October 17, 2026
Mumbai News Kannada
ಸುದ್ದಿ

ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಭಾ ಸುರ್ವರ್ಣ ಅವರಿಗೆ ‘ಮೈಲ್ ಸ್ಟೋನ್ ಗ್ಲೋಬಲ್ ಪೀಸ್’ ಅಂಬಾಸಿಡರ್’ ಪ್ರಶಸ್ತಿ



ಮುಂಬೈಯಲ್ಲಿ ಸಾಮಾಜಿಕ ಸೇವೆ ಹಾಗೂ ವೈಯಕ್ತಿಕ ಸಾಧನೆಗಳ ಮೂಲಕ ಗುರುತಿಸಿಕೊಂಡಿರುವ ಪ್ರಭಾ ಸುರ್ವರ್ಣ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಗೌರವಕ್ಕೆ ಪಾತ್ರರಾಗಿದ್ದಾರೆ. ಮೈಲ್ ಸ್ಟೋನ್ ವರ್ಲ್ಡ್ ಪೇಜೆಂಟ್ಸ್ ಆಯೋಜಿಸಿದ ಪ್ರತಿಷ್ಠಿತ ‘ಮೈಲ್ ಸ್ಟೋನ್ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ’ಯಲ್ಲಿ ಅವರಿಗೆ ‘ಮಿಸೆಸ್‌ಸ್ಟಾರ್ ಗ್ಲೋಬಲ್ ಅಂಬಾಸಿಡರ್ ಆಫ್ ಪೀಸ್’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ವೈಯಕ್ತಿಕ ಪ್ರತಿಭೆ, ಆತ್ಮವಿಶ್ವಾಸ, ಸಮಾಜದ ಬಗೆಗಿನ ಕಾಳಜಿ ಹಾಗೂ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡುವ ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಭಾ ಸುರ್ವರ್ಣ ಅವರಿಗೆ ದೊರೆತ ಮನ್ನಣೆ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಗೌರವವು ಅವರ ಸಾಧನೆಗೆ ಮತ್ತೊಂದು ಹೆಮ್ಮೆಯ ಗರಿಯನ್ನು ಸೇರಿಸಿದೆ.

ಅಕ್ಟೋಬರ್ 10ರಂದು ಈಜಿಪ್ಟ್‌ನಲ್ಲಿ ನಡೆದ ಮೈಲ್ ಸ್ಟೋನ್ ಗ್ಲೋಬಲ್ ಅವಾರ್ಡ್ಸ್ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಖ್ಯಾತ ಉದ್ಯಮಿ ಹಾಗೂ ಹಾಲಿವುಡ್ ಆಕ್ವಾ ಪಾರ್ಕ್‌ನ ಮಾಲೀಕ ಮೊಹಮ್ಮದ್ ಎಲ್ ಮಸೌದ್ ಅವರು ಪ್ರಭಾ ಸುರ್ವರ್ಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು

ಸೌಂದರ್ಯ ಸ್ಪರ್ಧೆಗಳು ಕೇವಲ ಬಾಹ್ಯ ಸೌಂದರ್ಯದ ಪ್ರದರ್ಶನಕ್ಕೆ ಸೀಮಿತವಾಗದೆ, ಮಹಿಳೆಯರಲ್ಲಿರುವ ಪ್ರತಿಭೆ, ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಗುರುತಿಸುವ ವೇದಿಕೆಗಳಾಗಿವೆ. ಈ ಹಿನ್ನೆಲೆಯಲ್ಲಿ ಪ್ರಭಾ ಸುರ್ವರ್ಣ ಅವರಿಗೆ ಲಭಿಸಿರುವ ಪ್ರಶಸ್ತಿಯು ಅವರ ವ್ಯಕ್ತಿತ್ವ ಮತ್ತು ಸಾಧನೆಗೆ ದೊರೆತ ಅಂತರರಾಷ್ಟ್ರೀಯ ಮಾನ್ಯತೆಯಾಗಿದೆ.

ಜಾಗತಿಕ ಶಾಂತಿಯ ರಾಯಭಾರಿಯಾಗಿ ಗುರುತಿಸಲ್ಪಟ್ಟಿರುವ ಪ್ರಭಾ ಸುರ್ವರ್ಣ ಅವರು ಶಾಂತಿ, ಮಾನವೀಯತೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಪ್ರತಿನಿಧಿಸುವ ಗೌರವವನ್ನು ಪಡೆದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಅಂತರರಾಷ್ಟ್ರೀಯ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಪ್ರೇರಣೆ ನೀಡುತ್ತವೆ.

ಪ್ರಭಾ ಸುವರ್ಣ:

ಮುಂಬೈನಲ್ಲಿ ನೆಲೆಸಿರುವ ಪ್ರಭಾ ಸುವರ್ಣ ಅವರು, ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮುಂಬೈನ ರಿಸರ್ವ್ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆದು, ವೃತ್ತಿ ಬದುಕಿನ ಜೊತೆಯಲ್ಲಿ ಕಳೆದ ಐದು ದಶಕಗಳಿಂದ ನಿಷ್ಠಾಪೂರ್ವಕವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ, ಉದ್ಯೋಗದಿಂದ ಸ್ವಯಂ ನಿವೃತ್ತಿಯನ್ನು ಪಡೆದು ಸಕ್ರಿಯ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಹಲವು ವರ್ಷಗಳಿಂದ ಸಮಾಜ ಸೇವೆಯ
ಜೊತೆಗೆ ಕನ್ನಡ ಸಾಹಿತ್ಯ,ಸಂಸ್ಕೃತಿ, ಬಾಷೆಯಯೊಂದಿಗೆ ವಿಭಿನ್ನ ಕ್ಷೇತ್ರಗಳನ್ನು ಆಯ್ಕೆಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಮುಂಬೈನ ಯಂಗ್ ಮೆನ್ಸ್ ನೈಟ್ ಹೈಸ್ಕೂಲಿನಲ್ಲಿ ಗ್ರಾಂಡ್ ಪ್ಯಾಟ್ರನ್, ಬ್ರಹ್ಮಕುಮಾರಿಸಮಾಜದಲ್ಲಿ ಸೇವಾಧಾರಿಯಾಗಿ, ಜಾಗೃತಿ ಬಳಗದಲ್ಲಿ ಪೋರ್ಟ್ ಚಾಪ್ಟರ್ ಛೇರ್‌ಪರ್ಸನ್, ಗೌರ್ನಿಂಗ್ ಕೌನ್ಸಿಲ್‌ನ ಡಿಗ್ನಿಟಿ ಫೌಂಡೇಶನ್, ಕನ್ನಡ ಸಂಘ ಸಯಾನ್, ಮುಂಬಯಿ ಕನ್ನಡ ಸಂಘ, ಮಾತುಂಗ ಕನ್ನಡ ಸಂಘ, ಸಾಯನ್ ಮೆಸಾನಿಕ್ ಲೇಡೀಸ್ ಆರ್ಗನೈಜೇಶನ್‌ನಲ್ಲಿ ಉಪಾಧ್ಯಕ್ಷೆ, ಟಾಟಾ ಕ್ಯಾನ್ಸರ್‌ ಆಸ್ಪತ್ರೆಯ ಪುಟ್ಟಾತಿನಲ್ಲಿ ಚಿಕಿತ್ಸೆ ಪಡೆಯುವವರಿಗೆ ತಮ್ಮದೇ ಆದ ಸೇವೆ ಮಾಡುತ್ತ, ಮುಂಬೈ, ಬೆಂಗಳೂರು, ಮಂಗಳೂರು, ಅಬುದಾಬಿ, ಮಸ್ಕತ್, ದುಬೈ, ಅಮೇರಿಕಾ, ಯೂರೋಪ್, ರಷ್ಯಾ, ಖಜಕಿಸ್ತಾನ್, ಉಜು ಬೈಕಿಸ್ತಾನ್, ಅಲ್ಪಾಡಿ, ಮಾಸ್ಕೋ, ಆಸ್ಟ್ರೇಲಿಯಾ, ಜಪಾನ್, ಕೆನಡಾ, ಫಿಲಿಫೈನ್ಸ್, ವಿಯೆಟ್ನಾಂ, ಸುಮಾರು 25 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಬಹುಭಾಷ ಕವಿಗೋಷ್ಟಿ ಮತ್ತು ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸೃಜನಶೀಲ ಮನಸ್ಸು ಹೊಂದಿರುವ ಇವರ ಸಹ ನಿರ್ಮಾಣದ “ಟ್ರಿಪಲ್ ತಲಾಖ್” ಸಿನಿಮಾಗೆ 2019 ನೇ ಸಾಲಿನ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಪಡೆದಿದ್ದು ಅಲ್ಲದೇ ತಮ್ಮ ಸಿನಿಮಾದ ಜೊತೆಗೆ ಕಲಾತ್ಮಕ ಚಲನಚಿತ್ರಗಳಾದ ‘ಮಲ್ಲದಾನ’ ಹಾಗೂ ‘ಭೋಜರಾಜ್ ಎಂ.ಬಿ.ಬಿ.ಎಸ್’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೀವನದಲ್ಲಿ ಏನಾದರೂ ಮಹತ್ತರವಾದ ಸಾಧನೆಯನ್ನು ಮಾಡಬೇಕೆಂದು ಮಂಗಳೂರಿನಲ್ಲಿ ನಡೆದ ‘ಏಜ್ ಇಸ್ ಜಸ್ಟ್ ನಂಬರ್’ ಎಂದು ಹೇಳುವ ಹಿರಿಯರ ವಿಭಾಗದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಮಿಸೆಸ್ ಮಂಗಳೂರು ವಿನ್ನರ್, ಬೆಂಗಳೂರಿನಲ್ಲಿ ನಡೆದ ಮಿಸೆಸ್ ಕರ್ನಾಟಕ ರನ್ನರ್, ರಾಜಸ್ಥಾನದ ರಣ ಥಂಬೋ‌ರ್ ನಲ್ಲಿ ರನ್ನರ್, ಥೈಲ್ಯಾಂಡಿನ ಬ್ಯಾಂಕಾನಲ್ಲಿ ಫಸ್ಟ್ ರನ್ನರ್ ಅಪ್, ಅಲ್ಲದೆ ಎರಡೆರಡು ಕಿರೀಟ ಪಡೆದಿದ್ದಾರೆ



Related posts

ಜೋಡು ಜೀಟಿಗೆ” ಪೌರಾಣಿಕ ನಾಟಕದ ಪ್ರಥಮ ಪ್ರದರ್ಶನ, ನಾಟಕದ ಮೂಲಕ ಧರ್ಮ ಜಾಗೃತಿಗೊಳ್ಳಲಿ :, ಐಕಳ ಹರೀಶ್ ಶೆಟ್ಟಿ

Mumbai News Desk

ಸರಳ ಸಜ್ಜನಿಕೆಯ ಸಮಾಜ ಸೇವಕ ಕೃಷ್ಣ ಶೀನ ಸಾಲಿಯಾನ್ ನಿಧನ

Mumbai News Desk

ಬಿಲ್ಲವ ಸಮುದಾಯದ ವಿರುದ್ಧ ಅನಿತಾ ಕಾಸರಗೋಡು ಹೇಳಿಕೆ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ತೀವ್ರ ಖಂಡನೆ

Mumbai News Desk

ಕರ್ನಿರೆ  ವಿಶ್ವನಾಥ ಶೆಟ್ಟಿ  ಪರಿವಾರ ದಿಂದ ಕರ್ನಿರೆ ಶ್ರೀ ವಿಷ್ಣು ಮೂರ್ತಿ ದೇವರ ಬಿಂಬಕ್ಕೆ ಚಿನ್ನ ಲೇಪಿತ  ಕವಚ ಸಮರ್ಪಣೆ,

Mumbai News Desk

ಸಿ ಎ ಪರೀಕ್ಷೆ ಫಲಿತಾಂಶ 2024 ಪ್ರತೀಕ್ಷಾ ಪ್ರಕಾಶ್ ಆಚಾರ್ಯ ಉತ್ತೀರ್ಣ

Mumbai News Desk

ರಾಕ್ಷಸ ಪಾತ್ರಗಳಲ್ಲಿ ಮೆರೆದು, ಯಕ್ಷರಂಗದಲ್ಲಿ ಮಿಂಚಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ

Mumbai News Desk