
ಮುಂಬಯಿ ಮಾ 21. ಎರ್ಮಾಳು ಹೊಸಮನೆ ದಿ. ವೆಂಕ್ಕಪ್ಪ ಶೆಟ್ಟಿ ಮತ್ತು ದಿ.ನಾಗಿ ಶೆಡ್ತಿಯವರ ಪುತ್ರ ರಾಘು ವಿ ಶೆಟ್ಟಿ. (79)ಯವರು ಮಾ 21 ರಂದು ಪೊವಾಯಿಯಲ್ಲಿರುವ ತುಂಗಾ ಗಾವ್ ನ ಶಾಂತಿ ಕಾಂಪ್ಲೆಕ್ಸ್ ನಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ .
ಮೃತರು ಪತ್ನಿ ಯಶೋಧ ಶೆಟ್ಟಿ ,ಪುತ್ರಿಯರಾದ ಮಮತಾ ಶೆಟ್ಟಿ,ಸರಿತಾ ಶೆಟ್ಟಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ,
ರಾಘು ಶೆಟ್ಟಿ ಅವರು ಅಂದೇರಿ ಪೂರ್ವದ ಜೆರಿಮೆರಿ ಯ ಮಮತಾ ಹೋಟೆಲ್ ಮಾಲಕರಾಗಿದ್ದು ಈ ಪರಿಸರದಲ್ಲಿ ರಾಘುಣ್ಣ ನೆಂದೇ ಜನಪ್ರಿಯರಾಗಿದ್ದಾರು,
ಮೃತರ ಅಂತ್ಯಕ್ರಿಯೆಯು ಮಾ 22 ರಂದು ಬೆಳಿಗ್ಗೆ 8-00ಕ್ಕೆ ಪೊವಾಯಿಯಲ್ಲಿ ನಡೆಯಲಿದೆ,