24.7 C
Karnataka
April 3, 2025
ಮುಂಬಯಿ

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ ಅಭಿಯಾನ: 



——-

ಮುಂಬಯಿ ಜ 19. ಮಾಲಾಡ್  ಪೂರ್ವದ ತುಳು ಕನ್ನಡಿಗರು ಸ್ಥಾಪಿಸಿದ ಶ್ರೀ ವರ ಮಹಾಲಕ್ಷ್ಮಿ ಪೂಜಾ  ಸಮಿತಿಯಲ್ಲಿ ಭಜನಾ ತಂಡ ರೂಪಗೊಂಡಿದ್ದು ಮೀರಾ ರೋಡ್ ಶ್ರೀ ಧರ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಭಜನೆ ಅಭ್ಯಾಸ ನಡೆಯುತ್ತಿದ್ದು ಈ ಭಜಕರಿಂದ ಜನವರಿಯ 22 ರಂದು ಆಯ್ಯೋದ್ಯಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆಯ ಸುಸಂದರ್ಭದಲ್ಲಿ  ಮಲಾಡ್ ನ್  ತುಳು ಕನ್ನಡಿಗರ ಮನೆ ಮನೆ ಯಲ್ಲಿ “ಶ್ರೀ ರಾಮ ನಾಮ ಸ್ಮರಣೆ *ಅಭಿಯಾನವು ಸಮಿತಿಯ ಅಧ್ಯಕ್ಷ ನ್ಯಾ. ಜಗನ್ನಾಥ್ ಶೆಟ್ಟಿ ಪಣಿಯೂರ್ ಇವರ  ನೇತೃತ್ವದಲ್ಲಿ   ಬೆಳಿಗ್ಗೆ 9 ರಿಂದ ಸಂಜೆ 5.30ವರೆಗೆ ಭಜನೆ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ ನಡೆದ ಬಳಿಕ   ಭಜನೆಗೆ  ಆಮಂತ್ರಿತ ತುಳು ಕನ್ನಡಿಗರ ಮನೆಗಳಲ್ಲಿ ದೀಪ ಬೆಳಗಿಸುವುದರ ಜೊತೆಗೆಭಜನೆ ಮಂಗಳಾರತಿ ನಡೆಯಲಿದೆ.

ಜಗತ್ತಿನಾದ್ಯಂತ ರಾಮ ಜಪ ಆರಂಭವಾಗಿದ್ದು, ಮಲಾಡ ನಲ್ಲಿ ಭಜನೆಯ ಯಜ್ಞ ನಡೆಯಲಿದೆ ಎಂದು ಪೂಜಾ ಸಮಿತಿಯ ಉಪಾಧ್ಯಕ್ಷರುಗಳಾದ ಸಂತೋಷ್ ಕೆ ಪೂಜಾರಿ ,ಕುಮಾರೇಶ್ ಆಚಾರ್ಯ ,ಪ್ರದಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಮೆಂಡನ್, ಮಹಿಳಾ ವಿಭಾಗದ  ಕಾರ್ಯದ್ಯಕ್ಷೆ ರತ್ನ . ಡಿ. ಕುಲಾಲ್, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಕೋಶಾಧಿಕಾರಿ ಶೀಲಾ ಪೂಜಾರಿ ಹಾಗೂ ಯುವ ವಿಭಾಗದ  ಕಾರ್ಯದ್ಯಕ್ಷೆ ಸೌಮ್ಯ ಮೆಂಡನ್, ಕಾರ್ಯದರ್ಶಿ ಸುದೀಪ್ ಪೂಜಾರಿ ,. ಕೋಶಧಿಕಾರಿ ದಿಶಾ ಕರ್ಕೇರ ಹಾಗೂ ಸಮಿತಿಯ ಪದಾಧಿಕಾರಿಗಳು ತಿಳಿಸಿರುತ್ತಾರೆ.

ಕಳೆದ ವರ್ಷ ವರಮಹಾಲಕ್ಷ್ಮಿ ಪೂಜಾ  ಸಮಿತಿಯ ಯುವ ವಿಭಾಗ ಮಕ್ಕಳ ಉತ್ಸವ ಕಾರ್ಯಕ್ರಮ ದ   ಸಂದರ್ಭದಲ್ಲಿ ಶ್ರೀ ರಾಮನ ಕಥೆಯನ್ನ ಆಧರಿಸಿ ಶ್ರೀರಾಮ ಪಟ್ಟಾಭಿಷೇಕ ಎನ್ನುವ ನಾಟಕ ಡಾ  ಶಶಿನ್ ಆಚಾರ್ಯ, ಯೋಗೇಶ್ವರಿ ಗೌಡ,.ಸುದೀಪ್ ಪೂಜಾರಿ, ಪವನ್ ರಾವ್ , ನಿಧಿ ನಾಯಕ್, ಪ್ರಥಮ್ ಪೂಜಾರಿ ಇವರ ಸಂಯೋಜನೆಯಲ್ಲಿ ಮೂಡಿಬಂದಿದೆ.

Related posts

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 15 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಸಾಂಸ್ಕೃತಿಕ ವೈಭವ, ಯಕ್ಷಗಾನ, ಸನ್ಮಾನ, ಸಮಾರೋಪ ಸಮಾರಂಭ .

Mumbai News Desk

ಸಾಂತಾಕ್ರೂಸ್ ಶ್ರೀ ಮಂತ್ರದೇವಿ ದೇವಸ್ಥಾನದ ವಾರ್ಷಿಕ ಮಹಾಪೂಜೆ ಸಂಪನ್ನ,

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ,ಇದರ   49ನೇ ವಾರ್ಷಿಕ ಶನಿಪೂಜೆ

Mumbai News Desk

ಶ್ರೀ ಕಟೀಲ್ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ 5ನೇ ವಾರ್ಷಿಕೋತ್ಸವ

Mumbai News Desk

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ. ರಜತ ಮಹೋತ್ಸವದ ಕಾರ್ಯ ಧ್ಯಕ್ಷರಾಗಿ  ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ ಆಯ್ಕೆ,

Mumbai News Desk

ಕರ್ನಾಟಕ ಸಂಘ ಪನ್ವೆಲ್ ಇದರ  34ನೇ ವಾರ್ಷಿಕೋತ್ಸವ.

Mumbai News Desk