35 C
Mumbai
October 3, 2026
Mumbai News Kannada
ಮುಂಬಯಿ

ದಿನೇಶ್ ಕೋಟ್ಯಾನ್ ಬಳಗದ 90 ಕಲಾವಿದರ ವೈಭವ: ಬಾಲವೀರ್ ಫೋರ್ಟ್ ಗಣೇಶೋತ್ಸವದ ಶೋಭಾಯಾತ್ರೆಗೆ ತುಳುನಾಡಿನ ಮೆರುಗು



ಜಾಗತಿಕ ವಾಣಿಜ್ಯ ನಗರಿ ಮುಂಬಯಿಯ ಹೃದಯಭಾಗ ಎಂದೇ ಖ್ಯಾತವಾಗಿರುವ ಫೋರ್ಟ್‌ನ ಸೆಂಟ್ರಲ್ ಹೋಟೆಲ್ ಸಮೀಪ, ಪ್ರತಿಷ್ಠಿತ ‘ಬಾಲವೀರ್ ಫೋರ್ಟ್’ ಸಂಸ್ಥೆಯ ವತಿಯಿಂದ ಪ್ರತಿವರ್ಷ ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಾಂಪ್ರದಾಯಿಕ ಸಂಭ್ರಮದೊಂದಿಗೆ ಆಚರಿಸಲ್ಪಡುವ ಸಾರ್ವಜನಿಕ ಗಣೇಶೋತ್ಸವವು ಈ ಬಾರಿಯೂ ಅಭೂತಪೂರ್ವ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು. ಸೆಪ್ಟೆಂಬರ್ 19ರಿಂದ ಸೆಪ್ಟೆಂಬರ್ 25ರವರೆಗೆ ವಿಧಿವತ್ತಾದ ಧಾರ್ಮಿಕ ವಿಧಿವಿಧಾನಗಳು, ತನು-ಮನ ತಣಿಸುವ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇಡೀ ನಗರವೇ ಭಕ್ತಿಪರವಶತೆಯಲ್ಲಿ ಮುಳುಗೇಳುವಂತೆ ಶ್ರೀ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಬಾಲೆವೀರ್ ಫೋರ್ಟ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಸಿ. ಹೆಗ್ಡೆ ಅವರ ಸುಸಂಘಟಿತ ನಾಯಕತ್ವದಲ್ಲಿ ನಡೆದ ಈ ಪವಿತ್ರ ಮಹೋತ್ಸವದಲ್ಲಿ ನಿವೃತ್ತ ಕಸ್ಟಮ್ಸ್ ಅಧಿಕಾರಿ ರೋಹಿತ್ ಹೆಗ್ಡೆ, ಸಮಾಜ ಶ್ರೇಷ್ಠರಾದ ಡಾ. ಚಿಂತನ್ ಆರ್. ಹೆಗ್ಡೆ ಸೇರಿದಂತೆ ವಿವಿಧ ರಂಗಗಳ ಅನೇಕಣ್ಯಪ್ರಮುಖರು, ಸಮಾಜಮುಖಿ ಧುರೀಣರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ ಶ್ರೀದೇವರ ಕೃಪಾಪೋಷಣೆಗೆ ಪಾತ್ರರಾದರು.

ವಿಜೃಂಭಣೆಯ ಮಹಾಮಂಗಳಾರತಿ ಹಾಗೂ ಭವ್ಯ ಮಹಾಪ್ರಸಾದ ವಿತರಣೆ:
ಸೆಪ್ಟೆಂಬರ್ 25ರಂದು ಗಣೇಶಮೂರ್ತಿಯ ವಿಸರ್ಜನಾ ಪೂಜೆಯ ಪ್ರಯುಕ್ತ ಶಾಸ್ತ್ರೋಕ್ತವಾಗಿ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಧೂಪ-ದೀಪ, ಪುಷ್ಪಾರ್ಚನೆಗಳೊಂದಿಗೆ ನೆರವೇರಿದ ಈ ಮಂಗಳಾರತಿಯ ಶುಭವೇಳೆಯಲ್ಲಿ ಸದ್ಭಕ್ತರು ಭಕ್ತಿಭಾವದಿಂದ ಕೈಜೋಡಿಸಿ ಪ್ರಾರ್ಥಿಸಿದರು. ಪೂಜೆಯ ಅನಂತರ ಆಗಮಿಸಿದ ಸುಮಾರು 6,000ಕ್ಕೂ ಹೆಚ್ಚು ಭಕ್ತಾದಿಗಳಿಗೆ ಸುಚಿ-ರುಚಿಯಾದ ಮಹಾ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದ್ದು, ಸದ್ಭಕ್ತರೆಲ್ಲರೂ ಶ್ರದ್ಧೆಯಿಂದ ಮಹಾಪ್ರಸಾದವನ್ನು ಸ್ವೀಕರಿಸಿ ಧನ್ಯತಾಭಾವವನ್ನು ಅನುಭವಿಸಿದರು.

ದಿನೇಶ್ ಕೋಟ್ಯಾನ್ ಬಳಗದ ದಕ್ಷಿಣ ಕನ್ನಡದ ಕಲಾವಿದರ ವೈಭವದ ಕಲಾ ಪ್ರದರ್ಶನ:
ರಾತ್ರಿ ಜರುಗಿದ ಶ್ರೀ ಗಣೇಶಮೂರ್ತಿಯ ಭವ್ಯ ವಿಸರ್ಜನಾ ಮೆರವಣಿಗೆಯಂತೂ ಸಮಸ್ತ ಮುಂಬಯಿ ಕರಾವಳಿ ಜನತೆಯ ಕಣ್ಣುಗಳಿಗೆ ಅಪೂರ್ವ ಹಬ್ಬವನ್ನು ಉಣಿಸಿತು. ಖ್ಯಾತ ಸೆಕ್ಸೊಪೋನ್ ವಾದಕರು, ಕಲಾ ಪೋಷಕರು ಹಾಗೂ ಪ್ರಸಿದ್ಧ ಸಂಘಟಕರಾದ ಜೆರಿಮೇರಿ ದಿನೇಶ್ ಕೋಟ್ಯಾನ್ ಅವರ ಪ್ರತ್ಯಕ್ಷ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸಿದ ಸುಮಾರು 90ಕ್ಕೂ ಹೆಚ್ಚು ನಿಕಟಪೂರ್ವ ಪರಿಣಿತ ಸಾಂಸ್ಕೃತಿಕ ಕಲಾವಿದರು ಶೋಭಾಯಾತ್ರೆಯುದ್ದಕ್ಕೂ ಪ್ರದರ್ಶಿಸಿದ ಸಾಂಪ್ರದಾಯಿಕ ಕಲಾ ಪ್ರದರ್ಶನಗಳು ಪ್ರತಿಯೊಬ್ಬ ವೀಕ್ಷಕರನ್ನು ಮನಸೋಲುವಂತೆ ಮಾಡಿದವು. ದಿನೇಶ್ ಕೋಟ್ಯಾನ್ ಅವರ ಯಶಸ್ವಿ ಚಾಲನೆಯಲ್ಲಿ ಗರ್ಜಿಸಿದ ಜಾನಪದ ಕಲೆಯಾದ ರೌದ್ರಾವತಾರದ ಹುಲಿವೇಷ, ಆಕರ್ಷಕ ಗೊಂಬೆ ವೇಷ, ದೈವಿಕ ಶಕ್ತಿಯ ಪ್ರತೀಕವಾದ ಭಕ್ತಪ್ರಹ್ಲಾದ-ನರಸಿಂಹ ವೇಷ ಸೇರಿದಂತೆ ತುಳುನಾಡಿನ ಸಮೃದ್ಧ ಜಾನಪದ ಹಾಗೂ ಸಾಂಪ್ರದಾಯಿಕ ವೇಷಭೂಷಣಗಳ ಸಾಹಸಮಯ ನೃತ್ಯ ರೂಪಕಗಳು ಶೋಭಾಯಾತ್ರೆಗೆ ಅಪ್ರತಿಮವಾದ ಜಾನಪದ ಮೆರುಗನ್ನು ತಂದುಕೊಟ್ಟವು.

ಭಾವಪರವಶಗೊಳಿಸಿದ ಮೆರವಣಿಗೆ – ಭಕ್ತಸಾಗರದ ಸಂಭ್ರಮ:
ಆರಂಭದಿಂದ ಮುಕ್ತಾಯದವರೆಗೆ ಭಾರಿ ಜನಸ್ತೋಮವನ್ನು ಆಕರ್ಷಿಸಿದ ಈ ಭವ್ಯ ವಿಸರ್ಜನಾ ಶೋಭಾಯಾತ್ರೆಯುದ್ದಕ್ಕೂ ಗಣೇಶನ ಭಕ್ತಿಗೀತೆಗಳ ನಾದ, ತಾಸೆ-ಚಂಡೆಗಳ ಗಂಭೀರ ಧ್ವನಿ ಹಾಗೂ ತುಳುನಾಡಿನ ಪರಂಪರಾಗತ ಕಲಾಪ್ರಕಾರಗಳು ಮಿಳಿತಗೊಂಡು ಸಂಭ್ರಮದ ವಾತಾವರಣ ಸೃಷ್ಟಿಸಿದವು. ಬೀದಿಬೀದಿಗಳಲ್ಲಿ ನೆರೆದಿದ್ದ ಸಾವಿರಾರು ಸದ್ಭಕ್ತರು ಜಯಘೋಷಗಳೊಂದಿಗೆ, ಕಲಾವಿದರ ಕಣ್ಣುಕೋರೈಸುವ ಪ್ರದರ್ಶನಗಳನ್ನು ಕಣ್ಣುಂಬಿಕೊಂಡು ಮೆರವಣಿಗೆಯ ಭಕ್ತಿಯುತ ಕ್ಷಣಗಳನ್ನು ಕೊಂಡಾಡಿದರು.
ಸಾಧಕರು ಹಾಗೂ ಅಭ್ಯಾಗತರಿಗೆ ಗೌರವಾದರ:
ಈ ವೈಭವದ ಸಂದರ್ಭದಲ್ಲಿ ಬಾಲೆವೀರ್ ಫೋರ್ಟ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಅಧ್ಯಕ್ಷ ರಾಜೇಶ್ ಸಿ. ಹೆಗ್ಡೆ, ಉಪಾಧ್ಯಕ್ಷ ಲಾರೆನ್ಸ್ ರೆಗೊ, ಗೌರವ ಪ್ರಧಾನ ಕಾರ್ಯದರ್ಶಿ ಟೋನಿ (ಬಾಬಾ) ಫರ್ನಾಂಡಿಸ್, ಗೌರವ ಖಜಾಂಚಿ ಮನೋಜ್ (ಪಪ್ಪು) ನಾಗ್ ಹಾಗೂ ಮಂಡಳಿಯ ಸಮಸ್ತ ಪದಾಧಿಕಾರಿಗಳು ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದು, ಉತ್ಸವದ ಯಶಸ್ಸಿಗೆ ಶ್ರಮಿಸಿದ ಗಣ್ಯರನ್ನು, ಕಲಾತಂಡದ ನೇತಾರ ದಿನೇಶ್ ಕೋಟ್ಯಾನ್ ಅವರನ್ನು ಹಾಗೂ ಆಗಮಿಸಿದ ಸದ್ಭಕ್ತರನ್ನು ಹೃತ್ಪೂರ್ವಕವಾಗಿ ಗೌರವಿಸಿ ಸತ್ಕರಿಸಿದರು.

ಒಟ್ಟಾರೆಯಾಗಿ, ಧಾರ್ಮಿಕ ಶ್ರದ್ಧೆ, ಸಾಮಾಜಿಕ ಸಾಮರಸ್ಯ ಹಾಗೂ ತುಳುನಾಡಿನ ಅಪೂರ್ವ ಜಾನಪದ ಕಲಾ ಪರಂಪರೆಯ ಸಂಗಮವಾಗಿ ಮೂಡಿಬಂದ ಬಾಲೆವೀರ್ ಫೋರ್ಟ್ ಗಣೇಶೋತ್ಸವದ ಈ ವಿಸರ್ಜನಾ ಶೋಭಾಯಾತ್ರೆಯು ಮುಂಬಯಿಯ ಫೋರ್ಟ್ ಪ್ರದೇಶದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಯಶಸ್ವಿಯಾಗಿ ಸಂಪನ್ನಗೊಂಡಿತು.



Related posts

ಮುಂಬೈ : ಭಾಂಡುಪ್‌ನಲ್ಲಿ ಪಾದಚಾರಿಗಳಿಗೆ ಬೆಸ್ಟ್ ಬಸ್ ಡಿಕ್ಕಿ ಹೊಡೆದ ಪರಿಣಾಮ 4 ಸಾವು, 8 ಜನರಿಗೆ ಗಾಯ

Mumbai News Desk

ಮುಂಬೈ : ಗೋರೆಗಾಂವ್ ಅಗ್ನಿ ಅವಘಡ: ಒಂದೇ ಕುಟುಂಬದ ಮೂವರು ಸಾವು.

Mumbai News Desk

ಮಹಾರಾಷ್ಟ್ರ ಚುಣಾವಣಾ ಸಹ ಪ್ರಮುಖರಾದ ಅಶ್ವಿನಿ ಎಮ್. ಎಲ್. ಮುಂಬಯಿ ಪ್ರವಾಸ

Mumbai News Desk

ಭಾರತ್ ಬ್ಯಾಂಕ್ ಈ ವರ್ಷದ 2024 ಕ್ಯಾಲೆಂಡರ್ ಬಿಡುಗಡೆ.

Mumbai News Desk

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರಂಭದ ಉದ್ಘಾಟನೆ

Mumbai News Desk

ಸಾನ್ವಿ ಸುಧೀರ್ ಆಚಾರ್ಯಗೆ ಶೇ. 82 ಅಂಕ

Mumbai News Desk