
ಮುಂಬಯಿಯ ಖ್ಯಾತ ಭರತನಾಟ್ಯ ಕಲಾವಿದೆ ಡೊಂಬಿವಲಿಯ ರಿತಿಕ ಶಂಕರ್ ಸುವರ್ಣರವರು ಮಾರ್ಚ್ 3 ರಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಭರತನಾಟ್ಯದ ಮೂಲಕ ಶ್ರೀ ಬಾಲ ರಾಮ ದೇವರ ಸೇವೆ ಮಾಡಿದರು.

ಈ ಸಂಧರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ರೀತಿಕರವರನ್ನು ಹರಸಿದರು. ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ , ಉಡುಪಿ ಸುವರ್ಧನ್ ನಾಯಕ್ ಹಾಗೂ ಮುಂಬಯಿ ಸ್ಯಾಕ್ಸೋಫೋನ್ ವಾದಕ ಹರೀಶ್ ಪೂಜಾರಿ ಯಾತ್ರೆಗೆ ಸಹಕರಿಸಿದ್ದರು.

ಡೊಂಬಿವಲಿ ಪಶ್ಚಿಮದ ಶಂಕರ್ ಸುವರ್ಣ ಹಾಗೂ ನಂದ ಸುವರ್ಣ ದಂಪತಿಗಳ ಸುಪುತ್ರಿ ಆಗಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದ ಪವಿತ್ರ ಭಟ್ ಹಾಗೂ ಅಪರ್ಣ ಶಾಸ್ತ್ರಿ ಭಟ್ ಅವರ ಶಿಷ್ಯೆ ಆಗಿರುವರು.