September 6, 2026
Mumbai News Kannada
ಸುದ್ದಿ

ಬೆಂಗಳೂರು : ರಾಜ್ಯಪಾಲರಿಂದ ಗೀತಾಲಕ್ಷ್ಮಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ: ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಮನ್ನಣೆ





ನಗರದ ಪ್ರತಿಷ್ಠಿತ ಆರ್. ವಿ. ಶಿಕ್ಷಕರ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಗೀತಾಲಕ್ಷ್ಮಿ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಕಾತ್ಯಾಯಿನಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ‘ಎಫೆಕ್ಟಿವ್‌ನೆಸ್‌ ಆಫ್‌ ಎಕ್ಸ್‌ ಪಿರಿಯಂಟಲ್‌ ಲರ್ನಿಂಗ್ ಆನ್‌ ಅಚೀವ್‌ಮೆಂಟ್‌ ಅಂಡ್ ಇಂಟ್ರೆಸ್ಟ್‌ ಇನ್‌ ಸೋಶಿಯಲ್ ಸೈನ್ಸ್ ಅಮಾಂಗ್ ಸೆಕೆಂಡರಿ ಸ್ಕೂಲ್ ಸ್ಟೂಡೆಂಟ್ಸ್’ (ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಸಮಾಜ ವಿಜ್ಞಾನ ವಿಷಯದ ಆಸಕ್ತಿ ಮತ್ತು ಸಾಧನೆಯ ಮೇಲೆ ಅನುಭವಜನ್ಯ ಕಲಿಕೆಯ ಪರಿಣಾಮಗಳು) ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಈ ಗೌರವ ಸಂದಿದೆ.


ಇತ್ತೀಚೆಗೆ ನಡೆದ ಡಾ. ಮನಮೋಹನ್ ಸಿಂಗ್ ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೀತಾಲಕ್ಷ್ಮಿ ಅವರಿಗೆ ಅಧಿಕೃತವಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು. ಶಿಕ್ಷಣ ಕ್ಷೇತ್ರದಲ್ಲಿನ ಇವರ ಈ ಸಾಧನೆಗೆ ಸಂಸ್ಥೆಯ ಮಂಡಳಿ, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.



Related posts

ಜಮ್ಮು-ಕಾಶ್ಮೀರ ಉಗ್ರರ ದಾಳಿಗೆ ಶಿವಮೊಗ್ಗ ನಿವಾಸಿ ಬಲಿ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಜಿಲ್ಲಾಧ್ಯಕ್ಷ, ಸಮಾಜ ಸೇವಕ ಡಿ. ಆರ್. ರಾಜು ನಿಧನ,ಗಣ್ಯರ ಸಂತಾಪ

Mumbai News Desk

ಬಂಟ್ವಾಳ : ನೇತ್ರಾವತಿ ನದಿ ದಡದಲ್ಲಿ ಅನಾಥವಾಗಿ ಬಿದ್ದ ನೂರಾರು ಆಧಾರ್ ಕಾರ್ಡ್‌ಗಳು – ತನಿಖೆಗೆ ಯು.ಟಿ. ಖಾದರ್ ಸೂಚನೆ.

Mumbai News Desk

ಉಡುಪಿ: ಬಜೆ ಮೊಗವೀರ ಸುವರ್ಣ ಮೂಲಸ್ಥಾನದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (16/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಮುಲುಂಡ್‌ :    ಲ!  ಜಯರಾಮ್ ಮೂಲ್ಯ ನಿಧನ

Mumbai News Desk