ ನೀಡುತ್ತಿದೆ” ಎಂದು ಹೇಳಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಹಮ್ಮದ್ ಇರ್ಫಾನ್, ನಿರ್ದೇಶಕರಾದ ರಮೇಶ್ ಶೆಟ್ಟಿ ಕಲ್ಯಾ, ಯೋಗೀಶ್ ಆಚಾರ್ಯ ಹಾಗೂ ವಿಮಲಾ ದೇವಾಡಿಗ ಉಪಸ್ಥಿತರಿದ್ದರು.

ನಿರ್ದೇಶಕ ಉತ್ತಮ ಕುಮಾರ್ ಬಂಗೇರ ಸ್ವಾಗತಿಸಿದರು. ನಿರ್ದೇಶಕ ಜಗದೀಶ್ ಮೆಂಡನ್ ಆಯವ್ಯಯ ಪಟ್ಟಿಯನ್ನು ಮಂಡಿಸಿದರು. ಕಾರ್ಯದರ್ಶಿ ಅಮಿತಾ ದೇವಾಡಿಗ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಸಭೆಯ ಮುಂದಿಟ್ಟರು.

ಸದಸ್ಯರಾದ ಸುಂದರ ಸುವರ್ಣ, ಸತೀಶ್ ಭಂಡಾರಿ ಹಾಗೂ ವಿಠಲದಾಸ ರಾವ್ ಸಂಸ್ಥೆಯ ಮುಂದಿನ ಪ್ರಗತಿಗೆ ಪೂರಕವಾದ ಸಲಹೆ-ಸೂಚನೆಗಳನ್ನು ನೀಡಿದರು. ಇರ್ವಿನ್ ಸೋನ್ಸ್ ಹಾಗೂ ಸೌಮ್ಯ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಸಮನ್ವಯ ಮತ್ತು ಗ್ರಾಹಕರ ವಿಶ್ವಾಸದೊಂದಿಗೆ ಅಕ್ಷಯಧಾರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.



Related posts

ಬೆಂಗಳೂರು: ನಗರದ ತಾಪಮಾನ ತಗ್ಗಿಸಿದ ಮಾರ್ಚ್ ತಿಂಗಳ ಮೊದಲ ಮಳೆ

Mumbai News Desk

ಬೆಳಗಾವಿ : ಸದನದಲ್ಲಿ ಗೃಹಲಕ್ಷ್ಮಿ ಗದ್ದಲ; ತಪ್ಪೊಪ್ಪಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Mumbai News Desk

ಎಸ್ ಎಸ್ ಎಲ್ ಸಿ ಫಲಿತಾಂಶ -2025ಕೆ ಎಸ್ ರಾವ್ ಸ್ಮಾರಕ ಸರಕಾರಿ ಪ್ರೌಢಶಾಲೆ ಚಿತ್ರಾಪು, ಮುಲ್ಕಿ ವಿದ್ಯಾರ್ಥಿಗಳ ಸಾಧನೆ

Mumbai News Desk

ಕಂಬಳದ ಸುಗಮ ಆಯೋಜನೆಗೆ ರಾಜ್ಯ ಸರ್ಕಾರದಿಂದ 1.15 ಕೋಟಿ ರೂ. ಭಾರಿ ಅನುದಾನ ಬಿಡುಗಡೆ: ಕರಾವಳಿಗರಿಗೆ ಸಿಹಿ ಸುದ್ಧಿ

Mumbai News Desk

ಶಿವಮೊಗ್ಗದಲ್ಲಿ 10ನೇ ತರಗತಿ ವಿದ್ಯಾರ್ಥಿಯ ಕೊಲೆ, ಇಬ್ಬರು ಅಪ್ರಾಪ್ತ ವಯಸ್ಕರ ಬಂಧನ

Mumbai News Desk

ಕರ್ನಾಟಕ : ಹೈಕಮಾಂಡ್‌ ತೀರ್ಮಾನವೇ ಅಂತಿಮ, ಇದೇ ನಮ್ಮಿಬ್ಬರ ಮಂತ್ರ: ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಎಂ-ಡಿಸಿಎಂ ಘೋಷಣೆ

Mumbai News Desk