31 C
Mumbai
September 28, 2026
Mumbai News Kannada
ಮುಂಬಯಿ

ಡೊಂಬಿವಲಿ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವ: ಭಕ್ತಿಭಾವದ ‘ದಾಸರ ಭಜನಾ ಸ್ಪರ್ಧೆ 2026’ ಸಂಪನ್ನ



ಹಿರಿಯರ ಬುನಾದಿ, ಒಗ್ಗಟ್ಟಿನ ಶ್ರಮವೇ ಮಂದಿರದ 50 ವರ್ಷಗಳ ಸುವರ್ಣ ಸಂಭ್ರಮಕ್ಕೆ ಶಕ್ತಿ: ಇಂದುಶೇಖರ ಸುವರ್ಣ

ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್
​
ಡೊಂಬಿವಲಿ (ಮುಂಬೈ):
“ಸಂಸ್ಥೆಯ ಸಂಸ್ಥಾಪಕ ಹಿರಿಯರು ಹಾಕಿಕೊಟ್ಟ ಗಟ್ಟಿ ಬುನಾದಿ, ಮಹಿಳಾ ವಿಭಾಗ ಹಾಗೂ ಯುವ ಕಾರ್ಯಕರ್ತರ ನಿಸ್ವಾರ್ಥ ಒಗ್ಗಟ್ಟಿನ ಪರಿಶ್ರಮವೇ ಮಹಾವಿಷ್ಣು ಮಂದಿರವು ಇಂದು ಸುವರ್ಣ ಮಹೋತ್ಸವದ ಸಂಭ್ರಮ ಕಾಣಲು ಮೂಲ ಶಕ್ತಿ” ಎಂದು ಶ್ರೀ ಮಹಾವಿಷ್ಣು ಮಂದಿರದ ಅಧ್ಯಕ್ಷರಾದ ಇಂದುಶೇಖರ ಎನ್. ಸುವರ್ಣ ಪ್ರತಿಪಾದಿಸಿದರು.
​ಸ್ಥಳೀಯ ಮುಂಬ್ರಾ ಮಿತ್ರ ಭಜನಾ ಮಂಡಳಿ (ರಿ.) ಸಂಚಾಲಿತ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವದ (1978–2027) ಅಂಗವಾಗಿ ಆಯೋಜಿಸಲಾಗಿದ್ದ 6ನೇ ಸರಣಿ ಕಾರ್ಯಕ್ರಮವಾದ ಭವ್ಯ ‘ದಾಸರ ಭಜನಾ ಸ್ಪರ್ಧೆ 2026’ ಸೆಪ್ಟೆಂಬರ್ 27 ರ ಭಾನುವಾರ  ದಿನವಿಡೀ ಹೋಟೆಲ್ ಶಿವಂ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಸಂಜೆಯ ಪ್ರಧಾನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
​ಅಧ್ಯಕ್ಷರ ಭಾಷಣದ ಮುಖ್ಯಾಂಶಗಳು
​ಮಂದಿರದ ಹಾಲಿ ಅಧ್ಯಕ್ಷ ಇಂದುಶೇಖರ ಎನ್. ಸುವರ್ಣ ಅವರು ಸಂಸ್ಥೆಯ 50 ವರ್ಷಗಳ ಇತಿಹಾಸ ಮತ್ತು ಮುಂದಿನ ಬೃಹತ್ ಯೋಜನೆಗಳನ್ನು ಸವಿಸ್ತಾರವಾಗಿ ತೆರೆದಿಟ್ಟರು:
​ಬೆಳೆದು ಬಂದ ಹಾದಿ:
“1978ರಲ್ಲಿ ಮುಂಬ್ರಾದಲ್ಲಿ ಕೇವಲ ಬೆರಳೆಣಿಕೆಯ ಯುವಕರು ಮತ್ತು ಹಿರಿಯರಿಂದ ಆರಂಭವಾದ ಈ ಸಂಸ್ಥೆ, 2013ರಲ್ಲಿ ಡೊಂಬಿವಲಿಗೆ ಸ್ಥಳಾಂತರಗೊಂಡಿತು. 2014ರಲ್ಲಿ ಪುಟ್ಟ ಜಾಗದಿಂದ ಆರಂಭಿಸಿ, ಭಕ್ತರ ಸಂಖ್ಯೆ ಹೆಚ್ಚಿದಂತೆ 2017ರಲ್ಲಿ ಸಮಿತಿಯು ಹೊಸ ಕನಸು ಕಂಡಿತು. ಸದಸ್ಯರಿಂದ ಪಡೆದ ₹25 ಲಕ್ಷ ರಿಫಂಡಬಲ್ ಠೇವಣಿ ನೆರವಿನೊಂದಿಗೆ ಸುಮಾರು ₹75 ಲಕ್ಷ ವೆಚ್ಚದಲ್ಲಿ ಎರಡೂವರೆ ಸಾವಿರ ಚದರಡಿಯ ವಿಶಾಲ ಜಾಗ ಖರೀದಿಸಿ ಭವ್ಯ ಮಂದಿರ ನಿರ್ಮಿಸಲಾಯಿತು. ವಿಶೇಷವೆಂದರೆ, ಸಮಿತಿಯ ಪಾರದರ್ಶಕ ಕಾರ್ಯವೈಖರಿಯಿಂದಾಗಿ ಕೇವಲ ಎರಡೇ ವರ್ಷಗಳಲ್ಲಿ ಸದಸ್ಯರ ₹25 ಲಕ್ಷ ಠೇವಣಿಯನ್ನು ಸಂಪೂರ್ಣವಾಗಿ ಮರುಪಾವತಿಸಿ, ಸಂಸ್ಥೆಯನ್ನು ಋಣಮುಕ್ತಗೊಳಿಸಿದ ಹೆಮ್ಮೆ ನಮ್ಮದಾಗಿದೆ” ಎಂದು ಸ್ಮರಿಸಿದರು.
​ಸುವರ್ಣ ವರ್ಷದ ₹75 ಲಕ್ಷದ ಮಹತ್ವಾಕಾಂಕ್ಷೆಯ ಯೋಜನೆಗಳು:
“ಸುವರ್ಣ ಮಹೋತ್ಸವದ ಅಂಗವಾಗಿ ದೇವರಿಗೆ ನೂತನ ರಜತ ಮೂರ್ತಿ, ರಜತ ಪ್ರಭಾವಳಿ, ಗರ್ಭಗುಡಿಯ ನವೀಕರಣ ಹಾಗೂ ಏಕಶಿಲಾ ಪಾಣಿಪೀಠ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ. ಇದಕ್ಕೆ ಅಂದಾಜು ₹60 ರಿಂದ ₹75 ಲಕ್ಷ ಬಜೆಟ್ ನಿಗದಿಪಡಿಸಲಾಗಿದೆ. ಮುಂಬರುವ 2027ರ ಮಾರ್ಚ್ 23ರಿಂದ ಆರಂಭವಾಗಲಿರುವ ಧಾರ್ಮಿಕ ಮಹೋತ್ಸವ ಹಾಗೂ ಏಪ್ರಿಲ್‌ನಲ್ಲಿ ನಡೆಯಲಿರುವ ಸುವರ್ಣ ಮಹೋತ್ಸವದ ಭವ್ಯ ಸಮಾರೋಪಕ್ಕೆ ಸಮಸ್ತ ಸಮಾಜ ಬಾಂಧವರು ತನು, ಮನ, ಧನದ ಸಹಕಾರ ನೀಡಿ ಈ ಪುಣ್ಯಕಾರ್ಯವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.

ಸಂಸ್ಥೆಯ ಹಿರಿಯರಿಗೆ ಸನ್ಮಾನ &  ‘ವಿಜ್ಞಾಪನಾ ಪತ್ರ’ ಬಿಡುಗಡೆ

ಮಂದಿರದ 50 ವರ್ಷಗಳ ಇತಿಹಾಸದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯ ದಂಪತಿಗಳಾದ ಶ್ರೀ ನಾರಾಯಣ ಎಂ. ಸಾಲ್ಯಾನ್ ದಂಪತಿ, ಶ್ರೀಮತಿ ದೇವಕಿ ಬಿ. ಸುವರ್ಣ, ಶ್ರೀ ಸುರೇಶ್ ಎನ್. ನಾಯಕ್ ಮತ್ತು ಶ್ರೀಮತಿ ವಾರಿಜಾ ಸುರೇಶ್ ನಾಯಕ್, ಶ್ರೀಮತಿ ದೇವಕಿ ಜೆ. ಪೂಜಾರಿ ಹಾಗೂ ಶ್ರೀಮತಿ ಮನೋರಮಾ ಎಸ್. ಮೆಂಡನ್ ಅವರನ್ನು ಶಾಲು ಹೊದಿಸಿ, ಫಲಪುಷ್ಪ ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ, ಸುವರ್ಣ ಮಹೋತ್ಸವದ ಅಂಗವಾಗಿ ದೇವರಿಗೆ ನೂತನ ರಜತ ಮೂರ್ತಿ, ರಜತ ಪ್ರಭಾವಳಿ, ಏಕಶಿಲಾ ಪಾಣಿಪೀಠ ನಿರ್ಮಾಣ ಸೇರಿದಂತೆ ಸುಮಾರು ₹60 ರಿಂದ ₹75 ಲಕ್ಷ ವೆಚ್ಚದ ಬೃಹತ್ ಅಭಿವೃದ್ಧಿ ಕಾಮಗಾರಿಗಳ ‘ವಿಜ್ಞಾಪನಾ ಪತ್ರವನ್ನು (ಅಪೀಲ್)’ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಮುಖ್ಯ ಅತಿಥಿಗಳು ಮತ್ತು ಇತರ ಗಣ್ಯರ ಭಾಷಣ:

​ಮುಖ್ಯ ಅತಿಥಿ ಜಯಂತ್ ಜೆ. ಶೆಟ್ಟಿ: “ಕರಾವಳಿಯ ಗಂಡುಕಲೆ ಮತ್ತು ಭಕ್ತಿ ಸಂಸ್ಕೃತಿಯನ್ನು ಮುಂಬೈನ ನೆಲದಲ್ಲಿ ಹೆಮ್ಮರವಾಗಿ ಬೆಳೆಸಿದ ಮಹಾವಿಷ್ಣು ಮಂದಿರದ ಸೇವೆ ಶ್ಲಾಘನೀಯ” ಎಂದರು.

​ಉಪಕಾರ್ಯಾಧ್ಯಕ್ಷ ರವಿ ಸನಿಲ್: “ಮಂದಿರದ ಮಹಿಳಾ ಮತ್ತು ಯುವ ತಂಡಗಳು ಭಜನೆ, ಸಮಾಜಸೇವೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಸುವರ್ಣ ಮಹೋತ್ಸವಕ್ಕೆ ಸಮಾಜದ ಸಂಪೂರ್ಣ ಬೆಂಬಲವಿರಲಿ” ಎಂದರು.

​ಉಪಕಾರ್ಯಾಧ್ಯಕ್ಷ ದೇವದಾಸ್ ಕುಲಾಲ್: “ಸುವರ್ಣ ವರ್ಷದ ಎಲ್ಲಾ ಯೋಜನೆಗಳು ಯಶಸ್ವಿಯಾಗಲು ಸಮಾಜ ಬಾಂಧವರು ಒಗ್ಗಟ್ಟಿನಿಂದ ಕೈಜೋಡಿಸಬೇಕು” ಎಂದು ಆಶಿಸಿದರು.

ಕರಾವಳಿ ಕರ್ನಾಟಕದಿಂದ ಆಗಮಿಸಿದ್ದ ಖ್ಯಾತ ವಿದ್ವಾಂಸರು ಹಾಗೂ ಸಾಧಕರಾದ ತೀರ್ಪುಗಾರರನ್ನು ವೇದಿಕೆಯ ಗಣ್ಯರು ಗೌರವಿಸಿದರು,   ಶ್ರೀಮತಿ ನೇತ್ರಾವತಿ, ಶ್ರೀಮತಿ ಪೂರ್ಣಿಮಾ ಕರ್ಕೇರ, ಶ್ರೀಮತಿ ಚೇತನಾ ಎಸ್. ಕೋಟ್ಯಾನ್ ಅವರು ಪರಿಚಯಿಸಿದರು.

ತೀರ್ಪುಗಾರರ ಸಲಹೆ

ತೀರ್ಪುಗಾರ ನರೇಶ್ ಕುಮಾರ್ ಸಸಿಹಿತ್ಲು: (ಖ್ಯಾತ ಪತ್ರಕರ್ತರು, ರಂಗ ನಿರ್ದೇಶಕರು, ತುಳು ಅಕಾಡೆಮಿ ಮಾಜಿ ಸದಸ್ಯರು ಹಾಗೂ ರಾಷ್ಟ್ರಮಟ್ಟದ ತೀರ್ಪುಗಾರರು) “ದಾಸರ ಭಜನೆ ಸಂಗೀತ ಕಚೇರಿಯಲ್ಲ; ಕೈಯಲ್ಲಿ ತಾಳ ಹಿಡಿದು ಭಕ್ತಿಯಿಂದ ಹಾಡುವ ಸೇವೆ. ದಾಸರ ಸಾಹಿತ್ಯದ ಒಂದೊಂದು ಶಬ್ದಕ್ಕೂ ಮಹತ್ವವಿದೆ. ಹಾಡುವಾಗ ಶಬ್ದಗಳ ಅಪಾರ್ಥವಾಗದಂತೆ, ಸಾಹಿತ್ಯ ಲೋಪವಾಗದಂತೆ ಎಚ್ಚರ ವಹಿಸಬೇಕು” ಎಂದರು.

ತೀರ್ಪುಗಾರ ಶೋಧನ್ ಎಲ್. ಸುವರ್ಣ: (ಹಿಂದುಸ್ತಾನಿ ಸಂಗೀತ ವಿದ್ವಾಂಸರು, ಸಂಗೀತ ನಿರ್ದೇಶಕರು, ಸೋಹಾನಿ ಸಂಗೀತ ಕೇಂದ್ರದ ಮುಖ್ಯಸ್ಥರು ಹಾಗೂ ಆನಂದತೀರ್ಥ ವಿದ್ಯಾಲಯ ಕುಂಜಾರುಗಿರಿಯ ಶಿಕ್ಷಕರು) “ಭಜನೆಯಲ್ಲಿ ರಾಗ, ಲಯ, ತಾಳ ಹಾಗೂ ಶ್ರುತಿಬದ್ಧತೆ ಮುಖ್ಯ. ಮೈಕ್ ಅನ್ನು ಸರಿಯಾದ ಅಂತರದಲ್ಲಿರಿಸಿ ಪದಗಳ ಸ್ಪಷ್ಟ ಉಚ್ಚಾರಣೆಯನ್ನು ಪ್ರೇಕ್ಷಕರಿಗೆ ತಲುಪಿಸಬೇಕು. ಯುವಕರು ಶಾಸ್ತ್ರೀಯ ಸಂಗೀತ ತರಬೇತಿಯನ್ನು ಪಡೆಯುವುದು ಉತ್ತಮ” ಎಂದು ಸಲಹೆ ನೀಡಿದರು.

ತೀರ್ಪುಗಾರ ಚಂದ್ರಶೇಖರ್ ಕೆ. ಸುವರ್ಣ: (ದೈಹಿಕ ಶಿಕ್ಷಣ ಶಿಕ್ಷಕರು, ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಸ್ಯಾಕ್ಸೋಫೋನ್ ಹಾಗೂ ಹಾರ್ಮೋನಿಯಂ ವಾದಕರು) “ಸ್ಪರ್ಧೆಯು ತೀವ್ರ ಹಣಾಹಣಿಯಿಂದ ಕೂಡಿತ್ತು. ಅಂಕಗಳ ಅಂತರ ಬಹಳ ನಿಕಟವಾಗಿತ್ತು. ಭಜನೆಗೆ ಅಗತ್ಯವಾದ ತಾಳ ಮತ್ತು ಸಹಜ ಲಯವನ್ನು ಕೈಬಿಡಬಾರದು” ಎಂದರು.

ವೇದಿಕೆಯಲ್ಲಿದ್ದ ಪ್ರಮುಖರು:

ಮುಖ್ಯ ಅತಿಥಿ: ಶ್ರೀ ಜಯಂತ್ ಜೆ. ಶೆಟ್ಟಿ (ಜೊತೆ ಕಾರ್ಯದರ್ಶಿ, ಬಂಟರ ಸಂಘ ಮುಂಬೈ – ಡೊಂಬಿವ್ಲಿ ಪ್ರಾದೇಶಿಕ ಸಮಿತಿ).
ಸುವರ್ಣ ಮಹೋತ್ಸವ ಸಮಿತಿಯ ಪ್ರಮುಖರು: ಶ್ರೀ ರವಿ ಸನಿಲ್ (ಉಪಕಾರ್ಯಾಧ್ಯಕ್ಷರು), ಶ್ರೀ ದೇವದಾಸ್ ಕುಲಾಲ್ (ಉಪಕಾರ್ಯಾಧ್ಯಕ್ಷರು), ಶ್ರೀ ಚಂದ್ರಾಸ್ ಪಾಲನ್ (ಉಪಕಾರ್ಯಾಧ್ಯಕ್ಷರು), ಶ್ರೀ ಹರೀಶ್ ಡಿ. ಶೆಟ್ಟಿ (ಉಪಕಾರ್ಯಾಧ್ಯಕ್ಷರು), ಶ್ರೀ ರವೀಂದ್ರ ಶೆಟ್ಟಿ (ಉಪಕಾರ್ಯಾಧ್ಯಕ್ಷರು), ಶ್ರೀ ಜಗನ್ನಾಥ್ ಶೆಟ್ಟಿ (ಹಿರಿಯ ಸದಸ್ಯರು ಹಾಗೂ ದಾನಿಗಳು), ಶ್ರೀ ರವಿ ಎಸ್. ಪೂಜಾರಿ (ಹೋಟೆಲ್ ವರ್ಷ, ಡೊಂಬಿವಲಿ – ಸಮಾಜ ಸೇವಕರು/ದಾನಿಗಳು),
ಸಂಸ್ಥೆಯ ಪದಾಧಿಕಾರಿಗಳಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್ (ಗೌರವಾಧ್ಯಕ್ಷರು), ಶ್ರೀಮತಿ ಸವಿತಾ ಚಂದ್ರಶೇಖರ್ ಸಾಲ್ಯಾನ್ (ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರು), ಶ್ರೀ ಪ್ರವೀಣ್ ಶೆಟ್ಟಿ (ಗೌರವ ಕೋಶಾಧಿಕಾರಿ), ಶ್ರೀ ಅರವಿಂದ್ ಪದ್ಮಶಾಲಿ (ಉಪಾಧ್ಯಕ್ಷರು / ಭೂವಾಜಿ). ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪರ್ಧೆಯ ಫಲಿತಾಂಶ ಪ್ರಕಟಣೆ: ವಿಜೇತ ತಂಡಗಳ ವಿವರ

ಮಂದಿರದ ಪದಾಧಿಕಾರಿ ಶ್ರೀಮತಿ ರಾಜೇಶ್ವರಿ ಪ್ರವೀಣ್ ಶೆಟ್ಟಿ ಅವರು ಈ ಹಿಂದೆ ನಡೆದ ಮುದ್ದುಕೃಷ್ಣ ಮತ್ತು ಚಿತ್ರಕಲಾ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ವಾಚಿಸಿದರು. ನಂತರ, ಮಂದಿರದ ಪ್ರಮುಖರಾದ ಶ್ರೀ ಅರವಿಂದ್ ಪದ್ಮಶಾಲಿ (ಭೂವಾಜಿ) ಅವರು ದಾಸರ ಭಜನಾ ಸ್ಪರ್ಧೆಯ ಅಧಿಕೃತ ಫಲಿತಾಂಶವನ್ನು ಪ್ರಕಟಿಸಿದರು:

ಕುಣಿತ ಭಜನಾ ಸ್ಪರ್ಧೆ:

ಪ್ರಥಮ ಬಹುಮಾನ: ತುಳು ವೆಲ್ಫೇರ್ ಅಸೋಸಿಯೇಷನ್, ಡೊಂಬಿವಲಿ

ದ್ವಿತೀಯ ಬಹುಮಾನ: ಮೊಗವೀರ ವ್ಯವಸ್ಥಾಪಕ ಮಂಡಳಿ, ಮೀರಾ ರೋಡ್

ತೃತೀಯ ಬಹುಮಾನ: ಆದಿಶಕ್ತಿ ಭಜನಾ ಮಂಡಳಿ, ಥಾಣೆ


ಕುಳಿತ ಭಜನಾ ಸ್ಪರ್ಧೆ:

ಪ್ರಥಮ ಬಹುಮಾನ: ನವೋದಯ ಕನ್ನಡ ಸೇವಾ ಸಂಘ, ಥಾಣೆ

ದ್ವಿತೀಯ ಬಹುಮಾನ: ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಜನಾ ಮಂಡಳಿ, ಸಾಕಿನಾಕ

ತೃತೀಯ ಬಹುಮಾನ: ಶ್ರೀ ಅಯ್ಯಪ್ಪ ಭಜನಾ ಮಂಡಳಿ, ಅಸ್ದೇಪಾಡ

ಸಮಾಧಾನಕರ ಬಹುಮಾನಗಳು:

ರಾಧಾಕೃಷ್ಣ ಭಜನಾ ಮಂಡಳಿ, ಡೊಂಬಿವಲಿ

ಶ್ರೀ ಬ್ರಹ್ಮರಾಂಬಿಕಾ ಭಜನಾ ಮಂಡಳಿ, ಡೊಂಬಿವಲಿ

ಉತ್ತಮ ಶಿಸ್ತಿನ ತಂಡ (ಬೆಸ್ಟ್ ಡಿಸಿಪ್ಲಿನ್): ನವೋದಯ ಕನ್ನಡ ಸೇವಾ ಸಂಘ, ಥಾಣೆ

ಅತ್ಯುತ್ತಮ ಗಾಯಕ ಪ್ರಶಸ್ತಿ (ಬೆಸ್ಟ್ ಸಿಂಗರ್ಸ್):

ಸುಶಾಂತ್ (ರಾಧಾಕೃಷ್ಣ ಭಜನಾ ಮಂಡಳಿ)
ರೋಹಿತ್ (ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಜನಾ ಮಂಡಳಿ)
ಆಶಿಕ ರೈ (ಶ್ರೀ ಅಯ್ಯಪ್ಪ ಭಜನಾ ಮಂಡಳಿ, ಅಸ್ದೇಪಾಡ)

​ರಾಧಾಕೃಷ್ಣ ಫ್ಯಾನ್ಸಿ ಡ್ರೆಸ್ (ಗ್ರೂಪ್ ‘ಎ’ – 1 ರಿಂದ 4 ವರ್ಷ):
​ಪ್ರಥಮ: ರೇಯಾಂಶ್ ಶೆಟ್ಟಿ
​ದ್ವಿತೀಯ: ಸಾಕ್ಷಾತ್ ಸುವರ್ಣ
​ತೃತೀಯ: ಲಕ್ಷರಾಜ್ ರಾಜೇಶ್ ಪೂಜಾರಿ
​ಸಮಾಧಾನಕರ ಬಹುಮಾನಗಳು: ಚಿನ್ಮಯಿ ಸಾಪಲ್ಯ, ಪೃಥ್ವಿ ಗೌಡಮಿಲಿ, ನಿರೀಕ್ಷಾ ರಾಜೇಶ್ ಪೂಜಾರಿ, ದೃಶ್ಯ ಪ್ರವೀಣ್ ಶೆಟ್ಟಿ, ಅಶ್ವಿಕಾ ಅಕ್ಷಯ್ ಕೇಣಿ.

​ರಾಧಾಕೃಷ್ಣ ಫ್ಯಾನ್ಸಿ ಡ್ರೆಸ್ (ಗ್ರೂಪ್ ‘ಬಿ’ – 5 ರಿಂದ 7 ವರ್ಷ):
​ಪ್ರಥಮ: ಆರುಷಿ ಶೆಟ್ಟಿ
​ದ್ವಿತೀಯ: ನಿಧಿ ಸರ್ವೇಶ್ ಪೂಜಾರಿ
​ತೃತೀಯ: ಧನುಷ್ ರಾಕೇಶ್ ಕುಮಾರ್
​ಸಮಾಧಾನಕರ ಬಹುಮಾನಗಳು: ವಾರುಣಿ ಪೂಜಾರಿ, ತ್ರಿಶೂಲ್ ಮಹೇಶ್ ಮೊಗವೀರ, ಸಿಯಾ ಪ್ರವೀಣ್ ಶೇರಿಗಾರ್, ಸಾಯಿಶ್ ಮಲ್ಲಿ, ತಸ್ವಿ ಪೂಜಾರಿ.

​ಚಿತ್ರಕಲೆ ಮತ್ತು ಬಣ್ಣ ತುಂಬುವ ಸ್ಪರ್ಧೆ:
​ವಿಭಾಗ 1 (1 ಮತ್ತು 2ನೇ ತರಗತಿ): ಪ್ರಥಮ: ಸಾಯಂ ಶರತ್ ಕೋಟ್ಯಾನ್; ದ್ವಿತೀಯ: ಸುಯಶ್ ಇಂದುಶೇಖರ್ ಸುವರ್ಣ.
​ವಿಭಾಗ 2 (3 ಮತ್ತು 4ನೇ ತರಗತಿ): ಪ್ರಥಮ: ತನ್ವಿ ಸುರೇಶ್ ಸಾಲ್ಯಾನ್; ದ್ವಿತೀಯ: ಆರೋಹಿ ಅಭಿಷೇಕ್ ಸಾಲ್ಯಾನ್; ತೃತೀಯ: ನವ್ಯಾ ಸೂರಜ್ ಸುವರ್ಣ.
​ವಿಭಾಗ 3 (5 ಮತ್ತು 6ನೇ ತರಗತಿ): ಪ್ರಥಮ: ತನಿಷ್ಕಾ ಸಚಿನ್ ಅಂಚನ್; ದ್ವಿತೀಯ: ಧನುಷ್ ಗುರುರಾಜ್ ಸಾಲ್ಯಾನ್; ತೃತೀಯ: ಯಶಿಕಾ ಸುಮಂತ್ ಕಂಚನ್.
​ವಿಭಾಗ 4 (7 ರಿಂದ 10ನೇ ತರಗತಿ): ಪ್ರಥಮ: ಪ್ರೇಕ್ಷಿತ್ ಕೃಷ್ಣ ಮೊಗವೀರ; ದ್ವಿತೀಯ: ಲಾಸ್ಯ ಎನ್. ಜತ್ತನ್; ತೃತೀಯ: ಅನನ್ಯ ಮೊಗವೀರ.
​ಚಿತ್ರಕಲಾ ಸಮಾಧಾನಕರ ಬಹುಮಾನಗಳು: ಸೃಷ್ಟಿ ದಿನೇಶ್ ಪೂಜಾರಿ, ತ್ರಿಶಾ ಶೆಟ್ಟಿ, ಅಹನಾ ಇಂದುಶೇಖರ್ ಸುವರ್ಣ, ತ್ರಿಶಾ ಪೂಜಾರಿ, ಪ್ರಿಶಾ ನರೇಶ್ ಕುಂದರ್.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹಕ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಲೀಲೇಶ್ ಸುವರ್ಣ ಭಜನಾ ಸ್ಪರ್ಧೆಯನ್ನು ನಿರ್ವಹಿಸಿದರೆ,
ಪ್ರಧಾನ ಕಾರ್ಯದರ್ಶಿ ಸಚಿನ್ ಜಿ. ಪೂಜಾರಿ ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು. ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ದೀಪ ಪ್ರಜ್ವಲನೆಯೊಂದಿಗೆ ಮುಂಜಾನೆ ಕಾರ್ಯಕ್ರಮಕ್ಕೆ ಚಾಲನೆ

ಬೆಳಿಗ್ಗೆ ಗಣಪತಿ ಸ್ತುತಿಯೊಂದಿಗೆ ಆರಂಭವಾದ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಜ್ಯೋತಿ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಕುಶಾಲ್ ಕೋಟ್ಯಾನ್, “ಮುಂಬ್ರಾದಂತಹ ಪರಿಸರದಲ್ಲಿ 50 ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆ, ಯುವಪೀಳಿಗೆಯನ್ನು ಒಗ್ಗೂಡಿಸಿ ನಮ್ಮ ಸನಾತನ ಸಂಸ್ಕೃತಿಯನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ” ಎಂದರು.

ಚಿನ್ನರ ಬಿಂಬ ಚಾರಿಟೇಬಲ್ ಟ್ರಸ್ಟ್‌ನ ಶ್ರೀಮತಿ ಮೈನಾ ಶೆಟ್ಟಿ ಮಾತನಾಡಿ, “ಮಹಾವಿಷ್ಣು ಮಂದಿರದ ಕಾರ್ಯಕರ್ತರ ಶಿಸ್ತು ಹಾಗೂ ಸಮರ್ಪಣಾ ಮನೋಭಾವ ಇತರ ಸಾಮಾಜಿಕ ಸಂಸ್ಥೆಗಳಿಗೆ ಮಾದರಿ” ಎಂದು ಹಾರೈಸಿದರು. ಸಮಾಜ ಸೇವಕಿ ಶ್ರೀಮತಿ ಶ್ಯಾಮಲಾ ಎನ್. ಪೂಜಾರಿ, “ಸ್ಪರ್ಧೆಯಲ್ಲಿ ಕೇವಲ ಬಹುಮಾನಕ್ಕಾಗಿ ಹಾಡುವುದಕ್ಕಿಂತ ಮಿಗಿಲಾಗಿ, ದೇವರಿಗೆ ಶರಣಾಗಿ ಕಲೆಯನ್ನು ಆನಂದಿಸುವುದೇ ಮುಖ್ಯ” ಎಂದು ಸ್ಪರ್ಧಿಗಳಿಗೆ ಕಿವಿಮಾತು ಹೇಳಿದರು.

ಸುವರ್ಣ ಮಹೋತ್ಸವ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ, “ಇಂಗ್ಲಿಷ್ ಶಿಕ್ಷಣದ ಇಂದಿನ ದಿನಗಳಲ್ಲೂ ನಮ್ಮ ಯುವಕರು ಮತ್ತು ಮಕ್ಕಳು ದಾಸರ ಸಾಹಿತ್ಯವನ್ನು ಕಲಿತು ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಿರುವುದು ಹೆಮ್ಮೆಯ ವಿಚಾರ. ಭಗವಂತನಿಗೆ ಭಜನೆ ಮತ್ತು ನರ್ತನ ಸೇವೆ ಅತ್ಯಂತ ಪ್ರಿಯ” ಎಂದು ಅಭಿಪ್ರಾಯಪಟ್ಟರು.

ಕುಣಿತ ಮತ್ತು ಕುಳಿತ ಭಜನಾ ಸ್ಪರ್ಧೆಗಳ ವೈಭವ

ಕುಣಿತ ಭಜನಾ ಸ್ಪರ್ಧೆ: ಸ್ಥಳೀಯ ಮುಂಬ್ರಾ ಮಿತ್ರ ಭಜನಾ ಮಂಡಳಿಯ ಆರಂಭಿಕ ಪ್ರದರ್ಶನದೊಂದಿಗೆ ಶುರುವಾದ ಈ ವಿಭಾಗದಲ್ಲಿ ಒಟ್ಟು 5 ತಂಡಗಳು ಕಣಕ್ಕಿಳಿದವು. ಸ್ಪರ್ಧಿಗಳು ಪರಸ್ಪರ ಸಮನ್ವಯತೆಯಿಂದ ಹೆಜ್ಜೆ ಹಾಕುತ್ತಾ, ಚಂಡೆ-ಮದ್ದಳೆಯ ಗತ್ತು ಹಾಗೂ ತಾಳದ ಲಯಕ್ಕೆ ತಕ್ಕಂತೆ ದಾಸರ ಪದಗಳಿಗೆ ನರ್ತಿಸಿ ಸಭಿಕರ ಮೆಚ್ಚುಗೆ ಗಳಿಸಿದರು.

ಕುಳಿತ ಭಜನಾ ಸ್ಪರ್ಧೆ: ಮಂದಿರದ ಮಹಿಳಾ ವಿಭಾಗದ ಭಜನಾ ಪ್ರಸ್ತುತಿಯೊಂದಿಗೆ ಆರಂಭಗೊಂಡ ಈ ವಿಭಾಗದಲ್ಲಿ ಒಟ್ಟು 11 ತಂಡಗಳು ಭಾಗವಹಿಸಿದ್ದವು. ಪುರಂದರದಾಸರು, ಕನಕದಾಸರು, ವಿಜಯದಾಸರು ಹಾಗೂ ವಾದಿರಾಜರ ಕೀರ್ತನೆಗಳನ್ನು ಶಾಸ್ತ್ರೀಯ ಶ್ರುತಿಬದ್ಧವಾಗಿ ಪ್ರಸ್ತುತಪಡಿಸಲಾಯಿತು.


ಮಧ್ಯಾಹ್ನದ ಗಣ್ಯರ ಭೇಟಿ ಮತ್ತು ಚಿಂತನ–ಮಂಥನ

ಸ್ಪರ್ಧೆಯ ಮಧ್ಯಂತರದಲ್ಲಿ ನಡೆದ ಸಭೆಯಲ್ಲಿ ಬಂಟರ ಸಂಘ ಮುಂಬೈನ ಮಾಜಿ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಸತೀಶ್ ಎನ್. ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, “ಧಾರ್ಮಿಕ ಕಾರ್ಯಗಳ ಜೊತೆಗೆ ರಕ್ತದಾನ ಶಿಬಿರ, ಆರೋಗ್ಯ ಸೇವೆಯಂತಹ ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ನಡೆಸುತ್ತಿರುವ ಮಹಾವಿಷ್ಣು ಮಂದಿರದ ಬೆಳವಣಿಗೆಗೆ ನಮ್ಮ ಸಂಪೂರ್ಣ ಸಹಕಾರವಿದೆ” ಎಂದರು.

ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ ( ಸೂರಿಂಜೆ ) ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ಇಂದ್ರಾಳಿ ದಿವಾಕರ್ ಶೆಟ್ಟಿ ಮಾತನಾಡಿ, “ಭಜನೆ ಇರುವ ಕಡೆ ವಿಭಜನೆ ಇರಲಾರದು. ಸುವರ್ಣ ವರ್ಷದ ಅಂಗವಾಗಿ ಮಂದಿರ ಹಮ್ಮಿಕೊಂಡಿರುವ 25 ಸರಣಿ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ತನು, ಮನ, ಧನದ ಸಹಕಾರ ನೀಡಬೇಕು” ಎಂದು ಕರೆ ನೀಡಿದರು.
ಉಪಕಾರ್ಯಾಧ್ಯಕ್ಷ ರಾಜೀವ್ ಭಂಡಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂದಿರದ ಅಧ್ಯಕ್ಷರಾದ ಇಂದುಶೇಖರ್ ಎನ್. ಸುವರ್ಣ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಚಿನ್ ಜಿ. ಪೂಜಾರಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಅಭಿನ್ ಆಚಾರ್ಯ 88.40

Mumbai News Desk

ಹಿಂದಿ ಹೇರಿಕೆ ಆರೋಪದ ನಡುವೆ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ ಸರಕಾರ

Mumbai News Desk

ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿ. ಹೊಸ ವರ್ಷದ ಗುರುಪೂಜೆ.

Mumbai News Desk

ಮೇಯರ್ ಚುನಾವಣೆ: ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಿಗೆ ಮೇಯರ್ ಮೀಸಲಾತಿ ಘೋಷಣೆ, ಮುಂಬೈ, ಪುಣೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಮಹಿಳಾ ಸ್ಥಾನಗಳು

Mumbai News Desk

ಬಂಟರ ಸಂಘ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಆಷಾಢ ವೈಭವ ಮತ್ತು ಅಡುಗೆ ಸ್ಪರ್ಧೆ

Mumbai News Desk

ವಸಾಯಿ ತಾಲೂಕು ಮೊಗವೀರ ಸಂಘ (ರಿ.) ವತಿಯಿಂದ ಸಮುದಾಯ ಪಿಕ್ನಿಕ್ ಯಶಸ್ವಿಯಾಗಿ ಆಯೋಜನೆ

Mumbai News Desk