35 C
Mumbai
October 3, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಸೇವಾ ಸಮಿತಿ – ಕಿಸಾನ್‌ನಗರ, ಥಾಣೆ ಪಶ್ಚಿಮ: ಅಕ್ಟೋಬರ್ 4ರಂದು ರಕ್ತದಾನ ಶಿಬಿರ



ರಕ್ತದಾನವು ಸಮಾಜಕ್ಕೆ ನಾವು ನೀಡಬಹುದಾದ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಕೊಡುಗೆಯಾಗಿದೆ. ಶ್ರೀ ಅಯ್ಯಪ್ಪ ಸೇವಾ ಸಮಿತಿ, ಕಿಸಾನ್ ನಗರ ಥಾಣೆ ವತಿಯಿಂದ 20ನೇ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಮಹತ್ಕಾರ್ಯಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಪ್ರತಿಯೊಂದು ರಕ್ತದಾನವೂ ಮೂರು ಜನರ ಜೀವವನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ. ನಾವು ನೀಡುವ ಸಣ್ಣ ಸಹಾಯವು ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಮತ್ತು ನೂರಾರು ಜೀವಗಳಿಗೆ ಹೊಸ ಆಶಾದೀಪವಾಗಲಿದೆ.
ಈ ಬೃಹತ್ ರಕ್ತದಾನ ಕಾರ್ಯಕ್ರಮವು ಭಾನುವಾರ, ಅಕ್ಟೋಬರ್ 4,2026ರಂದು ಬೆಳಿಗ್ಗೆ 9ರಿಂದ ಸಾಯಂಕಾಲ 4:೦೦ ರವರೆಗೆ ನಡೆಯಲಿದೆ.
ಕಾರ್ಯಕ್ರಮದ ಸ್ಥಳ: ಓಧವ್‌ಬಾಗ್ ಮೈದಾನ, ಕಿಸಾನ್ ನಗರ ಸಂಖ್ಯೆ 01, ಥಾಣೆ ಪಶ್ಚಿಮ – 400604
ಸೇವೆಯಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಸಂಪರ್ಕ ಸಂಖ್ಯೆಗಳು: 7666855924, 7498169626, 7021869714 ಮೂಲಕ ಸಂಪರ್ಕಿಸಬಹುದು.
ಈ ರಕ್ತದಾನ ಶಿಬಿರಕ್ಕೆ ಶ್ರೀ ಮಹಾವೀರ ಸಾಮಾಜಿಕ ಸಂಸ್ಥೆ, ಕಿಸಾನ್ ನಗರ; ಶಿವ ಸಂಕಲ್ಪ ಮಿತ್ರ ಮಂಡಲ, ಕಿಸಾನ್ ನಗರ; ಪಂಚಶೀಲ ಮಿತ್ರ ಮಂಡಲ ಮತ್ತು ಸಂಯುಕ್ತ ಕೊಂಕಣ ವಿಕಾಸ ಸಾಮಾಜಿಕ ಸಂಸ್ಥೆ ಸಂಪೂರ್ಣ ಬೆಂಬಲ ನೀಡುತ್ತಿವೆ. ನೀವೂ ಸಹ ಈ ದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜೀವ ಉಳಿಸುವ ನಾಯಕರಾಗಿ.



Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು – ಮಾ. 6ಕ್ಕೆ ಸ್ತನಪಾನ ಕೊಠಡಿ ಉದ್ಘಾಟನೆ

Mumbai News Desk

ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿ ಬಿಜೂರುಅ. 4 ರಂದು ಗರಡಿಯ ಜೀರ್ಣೋದ್ಧಾರದ ಕುರಿತು ಸಮಾಲೋಚನ ಸಭೆ

Mumbai News Desk

ಶ್ರೀ ಹಟ್ಟಿಯಂಗಡಿ ಮೇಳದ ಹನ್ನೆರಡನೇ ವರ್ಷದ ಮುಂಬಯಿ ಪ್ರವಾಸ: ಜುಲೈ 10 ರಿಂದ 25 ರವರೆಗೆ ಯಕ್ಷಗಾನ ವೈಭವ

Mumbai News Desk

ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನ ಗೋಂಟು, ಮುಲ್ಕಿ : ಎ. 22ರಿಂದ ಎ. 26ರ ತನಕ ಬ್ರಹ್ಮ ಕಲಶೋತ್ಸವ ಮತ್ತು ವರ್ಧಂತ್ಯೋತ್ಸವ

Mumbai News Desk

ಜಗಜ್ಯೋತಿ ಕಲಾವೃಂದದಿಂದ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಕಥಾ ಮತ್ತು ಕವಿತಾ ಪ್ರಶಸ್ತಿ ಸ್ಪರ್ಧೆ ಆಹ್ವಾನ

Mumbai News Desk

ದೋಲ್ಗೊಟ್ಟು, ಕೆಲ್ಲಪುತ್ತಿಗೆ, ಶ್ರೀ ಧರ್ಮಶಾಸ್ತ ಭಕ್ತವೃಂದ,ಜ.11 ರಂದು 23ನೇ ಅಯ್ಯಪ್ಪ ಮಹಾಪೂಜೆ ಅನ್ನಸಂತರ್ಪಣೆ,

Mumbai News Desk