
ಶ್ರೀಮಹಿಷಾಸುರಮರ್ದಿನಿ ದೇವಸ್ಥಾನ ಬಗ್ವಾಡಿ, ಕುಂದಾಪುರ ಇಲ್ಲಿ ಸೇವೆ ಸಲ್ಲಿಸುತಿದ್ದ ಶ್ರೀ ಬಚ್ಚು ಸಿ ಕುಂದರ್ (83) ಅವರು, ಇಂದು ರಾತ್ರಿ 3.30ಕ್ಕೆ ಚಿನ್ಮಯ್ ಆಸ್ಪತ್ರೆ ಕುಂದಾಪುರದಲ್ಲಿ ಅಲ್ಪದಿನದ ಅನಾರೋಗ್ಯದಿಂದ ದೈವದೀ ನರಾದರು.
ಬಗ್ವಾಡಿ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಒಬ್ಬ ಪ್ರಾಮಾಣಿಕ ಸೇವಕರಾಗಿ,ಕೋಶಾಧಿಕಾರಿಯಾಗಿ ಮ್ಯಾನೇಜರರಾಗಿ ಉಳಿತಾಯಕ್ಕೆ ಹೆಚ್ಚಿನ ಗಮನಹರಿಸಿ ದೇವಸ್ಥಾನದ ಸಂಪತ್ತು ಹೆಚ್ಚಿಸುವಲ್ಲಿ ದುಡಿದ ಮಹನೀಯರು ಇವರು . ಎಲ್ಲರನ್ನೂ ನಗುಮೊಗದಿಂದ ಬರಮಾಡಿಕೊಳ್ಳುತ್ತಾ ಭಕ್ತರಿಗೆ ದೇವಸ್ಥಾನದ ಬಗ್ಗೆ ಅಭಿಮಾನ ಮೂಡುವಂತೆ ಮಾಡುವಲ್ಲಿ ಯಶಸ್ವಿಯದವರು ಸಮಾಜದ ಹಿರಿಯರಾದ B C(ಬಚ್ಚು ) ಕುಂದರ್.
ಅವರ ನಿಧನಕ್ಕೆ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಮುಂಬಯಿಯ ಮುಖ್ಯ ಕಛೇರಿಯ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.