ಮುಂಬಯಿ ಮಹಾನಗರದ ಹೆಸರಾಂತ ಸಮಾಜ ಸೇವಕರು ಹಾಗೂ escube ಹವಾನಿಯಂತ್ರಣ ಸಂಸ್ಥೆಯ ಮಾಲಿಕರಾದ ಉದ್ಯಮಿ ಅಶಿತ್ .ಎನ್ . ಶೆಟ್ಟಿ ಅವರು ಉಡುಪಿಯ ಅಂಬಲ್ಪಾ ಡಿ ಕಾರ್ತಿಕ್ ಎಸ್ಟೇಟ್ ಕಾಂಪ್ಲೆಕ್ಸ್ ನ ತಳಮಹಡಿಯಲ್ಲಿ ತನ್ನ ಕಛೆರಿ ಯನ್ನು ಹೊಂದಿದ್ದು, ಖ್ಯಾತ ಹವಾ ನಿಯಂತ್ರಣ ಕಂಪನಿಯಾದ ದೈಕಿನ್ ಏರ್ ಕಂಡೀಷನ್ ನ ಪ್ರಧಾನ ವಿತರಕರಾಗಿ ನೇಮಕಗೊಂದಿದ್ದಾರೆ.

ಡೈಕಿನ್ ಸೊಲ್ಯೂಷನ್ ಪ್ಲಾಜದ ನೂತನ ಶೋರೂಮ್ ಉಡುಪಿ ಅಂಬಲ್ಪಾಡಿಯ ಹೋಟೆಲ್ ಕಾರ್ತಿಕ್ ಎಸ್ಟೇಟ್ ಕಾಂಪ್ಲೆಕ್ಸ್ ನಲ್ಲಿ ನಾಳೆ, ಜ.20 ರಂದು ಬೆಳ್ಳಿಗ್ಗೆ 11 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗಡೆ ಅವರ ದಿವ್ಯ ಉಪಸ್ಥಿತಿಯಲ್ಲಿ, ಉದ್ಘಾಟನೆಗೊಳ್ಳಲಿದೆ.
ಡೈಕಿನ್ ಏರ್ ಕಂಡೀಷನಿಂಗ್ ಇಂಡಿಯಾ ಪ್ರೈ. ಲಿಮಿಟೆಡ್ ನ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕ ಡಾಕ್ಟರ್ ಏನ್ ಕೆ ರಾವ್ ನೂತನ ಶೋರೂಮ್ ಉದ್ಘಾಟಿಸಲಿರುವರು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ,ಧರ್ಮಸ್ಥಳ ಇದರ ಕಾರ್ಯದರ್ಶಿ, ಡಿ ಹರ್ಷೇಂದ್ರ ಕುಮಾರ್, ಉಡುಪಿಯ ಶಾಸಕ ಯಶಪಾಲ್ ಸುವರ್ಣ, ಕಿದಿಯೂರು ಹೋಟೆಲ್ ಉಡುಪಿಯ ಮಾಲಕ ಭುವನೇಂದ್ರ ಕಿದಿಯೂರು, ಪಟೇಲ್ ಕಾರ್ತಿಕ್ ಸ್ಟೇಟ್ ನಮಾಲಕ ಹರಿಯಪ್ಪ ಕೋಟ್ಯಾನ್, ಯುವರಾಜ್ಸಾಲ್ಯಾನ್ ಮಸ್ಕತ್, ಎ ಜಿ ಎಸೋಸಿಎಟ್ಸ್ ಉಡುಪಿಯ, ವಾಸ್ತುಶಿಲ್ಪಿ ಯೋಗೇಶ್ ಚಂದ್ರ ದಾರ, ಎ ಜಿ ಎಸೋಸಿಯೇಟ್ಸ್ ನ ಸಿವಿಲ್ ಕನ್ಸಲ್ಟೆಂಟ್ ಗೋಪಾಲ್ ಭಟ್ ಎಂ, ಡೈಕಿನ್ ಏರ್ ಕಂಡೀಷನಿಂಗ್ ಇಂಡಿಯಾ, ಇದರ ಶಾಖಾ ಮುಖ್ಯಸ್ಥ ಮುರಳಿ ಕಠಾರಿಯ, ಆಡಳಿತ ನಿರ್ದೇಶಕ ವೆಂಕಟೇಶ್ ಖಾರ್ವಿ ಸಮಾರಂಭದಲ್ಲಿ ಉಪಸ್ಥಿತರಿರುವರು.
ಉಡುಪಿ, ಮಂಗಳೂರು ಉಭಯ ಜಿಲ್ಲೆಗೆ ಡೈಕಿನ್ ನ ವಿತರಕರಾಗಿರುವ ಅಶಿತ್ ಶೆಟ್ಟಿ ಅವರು ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.