
ಮುಂಬಯಿ : ಪ್ರತಿ ವರ್ಷ ಅತಿ ಹೆಚ್ಚು ಠೇವಣಿ ಸಂಗ್ರಹಿಸಿದ ಸೊಸೈಟಿ ಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ “BANCO BLUE RIBBON” ಪ್ರಶಸ್ತಿಯು ಮುಂಬೈ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ್ನು ಗುರುತಿಸಿ 2022 – 2023 ಠೇವಣಿ ವರ್ಗದ ಅಡಿಯಲ್ಲಿ ಲಭಿಸಿರುತ್ತದೆ.
BANCO 1990 ರಲ್ಲಿ ಸ್ಥಾಪಿಸಲಾದ ಏವಿಸ್ ಪಬ್ಲಿಕೇಶನ್ನ ಅತ್ಯಂತ ಪ್ರಸಿದ್ಧ ಮತ್ತು ವಿಶ್ವಾಸಾರ್ಹ BFSI (ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯ) ಪ್ರಕಾಶನ ಬ್ರಾಂಡ್ ಆಗಿದೆ. “BANCO BLUE RIBBON” ಎಲ್ಲಾ ಸಹಕಾರಿ ಬ್ಯಾಂ ಕ್ ಗಳು ಮತ್ತು ಕ್ರೆಡಿಟ್ ಸೊಸೈಟಿಗಳಿಗೆ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಇಂತಹ ವೇದಿಕೆಯಲ್ಲಿ ಬಂಟ ಸಮಾಜದ ಪ್ರತಿಷ್ಠಿತ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಆರ್ಥಿಕ ಸೇವಾ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದೆ.
ಈ ಹಿಂದೆಯೂ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಗೆ 4 ಬಾರಿ ಈ ಪ್ರಶಸ್ತಿ ಯು ಲಭ್ಯವಾಗಿರುವುದಲ್ಲದೆ, ಈ ಬಾರಿಯ ಪ್ರಶಸ್ತಿಯೂ ಸೊಸೈಟಿಯ ಕಿರೀಟಕ್ಕೆ ಮುಕುಟಪ್ರಾಯವಾಗಿ ಲಭಿಸಿದೆ ಎನ್ನುವುದು ಅತ್ಯಂತ ಅಭಿಮಾನದ ವಿಷಯ ಬ್ಯಾಂಕೊ/ಏವಿಸ್ ಪಬ್ಲಿಕೇಷನ್, ಕೊಲ್ಲಾಪುರ ಮತ್ತು ಗ್ಯಾಲಕ್ಸಿ ಇನ್ಮಾ ಪುಣೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಪೆ 13ರಂದು ಡೆಲ್ಟಿನ್ ರೆಸಾರ್ಟ್ ನಲ್ಲಿ ನಡೆಯಿತು.
. ಸಹಕಾರಿ ಇಲಾಖೆ ಪುಣೆ ಯ ಮಾಜಿ ಆಯುಕ್ತರಾದ ಮಧುಕರ ರಾವ್ ಚೌಧರಿ, ಅಶೋಕ್ ನಾಯಕ್, ನಿರ್ದೇಶಕ ಗ್ಯಾಲಕ್ಸಿ ಇನ್ಮಾ ಪುಣೆ ಮತ್ತು ಅವಿನಾಶ್ ಶಿಂತ್ರೆ, ಮುಖ್ಯ ಸಂಪಾದಕ ಬ್ಯಾಂಕೊ, ಏವಿಸ್ ಪಬ್ಲಿಕೇಷನ್, ಕೊಲ್ಲಾಪುರ ಇವರ ಉಪಸ್ಥಿತಿಯಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿ, ಉಪಕಾರ್ಯಧ್ಯಕ್ಷ ಡಾ. ಆರ್ ಕೆ ಶೆಟ್ಟಿ ಪ್ರಶಸ್ತಿ ಯನ್ನು ಸ್ವೀಕರಿಸಿದರು.
ಪ್ರಶಸ್ತಿಯನ್ನು ಸ್ವೀಕರಿಸಿದ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿಅವರು ಸೊಸೈಟಿಯ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಯಾವಾಗಲೂ ಬೆಂಬಲಿಸಿದ ನಮ್ಮ ಎಲ್ಲಾ ಷೇರುದಾರರು,
ಠೇವಣಿದಾರರು, ನಿರ್ದೇಶಕರ ಮಂಡಳಿ ಮತ್ತು ಸಲಹಾ ಮಂಡಳಿಯ ಸದಸ್ಯರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ. ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಆಡಳಿತ ಮಂಡಳಿ.
ನಿರ್ದೇಶಕರ ಮಂಡಳಿ ಮತ್ತು ಸಲಹಾ ಮಂಡಳಿ,ಎಲ್ಲಾ ಮಾಜಿ ಕಾರ್ಯಾಧ್ಯಕ್ಷರು, ಹಾಗೂ ಬಂಟರ ಸಂಘ ಮುಂಬೈಯ ಅಧ್ಯಕ್ಷರಾಗಿರುವ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು, ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು,
ಬಂಟರ ಸಂಘ ಮುಂಬೈ ಇದರ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರು ಮಾತೃಭೂಮಿಯ ಎಲ್ಲಾ ಪದಾಧಿಕಾರಿಗಳನ್ನು, ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ.