32 C
Mumbai
October 1, 2026
Mumbai News Kannada
ಮುಂಬಯಿ

ಶ್ರೀ ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಂದರ್ ಇದರ 10ನೇ ವಾರ್ಷಿಕ ಮಹಾಸಭೆ.



ಚಿತ್ರ, ವರದಿ: ಉಮೇಶ್ ಕೆ. ಅಂಚನ್

ಮೀರಾರೋಡ್,ಸೆ.30.ಶ್ರೀ ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಂದರ್ ಇದರ 10ನೇ ವಾರ್ಷಿಕ ಮಹಾಸಭೆಯು ಸೆ. 27ರಂದು ಮೀರಾ ರೋಡ್ ಪೂರ್ವದ ಸೆಕ್ಟರ್ 5ರಲ್ಲಿರುವ ನಾಯರ್ ಸಮಾಜದ ಕಾರ್ಯಾಲಯದಲ್ಲಿ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಣಿಗರ ಅಧ್ಯಕ್ಷತೆಯಲ್ಲಿ ನಡೆಯಿತು.
ಆರಂಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಸದ್ಗುರು ನಿತ್ಯಾನಂದ ಸ್ವಾಮಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು.
ಸಮಿತಿಯ ಗೌರವ ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಅಮವಾಸ್ಯೆ ಬೈಲು ವಾರ್ಷಿಕ ವರದಿಯನ್ನು ವಾಚಿಸಿ ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ಹಾಗೂ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.ಮುಂದಿನ ವರ್ಷದ ಲೆಕ್ಕಪರಿಶೋಧಕರನ್ನಾಗಿ ವಿಶಾಲ್ ಅಸೋಸಿಯೇಟ್ಸ್ ಅವರನ್ನು ಪುನರ್ ನೇಮಿಸಲಾಯಿತು.
ಪ್ರತೀ ವರ್ಷ ನಡೆಯುತ್ತಿರುವ ಗಣೇಶ್ ಪುರಿ ಪಾದಯಾತ್ರೆಯನ್ನು ಶನಿವಾರ 2027ರ ಫೆಬ್ರವರಿ 6 ರಂದು ನಡೆಸಲು ನಿಗದಿಸಲಾಯಿತು. ಉಪಸ್ಥಿತರಿದ್ದ ಸದಸ್ಯರು ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.
ಸಮಿತಿಯ ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ ಮಾತನಾಡಿ ಸದಸ್ಯರು ಸಂಸ್ಥೆಯ ಮೇಲೆ ಗೌರವಯುತವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಸೇವೆಯನ್ನು ಮಾಡಿ ಹಾಗೂ ಸದಸ್ಯತ್ವವನ್ನು ಹೆಚ್ಚಿಸಬೇಕೆಂದು ವಿನಂತಿಸಿದರು.
ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಣಿಗರು ಮಾತನಾಡಿ ಸಮಿತಿಗೊಂದು ಕಚೇರಿಯ ಅವಶ್ಯಕತೆ ಇದ್ದು ಆದಷ್ಟು ಬೇಗ ಖರೀದಿಸಲು ಸದಸ್ಯರೆಲ್ಲರೂ ಆರ್ಥಿಕ ಸಹಾಯವನ್ನು ದಾನಿಗಳಿಂದ ಪಡೆಯಲು ಪ್ರಯತ್ನಿಸಬೇಕೆಂದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಆನಂದ ಶೆಟ್ಟಿ ಕುಕ್ಕುಂದೂರು, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ದೇರಳಕಟ್ಟೆ,ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು, ಭುವಾಜಿ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿಯವರ ಧನ್ಯವಾದ ಸಮರ್ಪಣೆ ಯೊಂದಿಗೆ ಮಹಾಸಭೆ ಯು ಮುಕ್ತಾಯವಾಯಿತು.



Related posts

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ನಾಡಹಬ್ಬ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸಮೀಕ್ಷಾ ಪ್ರಶಾಂತ್ ಬಾಗಲ್ ಗೆ ಶೇ 86.4 ಅಂಕ.

Mumbai News Desk

​ಮುಂಬೈನಲ್ಲಿ ಭಕ್ತಿಪೂರ್ವಕವಾಗಿ ನಡೆದ ‘ಶುಭ ಶುಕ್ರವಾರ’: ಸಾಂತಾಕ್ರೂಜ್‌ನಲ್ಲಿ ಗಮನಸೆಳೆದ ‘ಶಿಲುಬೆಯ ನೇರ ಹಾದಿ’ ನಡಿಗೆ

Mumbai News Desk

ಜೀರ್ಣೋದ್ಧಾರಗೊಂಡ ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕುಂಭಾಭಿಷೇಕ.

Mumbai News Desk

ಕಾಲಘೋಡ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ 53ನೇ ವಾರ್ಷಿಕ ಮಹಾಪೂಜೆ

Mumbai News Desk