ಉಡುಪಿ, ಸೆ. 28: ವಿಶ್ವದ ಪ್ರಮುಖ ಸ್ವಯಂಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಲಯನ್ಸ್ ಕ್ಲಬ್, ಸಮಾಜ ಸೇವೆ, ಬಡವರ ನೆರವು ಹಾಗೂ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವ ಮೂಲಕ ತನ್ನದೇ ಆದ ಗೌರವ ಗಳಿಸಿದೆ. ದೇಶದ ಮೂಲೆಮೂಲೆಗಳ ಗ್ರಾಮೀಣ ಪ್ರದೇಶಗಳಿಗೂ ಸೇವಾ ಕಾರ್ಯಗಳನ್ನು ವಿಸ್ತರಿಸಿರುವ ಲಯನ್ಸ್ ಸಂಸ್ಥೆಯ ಸೇವಾ ಮನೋಭಾವ ಶ್ಲಾಘನೀಯವಾಗಿದೆ.
ಕುಂದಾಪುರ ಹಾಗೂ ಸಂತಕಟ್ಟೆ-ಕಲ್ಯಾಣಪುರ ಲಯನ್ಸ್ ಕ್ಲಬ್ಗಳ ಪ್ರಾಯೋಜಕತ್ವದಲ್ಲಿ, ಕೆಮ್ಮಣ್ಣು ಪರಿಸರದ ಬಡ ಹಾಗೂ ಅಗತ್ಯವಿರುವ ಜನರಿಗೆ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ ಡಿಸ್ಟ್ರಿಕ್ಟ್ 317(ಸಿ) ವ್ಯಾಪ್ತಿಯಲ್ಲಿ ನೂತನ ಕೆಮ್ಮಣ್ಣು ಲಯನ್ಸ್ ಕ್ಲಬ್ ಸ್ಥಾಪಿಸಲಾಯಿತು. ಇದರ ನೂತನ ಅಧ್ಯಕ್ಷರಾಗಿ ಜಗದೀಶ್ ಕೆಮ್ಮಣ್ಣು ಆಯ್ಕೆಯಾಗಿದ್ದಾರೆ.

ನೂತನ ಕ್ಲಬ್ನ ಪದಗ್ರಹಣ ಸಮಾರಂಭವು ಸೆ. 26ರಂದು ಅಂಬಾಗಿಲಿನ ಅಮೃತ ಗಾರ್ಡನ್ನಲ್ಲಿ ನಡೆಯಿತು. ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ್ವಿತೀಯ ನಿಯೋಜಿತ ಗವರ್ನರ್ ರಮೇಶ್ ಅವರು ನೂತನ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು ಸೇರಿದಂತೆ ತಂಡದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಪ್ರಥಮ ನಿಯೋಜಿತ ಗವರ್ನರ್ ಹರಿಪ್ರಸಾದ್ ರೈ ಸನ್ಮಾನ ನೆರವೇರಿಸಿದರು.
ಕಲ್ಯಾಣಪುರ ಲಯನ್ಸ್ ಕ್ಲಬ್ ಅಧ್ಯಕ್ಷ ವಿಲ್ಸನ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಉಪನ್ಯಾಸಕ ನರೇಂದ್ರ ಕುಮಾರ್ ಕೋಟೆ, ಶಿಕ್ಷಕಿ ಸುನೀತಾ ಎನ್.ಎಸ್., ಎಂಜಿನಿಯರ್ಗಳಾದ ಪ್ರಮೋದ್ ಶೆಟ್ಟಿ ಹಾಗೂ ಅಲೈನ್ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು. ಹರೀಶ್ ಪಾಲನ್, ನವೀನ್ ಗುಳಿಬೆಟ್ಟು, ಪ್ರಸಾದ್ ಶ್ರೀಯಾನ್ ಹಾಗೂ ಶ್ರೀಮತಿ ಸುಮತಿ ಅವರು ಸನ್ಮಾನಿತರ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕೆಮ್ಮಣ್ಣು ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಖಾಸಗಿ ಶಾಲೆಗೆ ಸಹಾಯಧನ ವಿತರಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಮಹಿಳಾ ವಿಭಾಗದ ಪ್ರಮುಖ ಅಧ್ಯಕ್ಷೆ ವೀಣಾ ಆರ್. ಕೋಟ್ಯಾನ್, ಮಾಜಿ ಜಿಲ್ಲಾ ಗವರ್ನರ್ಗಳಾದ ಜಯಕರ ಶೆಟ್ಟಿ ಇಂದಾಳಿ ಹಾಗೂ ಎನ್.ಎಂ. ಹೆಗ್ಡೆ, ಪ್ರಾಂತೀಯ ಅಧ್ಯಕ್ಷರಾದ ಕರುಣಾಕರ ಬಂಗೇರ ಹಾಗೂ ಪ್ರತಿಭಾ ಚಂದ್ರ ಶೆಟ್ಟಿ, ವಲಯ ಅಧ್ಯಕ್ಷೆ ಜಯಶ್ರೀ ಪ್ರಶಾಂತ್, ಜಿಲ್ಲಾ ಕೋಶಾಧಿಕಾರಿ ವಂದನಾ ನಾರಾಯಣ, ಜಿಲ್ಲಾ ಸಂಯೋಜಕರಾದ ಸಿದ್ಧರಾಜು ಹಾಗೂ ರೋವನ್ ಡಿಸೋಜಾ, ಲಿಯೋ ಅಧ್ಯಕ್ಷೆ ಸಂಜನಾ ಬಾಳಿಗ, ಕಲ್ಯಾಣಪುರ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಂದಕಿಶೋರ್, ಕೋಶಾಧಿಕಾರಿ ಸುರೇಂದ್ರ ಅಮೀನ್, ಕುಂದಾಪುರ ವೈಟ್ಝೋನ್ ಲಯನ್ಸ್ ಕ್ಲಬ್ ಅಧ್ಯಕ್ಷ ಹುಸೈನ್ ಹೈಕಾಡಿ, ಕಾರ್ಯದರ್ಶಿ ಪ್ರದೀಪ್ ಬಂಗೇರ, ಕೋಶಾಧಿಕಾರಿ ಸಂದೀಪ್ ಕಾಮತ್, ಕೆಮ್ಮಣ್ಣು ಲಯನ್ಸ್ ಕ್ಲಬ್ ಕೋಶಾಧಿಕಾರಿ ಹರೀಶ್ ಪಾಲನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂತನ ತಂಡದ ಪದಗ್ರಹಣ: ಜಗದೀಶ್ ಕೆಮ್ಮಣ್ಣು, ಸುಧಾಕರ್ ಕೋಟ್ಯಾನ್, ಹರೀಶ್ ಪಾಲನ್, ಸತೀಶ್ ಶೆಟ್ಟಿ, ಸಂದೀಪ್ ಶಂಕರ್, ಮಿಥಿಲೇಶ್ ಹಲುವಳ್ಳಿ, ನವೀನ್ ಕುಮಾರ್ ಗುಳಿಬೆಟ್ಟು, ಪ್ರದೀಪ್ ಎಸ್. ಆಚಾರ್ಯ, ಲಾಲುಕೃಷ್ಣ ಸಾಹು, ತಾರಾನಾಥ ಪೂಜಾರಿ, ಧರ್ಮರಾಜ್ ಸುವರ್ಣ, ಸುರೇಶ್ ಬಂಗೇರ, ಪದ್ಮನಾಭ ಕೋಟ್ಯಾನ್, ವಿನಯ ಪೂಜಾರಿ, ಕೆ. ಸುರೇಶ್ ರಾವ್, ಶ್ರೀಮತಿ ಸುಮತಿ ಪಾಲನ್, ಶ್ಯಾಮ್ ಸುಂದರ್, ಭಾಸ್ಕರ ಸಿ. ಪೂಜಾರಿ, ಶೇಖರ್ ಕುಂದರ್, ನಂದಕಿಶೋರ್, ತುಳಸಿದಾಸ್ ಸಾಲಿಯಾನ್, ಉಮೇಶ್ ಕುಂದರ್, ದೇವದಾಸ್ ಸುವರ್ಣ, ಪ್ರಸಾದ್ ಶ್ರೀಯಾನ್, ನಾಗರಾಜ್ ನಾಯ್ಕ್ ಹಾಗೂ ಚಿತ್ರ ಕುಮಾರ್ ಅವರು ಅಧಿಕಾರ ಸ್ವೀಕರಿಸಿದರು.
ಲಯನ್ಸ್ ಕ್ಲಬ್ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿರುವ ಸಂಸ್ಥೆಯ ಸದಸ್ಯರು, ತಮ್ಮ ಗಳಿಕೆಯ ಒಂದು ಪಾಲನ್ನು ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸುತ್ತಿದ್ದಾರೆ. ಪ್ರವಾಹ, ಬರಗಾಲ, ಅತಿವೃಷ್ಟಿ ಮುಂತಾದ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಹಾಗೂ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಮೂಲಕ ಸದಾ ಜನಪರ ಸೇವೆಗೆ ಮುಂದಾಗುತ್ತಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಹೇಮಾ ಸುಧಾಕರ್ ಕೋಟ್ಯಾನ್ ಪ್ರಾರ್ಥಿಸಿದರು. ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕೆಮ್ಮಣ್ಣು ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್ ಕೋಟ್ಯಾನ್ ವಂದನಾರ್ಪಣೆ ಮಾಡಿದರು.
– ಜಯ ಸಿ. ಪೂಜಾರಿ, ಕೆಳಾರ್ಕಳಬೆಟ್ಟು



