
ಕರ್ನಾಟಕ ಸಂಘ, ಸಯನ್ ಇದರ ಮಹಾಪೋಷಕರಾಗಿರುವ, ಅಂತರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞ, ಡಾ.ಸದಾನಂದ ಶೆಟ್ಟಿ ಯವರು 2024 ನೇ ಸಾಲಿನ ಬೆಸ್ಟ್ ಡಾಕ್ಟರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ.
ಇಂದು ಸಯನ್ ನಲ್ಲಿರುವ ಅವರ ಕ್ಲಿನಿಕ್ನಲ್ಲಿ ಸಂಘದ ವತಿಯಿಂದ ಅವರನ್ನು ಭೇಟಿಯಾಗಿ ಶಾಲು ಹೊದಿಸಿ, ಪುಷ್ಪ ಗುಚ್ಛವನ್ನಿತ್ತು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷರುಗಳಾದ
ಶ್ರೀ ಸದಾಶಿವ ಶೆಟ್ಟಿ ಹಾಗೂ ಶ್ರೀ ಸದಾನಂದ ಶೆಟ್ಟಿ ಪೇಟ ತೊಡಿಸಿ, ಪುಷ್ಪ ಗುಚ್ಛವನ್ನಿತ್ತು ಗೌರವಿಸಿದರೆ, ಸಂಘದ ಸಂಸ್ಥಾಪಕ ಶ್ರೀ ಹ್ಯಾರಿ ಸಿಕ್ವೇರಾ ಶಾಲು ಹೊದಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ.ಶೆಟ್ಟಿಯವರು
ನಮ್ಮ ಸಂಘದ ಬೆಳವಣಿಗೆಗೆ ನಾವೆಲ್ಲರೂ ಸೇರಿ ದುಡಿಯಬೇಕು.
ಸಯನ್ ಪರಿಸರದಲ್ಲಿ ಕರ್ನಾಟಕ ಸಂಘವು ಕಳೆದ ವರ್ಷ ದಸರಾ ಸಮಯದಲ್ಲಿ ಹುಟ್ಟಿ ಕೊಂಡಾಗ ಬಹಳಷ್ಟು ಸಂತೋಷ ಅನುಭವಿಸಿದೆ.
ಕಳೆದ 60 ವರ್ಷಗಳಿಂದ ನಾನು ಇದೇ ಪರಿಸರದಲ್ಲಿ ಬದುಕು ಸಾಗಿಸಿದವ.
ಈ ಪರಿಸರದಲ್ಲಿ ಸಂಘ ಸಂಸ್ಥೆಗಳು ಇಲ್ಲದ ಒಂದು ಕೊರತೆ ನಮ್ಮನ್ನೆಲ್ಲ ಕಾಡುತ್ತಿತ್ತು. ಇದೀಗ ಆ ಕೊರತೆಯನ್ನು ತಾವೆಲ್ಲ ಸೇರಿ ನೀಗಿಸಿದ್ದೀರಿ.
ಇಂದು ಈ ಸಂಸ್ಥೆಯ ವತಿಯಿಂದ ದೊರೆತ ಸನ್ಮಾನ ಇದುವರೆಗೆ ನನ್ನ ಬದುಕಿನಲ್ಲಿ ದೊರೆತ ಸನ್ಮಾನಕ್ಕಿಂತ ಹೆಚ್ಚಿನ ಸಂತಸವನ್ನು ನೀಡಿದೆ ಎಂದು ನುಡಿದರು.
ಕಾರ್ಯದರ್ಶಿ ಡಾ.ಜಿ.ಕುಸುಮಾ, ಜೊತೆ ಕಾರ್ಯದರ್ಶಿ ಶ್ರೀ ದಯಾನಂದ ಮೂಲ್ಯ, ಸದಸ್ಯರುಗಳಾದ ವಾಣಿ ಪ್ರಸಾದ್ ಕರ್ಕೇರ,
ಶ್ರೀ ಚಂದ್ರ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು.