
ಸಾಫಲ್ಯ ಸೇವಾ ಸಂಘ (ರಿ).ಮುಂಬಯಿ
ತನ್ನ ಸಮಾಜ ಬಾಂಧವರ ಅಭಿವೃದ್ಧಿಗಾಗಿ ನಿರಂತರ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದರ ಮಹಿಳಾ ವಿಭಾಗವು
ಮಹಿಳಾ ದಿನಾಚರಣೆಯ ಪ್ರಯುಕ್ತ ಸಮಾಜ ಬಾಂಧವರಿಗಾಗಿ
ಸಾಫಲ್ಯ ಸ್ತ್ರೀ ಶಕ್ತಿ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸಾಫಲ್ಯ ಸಮಾಜದ ಯಶಸ್ವಿ ಮಹಿಳೆಯರಿಗೆ ಗೌರವಾರ್ಪಣೆ ಈ ಕಾರ್ಯಕ್ರಮದ ವಿಶೇಷವಾಗಿದೆ.
ಮಾರ್ಚ್ 9 ರ ಶನಿವಾರ ಮಧ್ಯಾಹ್ನ 3.00 ರಿಂದ ಕುರ್ಲಾ ಬಂಟರ ಭವನದ ಆನೆಕ್ಸ್ ಹಾಲ್ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಾಟ್ಯಗುರು ಕುಮಾರಿ ಲತಿಕಾ ಶ್ರೀಯಾನ್, ಸಮಾಜ ಸೇವಕಿ ಶ್ರೀಮತಿ ಶಕುಂತಲಾ ಪುತ್ರನ್, ಬರಹಗಾರ್ತಿ ಶ್ರೀಮತಿ ಸುಮಿತ್ರಾ ಬಿ ಗುಜರನ್, ಸಂಪಾದಕಿ, ಬರಹಗಾರ್ತಿ ಡಾ. ಜಿ ಪಿ ಕುಸುಮ, ಮತ್ತು ಸಮಾಜ ಸೇವಕಿ ಸುಮಿತ್ರ ವಿ ಕುಂಜರ್ ಅತಿಥಿಗಳಾಗಿ ಆಗಮಿಸಲಿದ್ದಾರೆ.ಈ
ಕಾರ್ಯಕ್ರಮವು ಲಲಿತಾ ಸಹಸ್ರನಾಮ , ಹಳದಿ ಕುಂಕುಮ, ದಿ ಆರ್ಟ್ ಆಫ್ ಲೀವಿಂಗ್ ಹೀಗೆ ಹಲವು ಕಾರ್ಯಕ್ರಮಗಳ ಜೊತೆಗೆ ವಿಶೇಷ ಮನರಂಜನೆಯ ಆಟವನ್ನೂ ಒಳಗೊಂಡಿದೆ. ಸಮಾಜ ಬಾಂಧವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗುವಂತೆ ಸಹಕರಿಸಬೇಕಾಗಿ ಸಾಫಲ್ಯ ಸೇವಾ ಸಂಘದ ಕಾರ್ಯಾಧ್ಯಕ್ಷ ಶ್ರೀ
ಶ್ರೀನಿವಾಸ ಸಪಲ್ಯ ವಿನಂತಿಸಿದ್ದಾರೆ.
ವಿ.ಸೂ: ಕಾರ್ಯಕ್ರಮ ಮುಗಿದ ನಂತರ ಕುರ್ಲಾ ರೈಲ್ವೆ ಸ್ಟೇಷನ್ ವರೆಗೆ ಬಸ್ಸಿನ ವ್ಯವಸ್ಥೆ ಇದೆ.