33 C
Mumbai
October 5, 2026
Mumbai News Kannada
ಪ್ರಕಟಣೆ

ಜೋಗೇಶ್ವರಿ ಶ್ರೀ ಮಹಾಕಾಳಿ ಮಂದಿರ: ಅ. 11 ರಿಂದ 20ರ ವರೆಗೆ 62ನೇ ವಾರ್ಷಿಕ ನವರಾತ್ರಿ, ದಸರಾ ಮಹೋತ್ಸವ



ಮುಂಬಯಿ: ಜೋಗೇಶ್ವರಿ ಪೂರ್ವದ ಪ್ರೇಮ್‌ನಗರ ಕ್ವಾರ್ಟರ್ಸ್ ಕಾಲೊನಿಯಲ್ಲಿರುವ ಶ್ರೀ ಮಹಾಕಾಳಿ ಮಂದಿರದಲ್ಲಿ 62ನೇ ವರ್ಷದ ನವರಾತ್ರಿ ಹಾಗೂ ದಸರಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಲಿದೆ.

ಅ. 11ರ ಭಾನುವಾರ ಬೆಳಿಗ್ಗೆ 8:30ಕ್ಕೆ ಗಣಹೋಮದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ಸಂಜೆ 6:00ಕ್ಕೆ ಘಟಸ್ಥಾಪನೆ ಹಾಗೂ ರಾತ್ರಿ ವಿಶೇಷ ಪೂಜಾ ಸೇವೆಗಳೊಂದಿಗೆ ಆವೇಶ ಪೂಜೆ ಜರುಗಲಿದೆ.

ಉತ್ಸವದ ಪ್ರಯುಕ್ತ ಪ್ರತಿದಿನ ಸಂಜೆ 7:00ರಿಂದ ಶ್ರೀ ಶನಿಗ್ರಂಥ ಪಾರಾಯಣ, ಭಜನೆ, ಸೇವಾ ಪೂಜೆಗಳು, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಅ. 14ರ ಬುಧವಾರ ಸಂಜೆ 5:00ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಅ. 15ರಂದು ಆವೇಶ ಪೂಜೆ, ಅ. 16ರ ಶುಕ್ರವಾರ ಮಧ್ಯಾಹ್ನ 3:30ರಿಂದ ಚಂಡಿಕಾ ಹೋಮ, ಅ. 18ರ ಭಾನುವಾರ ಸಂಜೆ 6:00ರಿಂದ ದೇವಿ ಸಹಸ್ರನಾಮಾವಳಿ ಪಠಣ ನಡೆಯಲಿದೆ.

ಅ. 19ರಂದು ರಾತ್ರಿ ಮಹಾಪೂಜೆಯ ನಂತರ ಆಮಂತ್ರಿತ ಭಜನಾ ಮಂಡಳಿಗಳಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ಹಾಗೂ ಅ. 20ರಂದು ಮಧ್ಯಾಹ್ನ 2:00ರಿಂದ ಭಜನೆ, ಆರತಿ, ಆವೇಶ, ಪಂಚಾಮೃತಾಭಿಷೇಕ ಮತ್ತು ಘಟ ವಿಸರ್ಜನಾ ಮೆರವಣಿಗೆ ಸಂಪನ್ನಗೊಳ್ಳಲಿದೆ.

ಶ್ರೀ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಜರುಗುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿ, ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಆಡಳಿತ ಮಂಡಳಿ, ಕಾರ್ಯಕಾರಿಣಿ ಸಮಿತಿ ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.



Related posts

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಸೆಪ್ಟೆಂಬರ್ 27ರಂದು ಸುವರ್ಣ ಸಂಭ್ರಮ: ದಾಸರ ಭಜನಾ ಸ್ಪರ್ಧೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ

Mumbai News Desk

ಜು 27: ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ, ತುಳು ನಾಟಕ,

Mumbai News Desk

ಸೆ.7,8 ರಂದು ಕುಲಾಲ ಸಂಘ ಮುಂಬಯಿ ವತಿಯಿಂದ ಥಾಣೆ ಪಶ್ಚಿಮ ಗೋಡ್ ಬಂದರ್ ನ ಸಂಘದ ನಿವೇಶನದಲ್ಲಿ ಗಣೇಶೋತ್ಸವ ಸಂಭ್ರಮ,

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಉನ್ನತ ಶಿಕ್ಷಣ ಸಂಸ್ಥೆ,ಫೆ. 26. ವಾರ್ಷಿಕೋತ್ಸವ, ಪದವಿ ಪ್ರಧಾನ ಸಮಾರಂಭ

Mumbai News Desk

ಬೊರಿವಿಲಿ ಶ್ರೀ ಮಹೀಷಮರ್ದಿನಿ ದೇವಸ್ಥಾನ ದಲ್ಲಿ ಶ್ರೀ ರಾಮ ಪ್ರತಿಷ್ಠಾ ಮಹೋತ್ಸವ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ : ಮೀರಾ ಭಾಯಂದರ್ ಶಾಖೆಯ ವತಿಯಿಂದ ಜನೆವರಿ 18ರಂದು ‘ಕ್ರೀಡಾಕೂಟ – 2026’

Mumbai News Desk