
ಉಡುಪಿಯ ಹೃದಯಭಾಗದಲ್ಲಿ ಭಕ್ತರಿಂದ ಪ್ರತಿಷ್ಠೆಗೊಂಡು ಆರಾದಿಸಿಕೊಂಡು ಬರುತ್ತಿರುವ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಪ್ರಥಮ ವರ್ಧಂತಿ ಉತ್ಸವವು ಜನವರಿ 15ರ ಸೋಮವಾರ ದಿಂದ 16ರ ಮಂಗಳವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಜ.15 ಕ್ಕೆ ,ಸೂರ್ಯೋದಯದಿಂದ – ಸೂರ್ಯಾಸ್ತದ ವರೆಗೆ ಭಜನಾ ಕಾರ್ಯಕ್ರಮ ಕಪೆಟ್ಟು ಸೂರ್ಯಪ್ರಕಾಶ್,ವಿಶ್ವನಾಥ್ ಸನಿಲ್, ಶ್ರೀಕಾಂತ್ ಶೆಟ್ಟಿ ಇವರ ನೇತೃತ್ವದಲ್ಲಿ ನಡೆಯಲಿದೆ.
ಬೆಳ್ಳಿಗ್ಗೆ 8 ಗಂಟೆಗೆ ,ಮಧ್ಯಾಹ್ನ 12 ಗಂಟೆಗೆ, ರಾತ್ರಿ 8 ಗಂಟೆಗೆ ಮಹಾಪೂಜೆ ,ಹಾಗೂ ಪ್ರತಿ ಎರಡು ಗಂಟೆಗೆ ಚಾಮ ಪೂಜೆ ನಡೆಯಲಿದೆ.
ಸಂಜೆ 5 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಿತ್ಯಾನಂದ ಮಂದಿರದಿಂದ ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್-ಉಡ್ ಲ್ಯಾನ್ಡ್ ಹೋಟೆಲ್ ಬದಿಯಿಂದ ತೆಂಕಪೇಟೆಯಾಗಿ ಕೊಳದ ಪೇಟೆಯಿಂದ ಹಳೇ ಡಯಾನ ಸರ್ಕಲ್ ನಿಂದ ಜೋಡುಕಟ್ಟೆಗೆ ,ಅಲ್ಲಿಂದ ಹಿಂತಿರುಗಿ ಕವಿ ಮುದ್ದಣ್ಣ ಮಾರ್ಗವಾಗಿ ಮಂದಿರ ತಲಪುವುದು.
ತಾ 16 ರಂದು ಬೆಳ್ಳಿಗ್ಗೆ 4.30ಕ್ಕೆ ಭಗವಾನ್ ನಿತ್ಯಾನಂದ ಸ್ವಾಮಿಗೆ ಭಕ್ತರಿಂದ ಸಿಯಾಳಾಭಿಷೇಕ.
5 ಗಂಟೆಗೆ – ಮಹಾಪೂಜೆ.
ಬೆಳ್ಳಿಗ್ಗೆ 8 ಗಂಟೆಗೆ ಪ್ರಥಮ ಆರತಿ
ಗಂಟೆ 9ಕ್ಕೆ ಶ್ರೀ ಗಣೇಶಯಜ್ಞ ಪ್ರಾರಂಭ
ಮದ್ಯಾಹ್ನ 12 ಗಂಟೆಗೆ ಮಹಾಪೂಜೆ
12.30 ಗಂಟೆಗೆ – ಬಾಲ ಭೋಜನ ಮತ್ತು ಮಹಾ ಅನ್ನಸಂತರ್ಪಣೆ.
ಸಂಜೆ 4 ಗಂಟೆಗೆ ಶ್ರೀ ಗಣೇಶಯಜ್ಞ ಪೂರ್ಣಾಹುತಿ
ರಾತ್ರಿ 8 ಗಂಟೆಗೆ ಮಹಾಪೂಜೆ.
ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಗಣೇಶ್ ಪುರಿಯ ಪ್ರಧಾನ ಅರ್ಚಕರಾದ ರಮೇಶ್ ಸುಲಾಖೆ ಮತ್ತು ಪುರೋಹಿತ ಬಳಗದವರು ವಹಿಸಿರುವರು.
ಅದೇ ದಿನ ಸಂಜೆ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಸಭೆಯಲ್ಲಿ ಧಾರ್ಮಿಕ, ರಾಜಕೀಯ ಮುಖಂಡರು, ಊರ-ಪರಊರ ಗಣ್ಯರು,ಉದ್ಯಮಿಗಳು ಉಪಸ್ಥಿತರಿರುವರು.ಈ ಸಂದರ್ಭದಲ್ಲಿ ವಿವಿಧ ನಿತ್ಯಾನಂದ ಮಂದಿರಗಳ ಪ್ರಮುಖರನ್ನು ಸನ್ಮಾನಿಸಲಾಗುವುದು.
ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿ, ಇದರ ಟ್ರಸ್ಟಿಗಳು, ಆಡಳಿತ ಮಂಡಳಿ, ಶ್ರೀ ನಿತ್ಯಾನಂದ ಸೇವಾ ಸಮಿತಿ ಹಾಗೂ ಅಧ್ಯಕ್ಷರು ಮತ್ತು ಟ್ರಸ್ಟಿಗಳು-ಶ್ರೀ ನಿತ್ಯಾನಂದ ಆಶ್ರಮ ,Kanhagad(ಕಾಸರಗೋಡು) ವರ್ದಂತಿ ಉತ್ಸವಕ್ಕೆಆದರದ ಸ್ವಾಗತ ಬಯಸಿದ್ದಾರೆ .
