November 28, 2026
Mumbai News Kannada
ಪ್ರಕಟಣೆ

ನ. 29: ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯ ‘ಶ್ರೀ ರಾಮ ಕಥಾ ಹೃದಯಂ’ ಸರಣಿ ತಾಳಮದ್ದಳೆಯ ಹತ್ತೊಂಬತ್ತನೇ ಪ್ರಸ್ತುತಿ ಹಾಗೂ ಸನ್ಮಾನ ಕಾರ್ಯಕ್ರಮ



ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಅನುಗ್ರಹ ಹಾಗೂ ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ, ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರರಾದ ಶ್ರೀ ಹರಿದಾಸ ಗೋಪಾಲ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ ಪ್ರಭು ಶ್ರೀ ರಾಮಚಂದ್ರ ದೇವರ ಅವತಾರದ ಆರಂಭದಿಂದ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ ‘ಶ್ರೀ ರಾಮ ಕಥಾ ಹೃದಯಂ’ ಎಂಬ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಈ ಸರಣಿ ತಾಳಮದ್ದಳೆಯ ಹತ್ತೊಂಬತ್ತನೆಯ ಪ್ರಸ್ತುತಿಯಾದ ‘ಅಗ್ನಿ ಪರೀಕ್ಷೆ – ಶ್ರೀ ರಾಮ ನಿಜ ಪಟ್ಟಾಭಿಷೇಕ’ ಎಂಬ ಕಥಾಪ್ರಸಂಗವು ದಿನಾಂಕ 29-11-2026 ರ ಭಾನುವಾರದಂದು ಮಧ್ಯಾಹ್ನ 2:00 ಗಂಟೆಗೆ ಸರಿಯಾಗಿ ಗಾಂವ್‌ದೇವಿ, ವಿದ್ಯಾವಿಹಾರ್‌ನಲ್ಲಿರುವ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮುಂಬೈಯ ಖ್ಯಾತ ಕಲಾವಿದರ ಸಹಯೋಗದೊಂದಿಗೆ ನಡೆಯಲಿದೆ.

ಅಂದಿನ ತಾಳಮದ್ದಳೆ ಕಾರ್ಯಕ್ರಮವು ತುಳು-ಕನ್ನಡಿಗರ ಮೆಚ್ಚಿನ ಜನನಾಯಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರ್ತಿಶೇಷ ಜಯ ಸಿ. ಸುವರ್ಣರ ಸವಿನೆನಪಿನಲ್ಲಿ ಅವರ ಮಕ್ಕಳ ಹಾಗೂ ಅಭಿಮಾನಿಗಳ ಸಂಪೂರ್ಣ ಸಹಕಾರದೊಂದಿಗೆ ನಡೆಯಲಿರುವುದು.

ಕಾರ್ಯಕ್ರಮದ ಮುಖ್ಯ ಅತಿಥಿಗಳು:

  • ಶ್ರೀ ಶ್ಯಾಮ್ ಎನ್. ಶೆಟ್ಟಿ (ಮಾಜಿ ಅಧ್ಯಕ್ಷರು, ಬಾಂಬೆ ಬಂಟ್ಸ್ ಅಸೋಸಿಯೇಷನ್)
  • ಶ್ರೀ ಸೂರ್ಯಕಾಂತ್ ಜೆ. ಸುವರ್ಣ (ಕಾರ್ಯಾಧ್ಯಕ್ಷರು, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಹಾಗೂ ಅಧ್ಯಕ್ಷರು, ಬಿಲ್ಲವ ಮಹಾಮಂಡಲ)

ಅಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ವಿದ್ವಾನ್ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಅವರ ಆಶಯದಂತೆ ಮುಂಬೈ ಮಹಾನಗರದ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕಣಂಜಾರು ಭೋಜ ಶೆಟ್ಟಿ, ಸತ್ಯಾನಂದ ತೀರ್ಥ ಸ್ವಾಮೀಜಿ, ಸತೀಶ್ ಪ್ರಭು, ಪುರುಷೋತ್ತಮ ಆಚಾರ್ಯ ಬೆಳ್ಮಣ್, ಬಾಲಕೃಷ್ಣ ಶೆಟ್ಟಿ ಅಜೆಕಾರು, ಪ್ರಭಾಕರ ಶೆಟ್ಟಿ ಇರಾ, ರಘು ದೇವಾಡಿಗ, ಪ್ರದೀಪ್ ರೈ, ವಿಕ್ರಮ್ ಕಾಮತ್ ಹಾಗೂ ಕರುಣಾಕರ ಬಂಗೇರ ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು.

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಗೌರವದ ಉಪಸ್ಥಿತಿಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಸಂಚಾಲಕರು ಮತ್ತು ಕಲಾವಿದರಾದ ವಾಸು ಮಾರ್ನಾಡ್ ಹಾಗೂ ಸುರೇಶ್ ನಂದ್ರೊಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬಯಿ – ಜು. 20ಕ್ಕೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಯಕ್ಷಗಾನ ಪ್ರದರ್ಶನ

Mumbai News Desk

ಜು 21 ರಂದು ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರುಪೂರ್ಣಿಮೆ

Mumbai News Desk

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಜುಪಾಡ, ಕುರ್ಲಾ (ಪ ) : ಅ.25ರಂದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Mumbai News Desk

ಮಾ. 08 ರಂದು ಥಾಣೆಯಲ್ಲಿ ಸಾಫಲ್ಯ ಸೇವಾ ಸಂಘದ ಮುಖವಾಣಿ’ಸಾಫಲ್ಯ’ ತ್ರೈಮಾಸಿಕದ ಬೆಳ್ಳಿ ಹಬ್ಬ ಹಾಗೂ ಮಹಿಳಾ ದಿನಾಚರಣೆ

Mumbai News Desk

ಕುಲಾಲ ಪ್ರತಿಷ್ಠಾನ ಮಂಗಳೂರು- ಏಪ್ರಿಲ್ 13 ರಂದು ಕುಲಾಲ ಪರ್ಬ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ‘ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳ’ಸೆಪ್ಟೆಂಬರ್ 7ರಂದು ರಾಮಾಂಜನೇಯ ಯಕ್ಷಗಾನ ಪ್ರದರ್ಶನ – ಕುಮಟಾ ಗಣಪತಿ ನಾಯಕ್ ಅವರ ಆಂಜನೇಯನ ಪಾತ್ರ ಪ್ರಮುಖ ಆಕರ್ಷಣೆ

Mumbai News Desk