
ಧಾರ್ಮಿಕತೆಯ ಪ್ರತಿ ಹಂತದಲ್ಲೂ ಅರಶಿನ ಕುಂಕುಮ ವಿಶೇಷ ಮಹತ್ವ ಪಡೆದಿದೆ: ಸರಸ್ವತಿ ರಾವ್
ಚಿತ್ರ, ವರದಿ : ರಮೇಶ್ ಉದ್ಯಾವರ್
ಬೊರಿವಿಲಿ, ಫೆ. 4 :ಹಳದಿ ಕುಂಕುಮ ಸುಮಂಗಲೆಯರ ಬರೇ ಸಂಕೇತವೆಂದು ತಿಳಿಯದೆ ಅದರ ಇತಿಹಾಸ ಮಹತ್ವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಮನುಷ್ಯ ಹುಟ್ಟು ಜನ್ಮದಿಂದ ಜೀವನಪೂರ್ತಿ ಹಳದಿ ಕುಂಕುಮ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುವ ವಸ್ತುವಾಗಿದೆ. ದೇವತಾ ಕಾರ್ಯಕ್ರಮದಲ್ಲಿ ತೀರ್ಥ ಪ್ರಸಾದದ ಅರಿವಾಣದಲ್ಲಿ ಯಾವಾಗಲೂ ಅರಸಿನ ಕುಂಕುಮ ಎರಡನ್ನು ಒಟ್ಟಿಗೆ ಇರುವುದು ಪ್ರತಿ ಧಾರ್ಮಿಕ ಸ್ಥಳಗಳಲ್ಲಿ ಇದನ್ನು ಕಾಣ ಬಹದು. ಧಾರ್ಮಿಕತೆಯ ಪ್ರತಿ ಹಂತದಲ್ಲೂ ಅರಿಶಿನ ಕುಂಕುಮ ವಿಶೇಷ ಮಹತ್ವ ಪಡೆದೆ ಎಂದು ಸಮಾಜ ಸೇವಕಿ ಸರಸ್ವತಿ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬಿಲ್ಲವರ ಎಸೋಶಿಯೇಶನ್ ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿಯ ಮಹಿಳಾ ಸದಸ್ಯರು ಫೆ. 4ರಂದು ಸ್ಥಳೀಯ ಕಚೇರಿ ಗುರು ಸನ್ನಿಧಿ ಶಿಂಪೋಲಿ ರೋಡ್ ಗೊರಾಯಿ1, ಇಲ್ಲಿ ಆಯೋಜಿಸಿದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ಸ್ನೇಹ ಸೌಹಾರ್ದತೆಯ ಪ್ರತೀಕವಾಗಿ ಆಚರಿಸುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಸೌಹಾರ್ದದಿಂದ ಪಾಲ್ಗೊಂಡು ಪರಸ್ಪರ ಹಳದಿ ಕುಂಕುಮ ಇಟ್ಟು ಹಾರೈಸುವುದು ಈ ಕಾರ್ಯಕ್ರಮದ ವಾಡಿಕೆ ಎಂದು ಹೇಳಿದ ಅವರು ಎಲ್ಲರೂ ಸಂತೋಷದಿಂದ ಆಚರಿಸುವ ಇಂತಹ ಕಾರ್ಯಕ್ರಮಗಳು ನಿರಂತರ ಜರಗಲಿ ಶ್ರೀ ನಾರಾಯಣ ಗುರುಗಳು ಅನುಗ್ರಹಿಸಲಿ ಎಂದು ಹಾರೈಸಿದರು.
ಲೇಖಕ, ಕವಿ ಶೀಮಂತೂರು ಚಂದ್ರಹಾಸ ಸುವರ್ಣ ಹಳದಿ ಕುಂಕುಮ ಮಹತ್ವದ ಬಗ್ಗೆ ಮಾತನಾಡುತ್ತಾ ಕಾಲಾನುಕಾಲದಿಂದ ಸದಾ ಪಾವಿತ್ರತೆಗೆ ಹೆಸರಸರುವಾಸಿಯಾದ ಹಳದಿ ಕುಂಕುಮ ಮನುಷ್ಯ ಜೀವನದ ಎಲ್ಲಾ ಧಾರ್ಮಿಕತೆಯ ಅನುಷ್ಠಾನದಲ್ಲಿ ಉಪಯೋಗಿಸಲ್ಪಡುವ ವಸ್ತುವಾಗಿದೆ. ಇಂದಿನ ಧಾರ್ಮಿಕ ವಿಚಾರದಲ್ಲಿ ಭಜನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ವಾಸ್ತವಕ್ಕೆ ಅರ್ಥ ನೀಡುವಂತ ಕಾರ್ಯಕ್ರಮಗಳಾಗಬೇಕು ಎಂದು ಹೇಳಿದ ಅವರು ಹಳದಿ ಕುಂಕುಮದ ಹುಟ್ಟು ಇತಿಹಾಸ ಹಾಗೂ ಮದುಮಗಳಿಗೆ ದಾರೆ ಸೀರೆಯ ಜೊತೆಗೆ ನೀಡುವ ಅರಿಸಿನ ಕರಡಿಗೆ ಹಾಗೂ ಅದರ ಮಹತ್ವದ ಬಗ್ಗೆ ಮಹಿಳೆಯರಿಗೆ ವಿವರಿಸಿದರು.
(BOX) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮಿತಿಯ ಕಾರ್ಯಧ್ಯಕ್ಷ ಮೋಹನ್ ಬಿ ಅಮೀನ್ ಮಹಿಳಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಸಮಿತಿಯ ಕೋಶಾಧಿಕಾರಿ ವತ್ಸಲಾ ಕೆ ಪೂಜಾರಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮಕ್ಕೆ ಮಹಿಳಾ ಶಕ್ತಿಯನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಲ್ಲವರ ಎಸೋಶಿಯೇಶನ್ ಸಮಾಜ ಬಾಂಧವರ ಆಶಾಕಿರಣ ಸಂಸ್ಥೆಯಾಗಿದ್ದು ಪ್ರಸಕ್ತ ಅಧ್ಯಕ್ಷರ ವಿಚಾರ ಧಾರೆ, ಕ್ರೀಯಾಶೀಲ ಚಟುವಟಿಕೆಯ ಮೂಲಕ ಸಮಾಜಬಾಂಧವರ ಸದುಪಯೋಗ ಕಾರ್ಯಕ್ರಮಗಳು ಜರಗುತ್ತಿದ್ದು, ಎಸೋಶಿಯೇಶನ್ ನ ಆರ್ಥಿಕ ಸ್ಥಿತಿಯು ಉತ್ತಮಗೊಂಡಿವೆ ಎಂದು ಹೇಳಿದ ಅವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖ್ಯ ಅತಿಥಿ ಹಾಗೂ ಮಹಿಳಾ ಸದಸ್ಯರು ಸಮೂಹವಾಗಿ ಶ್ರೀ ನಾರಾಯಣ ಗುರುಗಳ ಮೂರ್ತಿಗೆ ಹೂ ಹಾರ ಹಾಕಿ ಹಿಂಗಾರ ಅರಳಿಸಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ನೀಡಿದರು. ಜ್ಯೋತಿ ಪೂಜಾರಿ ಮುಖ್ಯ ಅತಿಥಿಯವರನ್ನು ಪರಿಚಯಿಸಿದರು. ಬಿಲ್ಲವರ ಅಸೋಸಿಯೇಷನ್ ಕೇಂದ್ರ ಕಚೇರಿಯ ಉಪಕಾರ್ಯಾಧ್ಯಕ್ಷೆ ಗಿರಿಜಾ ಚಂದ್ರಶೇಖರ್ ಕಾರ್ಯದರ್ಶಿ ಸಭಿತಾ ಜಿ ಪೂಜಾರಿ ಲೇಖಕಿ ಸುಶೀಲಾ ಎಸ್ ಅಮೀನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳೆಯರನ್ನು ಅಭಿನಂದಿಸಿದರು. ಸಮಿತಿಯ ಉಪಕಾರ್ಯಾಧ್ಯಕ್ಷ ರಮೇಶ್ ಡಿ ಕೋಟ್ಯಾನ್ ಶೇಖರ ಎಸ್ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಜಿತ್ ಎಲ್ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಆ ಬಳಿಕ ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಾದ ವಾರಿಜಾ ಸನಿಲ್ ವೇದ ಸುವರ್ಣ ಸುಂದರಿ ಪೂಜಾರಿ ಸುಜಾತ ಪೂಜಾರಿ ಪ್ರೀತಿ ಅಮೀನ್ ಲೀಲಾವತಿ ಸಾಲ್ಯಾನ್ ಶೋಭಾ ಜ್ಯೋತಿ ಕೋಟ್ಯಾನ್ ಸವಿತಾ ಪೂಜಾರಿ ಲಕ್ಷ್ಮಿ ದೇವಾಡಿಗ ರೋಹಿಣಿ ಕೋಟ್ಯಾನ್ ಸರಸ್ವತಿ ಸುವರ್ಣ ಚಂದ್ರಾವತಿ ಪೂಜಾರಿ ಸತೀಶ್ ಅಮೀನ್, ಜತೆ ಕೋಶಾಧಿಕಾರಿ ಉಮೇಶ್ ಜಿ ಕೋಟ್ಯಾನ್, ಸ್ಥಳೀಯ ಭಾರತ್ ಬ್ಯಾಂಕ್ ಪ್ರಬಂಧಕರು ಇನ್ನಿತರ ಮಹಿಳಾ ಸದಸ್ಯರು, ಕಚೇರಿಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.