32 C
Mumbai
October 5, 2026
Mumbai News Kannada
ಸುದ್ದಿ

ಬೆಂಗಳೂರು : ಭಾರತ್ ಬ್ಯಾಂಕ್ ಅಧಿಕಾರಿ ಹೇಮಾ ಭಾಸ್ಕರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ



ವರದಿ: ಜಯ ಸಿ ಪೂಜಾರಿ, ಕೆಳಾರ್ಕಳ ಬೆಟ್ಟು.

ಭಾರತ್ ಬ್ಯಾಂಕಿನ ಬೆಂಗಳೂರಿನ ಮಾಗಡಿ ರಸ್ತೆ ಶಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೇಮಾ ಭಾಸ್ಕರ್ ಅವರು 35 ವರ್ಷಗಳ ಸುದೀರ್ಘ ಹಾಗೂ ಸ್ತುತ್ಯಾರ್ಹ ಸೇವೆಯ ನಂತರ ದಿನಾಂಕ 31.01.2026 ರಂದು ಸೇವಾ ನಿವೃತ್ತಿ ಹೊಂದಿದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ ಮುಂಬೈನ ಸಿ.ಎಸ್.ಟಿ ಪಕ್ಕದ ಬಳ್ಳಾರ್ಡ್ ಪೀಯರ್ ಹಾಗೂ ಮೀರಾ ರೋಡ್ ಭಾಯಂದರ್ ಶಾಖೆಗಳಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದ ಇವರು, ಬ್ಯಾಂಕಿನ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅವರ ನಿವೃತ್ತಿಯ ಅಂಗವಾಗಿ ಮಾಗಡಿ ರಸ್ತೆ ಶಾಖೆಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾರತ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಮುರಳೀಧರ ಕೋಟ್ಯಾನ್ ಅವರು ಉಪಸ್ಥಿತರಿದ್ದು, ಹೇಮಾ ಅವರ ನಿಷ್ಠಾವಂತ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹೇಮಾ ಅವರ ಪತಿ ಭಾಸ್ಕರ್ ಪೂಜಾರಿ ಹಾಗೂ ಪುತ್ರ ಆಕಾಶ್ ಪೂಜಾರಿ ಅವರು ಜೊತೆಯಾಗಿದ್ದರು.
ಮಾಗಡಿ ರಸ್ತೆ ಶಾಖಾ ಪ್ರಬಂಧಕರಾದ ಗೋಪಾಲ್ ಪೂಜಾರಿ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಸಮಾರಂಭದಲ್ಲಿ ವಿವಿಧ ಶಾಖೆಗಳ ಪ್ರಬಂಧಕರು ಹಾಗೂ ಸಹೋದ್ಯೋಗಿಗಳು ಪಾಲ್ಗೊಂಡು ತಮ್ಮ ಆತ್ಮೀಯ ಸಹೋದ್ಯೋಗಿಗೆ ಸನ್ಮಾನಿಸಿ ಶುಭ ಕೋರಿದರು.



Related posts

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೆ.ವಾಸುದೇವಾಚಾರ್ಯ ದತ್ತಿ ಪುರಸ್ಕಾರ

Mumbai News Desk

ಡಿ.ಕೆ. ಶಿವಕುಮಾರ್ ಅವರಿಗೆ ಹಿತೈಷಿ ತೋನ್ಸೆ ಜಯಕೃಷ್ಣ ಶೆಟ್ಟಿ ಅವರಿಂದ ಆತ್ಮೀಯ ಅಭಿನಂದನೆ: ಪರಿಸರ ಸಂಘಟನೆಯ ಕಾರ್ಯವೈಖರಿಗೆ ನಿಯೋಜಿತ ಸಿಎಂ ಶ್ಲಾಘನೆ

Mumbai News Desk

ಸರ್ ಜೆ ಜೆ ಆಸ್ಪತ್ರೆಯಲ್ಲಿ ನೂತನ ಅತ್ಯಾಧುನಿಕ ಹೆರಿಗೆ ವಾರ್ಡ್ ಲೋಕಾರ್ಪಣೆ

Mumbai News Desk

ಧಾರ್ಮಿಕ ಕ್ಷೇತ್ರಗಳ ಬಗ್ಗೆ ಸ್ಥಾಪಿತ ಹಿತಾ ಶಕ್ತಿಗಳ ಅಪಪ್ರಚಾರ ಮೂಲಕ ಭಕ್ತಾಭಿಮಾನಿಗಳ ದಿಕ್ಕು ತಪ್ಪಿಸುವುದು ಸನಾತನ ಧರ್ಮಕ್ಕೆ ಮಾರಕ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ.

Mumbai News Desk

ಮುಂಬಯಿ ಕನ್ನಡ ಸಂಘ: ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk

ಮಹಾಕುಂಭ ಮೇಳಕ್ಕೆ ಹರಿದುಬಂದ ಭಕ್ತ ಸಾಗರ: ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; ಹಲವರ ಸಾವು ಶಂಕೆ, ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

Mumbai News Desk