September 6, 2026
Mumbai News Kannada
ಮುಂಬಯಿ

ಬಿಲ್ಲವರ ಎಸೋಸಿಯೇಷನ್ ಮುಂಬೈ ಜೋಗೇಶ್ವರಿ ಸ್ಥಳೀಯ ಕಚೇರಿ ವತಿಯಿಂದ ಶ್ರೀ ಶನೇಶ್ವರ ಗ್ರಂಥ ಪಾರಾಯಣ





ಚಿತ್ರ,ವರದಿ : ರಮೇಶ್ ಉದ್ಯಾವರ

ಜೊಗೇಶ್ವರಿ, ಎ. 6: ಬಿಲ್ಲವರ ಎಸೋಸಿಯೇಷನ್ ಮುಂಬಯಿ ಜೋಗೇಶ್ವರಿ ಸ್ಥಳೀಯ ಕಚೇರಿ, 4ಎ/ ಪ್ರೇಮ್ಸನ್ ಇಂಡಸ್ಟ್ರಿಯಲ್ ಎಸ್ಟೇಟ್ ಕೇವ್ಸ್ ರೋಡ್ ಜೋಗೇಶ್ವರಿ ಪೂರ್ವ ವತಿಯಿಂದ ಎ 4 ರಂದು ಜೋಗೇಶ್ವರಿ ಪೂರ್ವದ ಜನತಾ ಕೊಲಾನಿ ರಾಷ್ಟ್ರೀಯ ಹೆದ್ದಾರಿ ಸಮೀಪರ ಶ್ರೀ ರಾಮ ಮಂದಿರದಲ್ಲಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಸದಸ್ಯರು ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶ್ರೀ ಶನೇಶ್ವರ ಗ್ರಂಥ ಪಾರಾಯಣ ಹರೀಶ್ ಶಾಂತಿ ಪೌರೋತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.


ಅಪರಾಹ್ನ 3 ಗಂಟೆಗೆ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸದಾನಂದ ಜಿ ಅಮೀನ್ ಕಟೀಲು ದಂಪತಿಗಳು ಕಳಶ ಪ್ರತಿಷ್ಠೆ ಪೂಜಾ ನೆರೆವೇರಿಸಿದರು.ಬಳಿಕ ಬಿಲ್ಲವರ ಎಸೋಸಿಯೇಷನ್ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಗೌರವ ಕಾರ್ಯಾಧ್ಯಕ್ಷ ಹೆರ್ಗ ಬಾಬು ಪೂಜಾರಿ ಕಾರ್ಯಾಧ್ಯಕ್ಷ ಸದಾನಂದ ಜಿ ಅಮೀನ್ ಕಟೀಲು ಕೋಶಾಧಿಕಾರಿ ರವಿ ಸನಿಲ್ ಗಣ್ಯರು ಕೇಂದ್ರ ಕಚೇರಿಯ ಕಾರ್ಯಕಾರಿ ಸಮಿತಿ ಸದಸ್ಯರು ಜ್ಯೋತಿ ಬೆಳಗಿಸಿ ಶ್ರೀ ಶನೇಶ್ವರ ಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು.


ಬಳಿಕ ಗುರು ನಾರಾಯಣ ಯಕ್ಷಗಾನ ಮಂಡಳಿ ಸಾಂತಕ್ರೂಜ್ ಕಲಾವಿದರು ಹಿನ್ನೆಲೆ ಕಲಾವಿದರ ಸಹಯೋಗದಲ್ಲಿ ಶನೇಶ್ವರ ಗ್ರಂಥ ಪಾರಾಯಣ ಪ್ರಾರಂಭಗೊಂಡಿತು. ಈ ಮಧ್ಯೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರುವಿವಿಧ ಸ್ಥಳೀಯ ಸಮಿತಿಯ ಸದಸ್ಯರುಗಳನ್ನು ಹಾಗೂ ಶನಿಗ್ರಂಥ ಪಾರಾಯಣದ ವಾಚಟಿಕೆ ಅರ್ಥದಾರಿ ಹಿನ್ನೆಲೆಯ ಸಹವರ್ತಿಯವರನ್ನು ಕಚೇರಿಯ ಗೌರವ ಕಾರ್ಯಧ್ಯಕ್ಷ ಹೆರ್ಗ ಬಾಬು ಪೂಜಾರಿ ಕಾರ್ಯಾಧ್ಯಕ್ಷ ಸದಾನಂದ ಅಮೀನ್ ಕಟೀಲ್ ಗೌರವಿಸಿ ಶನಿದೇವರ ಪ್ರಸಾದ ನೀಡಿದರು.


ರಾತ್ರಿ 9ರಿಂದ ಹರೀಶ್ ಶಾಂತಿ ಪೌರೋತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ಮಹಾ ಮಂಗಳಾರತಿ ನೆರವೇರಿಸಿದರು. ಸ್ಥಳೀಯ ಸಮಿತಿಯ ಅರ್ಚಕ ಶ್ರೀಧರ ಪೂಜಾರಿ ಸಹಕರಿಸಿದರು. ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಕಾರ್ಯಾಧ್ಯಕ್ಷ ಸದಾನಂದ ಜಿ ಅಮೀನ್ ಕಟೀಲು
ದಂಪತಿಗಳು ಗೌರವ ಕಾರ್ಯಾಧ್ಯಕ್ಷ ಹೆರ್ಗ ಬಾಬು ಪೂಜಾರಿ ದಂಪತಿಗಳು ಪ್ರಸಾದ ಸ್ವೀಕರಿಸಿದರು ಬಳಿಕ ಸಮಿತಿಯ ಸದಸ್ಯರು ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನೆರವೇರಿತು ಆ ಬಳಿಕ ಗೌರವ ಕಾರ್ಯಾಧ್ಯಕ್ಷ ಹೆರ್ಗ ಬಾಬು ಪೂಜಾರಿ ಕುಟುಂಬಸ್ಥರ ಪ್ರಾಯೋಜಕತ್ವದ ಅನ್ನ ಸಂತರ್ಪಣೆ ನೆರವೇರಿತು.
ಕೇಂದ್ರ ಕಚೇರಿಯ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ ಸಾಲ್ಯಾನ್ ಗೌರವ ಕೋಶಾಧಿಕಾರಿ ರವಿ ಎಸ್ ಸನಿಲ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ ಕೋಟ್ಯಾನ್ ಉಪ ಕಾರ್ಯಾಧ್ಯಕ್ಷೆ ಗಿರಿಜಾ ಚಂದ್ರಶೇಖರ್ ಕಾರ್ಯದರ್ಶಿ ಲತಾ ಬಂಗೇರ ಸಾಮಾಜಿಕ ಧಾರ್ಮಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಜಿ ಅಂಚನ್ ಕಾರ್ಯದರ್ಶಿ ಹಾಗೂ ಸ್ಥಳೀಯ ಸಮಿತಿಯ ಪ್ರತಿನಿಧಿ ಸದಾಶಿವ ವೈ ಕೋಟ್ಯಾನ್ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಮೊಹನ್ ಕೋಟ್ಯಾನ್ ಜೊತೆ ಕಾರ್ಯದರ್ಶಿ ಕೇಶವ ಕೋಟ್ಯಾನ್ ಅಕ್ಷಯ ಸಂಪಾದಕ ಬಳಗದ ಹರೀಶ್ ಪೂಜಾರಿ ಕೊಕ್ಕರ್ಣೆ ಕಾರ್ಯಕಾರಿ ಸಮಿತಿ ಸದಸ್ಯ ಶಂಕರ್ ಡಿ ಪೂಜಾರಿ ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು ಕೇಂದ್ರ ಕಚೇರಿ ಸಾಂಸ್ಕೃತಿಕ ಉಪವಿಭಾಗ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಪಡು ಇನ್ನಾ ಭಾಯಂದರ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಶೇಖರ್ ಪೂಜಾರಿ ಸಲಹೆಗಾರ ಕೆ ಎಂ ಕೋಟ್ಯಾನ್ ಚಿತ್ರಾಪು , ಮಲಾಡ್ ಸ್ಥಳೀಯ ಕಚೇರಿಯ ಉಪ ಕಾರ್ಯಾಧ್ಯಕ್ಷ ತುಳಸಿದಾಸ್ ಆಮೀನ್ ಗೋರೆಗಾಂವ್ ಸ್ಥಳೀಯ ಕಚೇರಿಯ ಸುರೇಶ್ಅಂಚನ್ ವಿಶ್ವನಾಥ್ ತೋನ್ಸೆ ಹಾಗೂ ವಿವಿಧ ಸ್ಥಳೀಯ ಕಚೇರಿಯ ಸದಸ್ಯರುಗಳು ಉಪಸ್ಥಿತರಿದ್ದರು
ಸ್ಥಳೀಯ ಕಚೇರಿಯ ಉಪಕಾರ್ಯ ಅಧ್ಯಕ್ಷ ರಾದ ಸಂತೋಷ್ ಜಿ ಪೂಜಾರಿ ಉದಯ ಸಾಲಿಯನ್ ಕಾರ್ಯದರ್ಶಿ ರಮೇಶ್ ಪೂಜಾರಿ ಗೋಶಾಧಿಕಾರಿ ದೇವದಾಸ್ ಸುವರ್ಣ ಜೊತೆ ಕಾರ್ಯದರ್ಶಿ ಶಂಕರ್ ಪೂಜಾರಿ ಜೊತೆ ಕೋಶಾಧಿಕಾರಿ ರವೀಂದ್ರ ಪೂಜಾರಿ ಸಲಹೆಗಾರ ಸಂಜೀವ ಪೂಜಾರಿ ಕೇಂದ್ರ ಕಚೇರಿಯ ಪ್ರಭಾರಿ ಜಯಂತಿ ಬಿ ಉಳ್ಳಾಲ್ ಸ್ಥಳೀಯ ಕಚೇರಿಯ ಸಮಿತಿ ಸದಸ್ಯರಾದ ಅರುಣ್ ಕೋಟ್ಯಾನ್ ವಸಂತ್ಎನ್ ಪೂಜಾರಿ ಶಶಿ ಪೂಜಾರಿ ಮಲ್ಲಿಕಾ ಪೂಜಾರಿ ವಸಂತಿ ಪೂಜಾರಿ ಹರಿಣಿ ಎ ಪೂಜಾರಿ ಚಂದ್ರಶೇಖರ್ ಪೂಜಾರಿ ಭೋಜ ಎಸ್ ಕೋಟ್ಯಾನ್ ಆಹ್ವಾನಿತ ಸದಸ್ಯರಾದ ಪ್ರೇಮಾ ಪೂಜಾರಿ ತಾರಾ ಪೂಜಾರಿ ಜ್ಯೋತಿ ಪೂಜಾರಿ ಸಂಗೀತ ಅರುಣ್ಅಂ ಚನ್ ಮೋಹನ್ ದಾಸ್ ಪೂಜಾರಿ ಸರೋಜಾ ಪೂಜಾರಿ ಗಾಯತ್ರಿ ಪೂಜಾರಿ ರೇಖಾ ಅಶೋಕ ಅಮಿನ್ ಶಾಲಿನಿ ಪೂಜಾರಿ ಮತ್ತು ಯುವ ವಿಭಾಗದ ಸದಸ್ಯರು ಉಪಸ್ಥಿರಿದ್ದು ಕಾರ್ಯಕ್ರಮದಲ್ಲಿ ಸಹಕರಿಸಿದರು.
ಜನಾರ್ದನ ಪೂಜಾರಿ ಕುಟುಂಬಸ್ಥರು ಹೂವಿನ ಅಲಂಕಾರ ಮತ್ತು ಅರುಣ್ ಕೋಟ್ಯಾನ್ ಕುಟುಂಬಸ್ಥರು ಹಣ್ಣು ಹಂಪಲು,ಪ್ರಸಾದ ನೀಡಿ ಸಹಕರಿಸಿದರು.



Related posts

ಮಲಾಡ್ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ,

Mumbai News Desk

ಕಲ್ವಾದಲ್ಲಿ ಶನಿ ಮಹಾಪೂಜೆ: ಶ್ರೀ ಗುರುನಾರಾಯಣ ಭಜನಾ ಮಂಡಳಿ ಉದ್ಘಾಟನೆ

Mumbai News Desk

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿ, ಸಂಚಾಲಕರು ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾಗಿ ಸೋಮನಾಥ ಪೂಜಾರಿ ಪುನರಾಯ್ಕೆ

Mumbai News Desk

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 34ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk