
ಮುಂಬಯಿ : ಬಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಜ. 28, ಆದಿತ್ಯವಾರ ಮುಲೂಂಡು ಪಶ್ಚಿಮ, ಶ್ರೀ ಕುಟ್ಚು ದೇಶಿಯ ಸಾರಸ್ವತ್ ಹಾಲ್ ಎರಡನೇ ಮಹಡಿ, ಸರಸ್ವತಿ ವಾಡಿ, ಜಾವೇರ್ ರೋಡ್ ಇಲ್ಲಿ ಹಳದಿ ಕುಂಕುಮ ಕಾರ್ಯಕ್ರಮವು ನಡೆಯಿತು,
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ. ಶಿವಾನಿ ಮದರ್ ಆ್ಯಂಡ್ ಚೈಲ್ಡ್ ಆಸ್ಪತ್ರೆಯ ನಿರ್ದೇಶಕಿ ಡಾ। ಸಂಗೀತಾ ಸತ್ಯಪ್ರಕಾಶ್ ಶೆಟ್ಟಿ
ಇಂತಹ ಆಚರಣೆ ಆತ್ಮೀಯತೆ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕ ವಾಗಿದೆ.ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿಸಲು ಇಂತಹ ಆಚರಣೆಗಳು ಅಗತ್ಯವಾಗಿವೆ. ಇದನ್ನು ಸ್ತ್ರೀಶಕ್ತಿಯು ಇನ್ನಷ್ಟು ಒಗ್ಗಟ್ಟಿನಿಂದ ಆಚರಿಸಿ ಮುಂದಿನ ಜನಾಂಗಕ್ಕೆ ಪಸರಿಸ ಬೇಕು. ಮಹಿಳೆಯರು ತಮ್ಮ ಆರೋಗ್ಯ ದೊಂದಿಗೆ ಕುಟುಂಬದ ಆರೋಗ್ಯ ದೆಡೆಗೆ ಗಮನ ಹರಿಸಿದಾಗ ಆರೋಗ್ಯ ವಂತ ಸಮಾಜ ನಿರ್ಮಾಣ ಸಾಧ್ಯ ತಿಳಿಸಿದರು.




ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ಪ್ರಭಾಕರ ಪಿ. ಭಂಡಾರಿ ಅವರ ಮಾರ್ಗದರ್ಶನ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶಾಲಿನಿ ಆರ್ ಭಂಡಾರಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು,
ಗೌರವ ಅತಿಥಿ ಯಾಗಿದ್ದ ಎಲ್‌ಐಸಿ ಅಧಿಕಾರಿ ಅನಿತಾ ಪ್ರಕಾಶ್ ಭಂಡಾರಿ ಮಾತನಾಡಿ, ಈ ಕಾಠ್ಯಕ್ರಮ ಸನಾತನ ಸಂಸ್ಕೃತಿಯ ಪ್ರತೀಕವಾಗಿದೆ. ಇದು ನಾರಿ ಶಕ್ತಿಯನ್ನು ಪ್ರೇರೇಪಿಸುವ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಭಂಡಾರಿ ಸಮಿತಿಯ ಅಧ್ಯಕ್ಷೆ ಶಾಲಿನಿ ಭಂಡಾರಿ ಮಾತನಾಡಿ, ಮಹಿಳಾ ಬಾಳ ಮುತ್ತು ವರ್ಜಿಯಿಂದ ತಮ್ಮ ಮನೆ ಕೆಲಸಗಳನ್ನೆಲ್ಲ ಬದಿಗಿಟ್ಟು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಆಚಾರ, ವಿಚಾರ, ಸಂಸ್ಕಾರ ತಿಳಿದುಕೊಳ್ಳಲೂ ಇದೊಂದು ಅವಕಾಶ. ಸನಾತನ ಧರ್ಮ, ಸಂಸ್ಕೃತಿ ಬಗ್ಗೆ ಮಕ್ಕಳಲ್ಲಿ ನಾವು ಆಸಕ್ತಿ ಮೂಡಿಸಬೇಕು. ತಾಯಂದಿರು ಈ ಬಗ್ಗೆ ಮುತುವರ್ಜಿ ವಹಿಸಬೇಕುಎಂದು ಹೇಳಿದರು.
ವೇದಿಕೆಯಲ್ಲಿಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ ಜಯಸುಧಾ ಟಿ ಭಂಡಾರಿ, ಪ್ರಧಾನ ಕಾರ್ಯದರ್ಶಿ, ಲತಾ ಯೋಗೇಶ್ ಭಂಡಾರಿ,
ಕಾರ್ಯಕ್ರಮದಲ್ಲಿಸಮಿತಿಯ ಕಾರ್ಯದರ್ಶಿ ರಮೇಶ್ ಭಂಡಾರಿ ಪೊವಾಯಿ, ಕೋಶಾಧಿಕಾರಿ ಶೀನ ಭಂಡಾರಿ ವಡಾಲ, ಜತೆ ಕಾರ್ಯದರ್ಶಿ ರಂಜಿತ್ ಎಸ್. ಭಂಡಾರಿ, ಮಾಜಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್. ಭಂಡಾರಿ .ಭಂಡಾರಿ ಬಂಧುಗಳು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ರಾಧಿಕಾ ಭಂಡಾರಿ ಪ್ರಾರ್ಥನೆ ಗೈದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಪಲ್ಲವಿ ರಂಜಿತ್ ಭಂಡಾರಿ ಸ್ವಾಗತಿಸಿ, ಪ್ರಾಸ್ತಾವಿಸಿ, ಅತಿಥಿಗಳನ್ನು ಪರಿಚಯಿಸಿ, ನಿರೂಪಿಸಿದರು. ಕಾರ್ಯಕ್ರಮಪ್ರೇಮಾ ಭಂಡಾರಿ ಮತ್ತು ಉಷಾ ಭಾಸ್ಕರ್ ಅತಿಥಿಗಳನ್ನು ಗೌರವಿಸಿದರು. ಲತಾ ಯೋಗೇಶ್ ವಂದಿಸಿದರು,
. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ಸ್ಪರ್ಧೆ, ವಿವಿಧ ಸಾಂಸ್ಕೃತಿಯ ಕಾರ್ಯಕ್ರಮಗಳು, ಫನ್ ಗೇಮ್ಸ್ ಹಾಗೂ ಹಳದಿ ಕುಂಕುಮ ದ ಕಾರ್ಯಕ್ರಮಗಳು ನಡೆಯಿತು,.