July 22, 2026
Mumbai News Kannada
ಸುದ್ದಿ

ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ   ಹುಟ್ಟೂರು, ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ , ಆರ್ಥಿಕ ನೆರವು ವಿತರಣೆ.







 

ಮುಂಬಯಿಯ ಉದ್ಯಮಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಆರ್ ಕಾಂಚನ್   ಅವರು ತನ್ನ ಹುಟ್ಟೂರು ಉಪ್ಪಿನಕುದ್ರುವಿನಲ್ಲಿ ತಾನು ಬೆಳೆದ ಗ್ರಾಮದ ಮತ್ತು ಕಲಿತ  ಶಾಲೆಯ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ವಿತರಣಾ ಮತ್ತು ಪುಸ್ತಕ ವಿತರಣೆ  ಕಾರ್ಯಕ್ರಮವನ್ನು ಕಾಂಚನ್ ದಂಪತಿಗಳ ಅನುಪಸ್ಥಿತಿಯಲ್ಲಿ ಈ ಬಾರಿ ಶಾಲಾ ಪ್ರಾರಂಭದ ದಿನದಂದು ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಉಪಸ್ಥಿತಿಯಲ್ಲಿ ಆಯೋಜಿಸಲಾಯಿತು.

ಕಳೆದ 19 ವರ್ಷಗಳಿಂದ ಸುರೇಶ್ ಕಾಂಚನ್ ಅವರು ಈ ಕಾರ್ಯಕ್ರಮದ ಮೂಲಕ ತಮ್ಮ ಹುಟ್ಟೂರಿನಲ್ಲಿ ಲಕ್ಷಾಂತರ ರೂಪಾಯಿಗಳ ಆರ್ಥಿಕ ನೆರವನ್ನು ಬಡ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದಾರೆ. ತಮ್ಮ ಉದ್ಯಮದ ಲಾಭಾಂಶದಲ್ಲಿ ಹೆಚ್ಚಿನ ಪಾಲನ್ನು ಸಮಾಜ ಸೇವೆಗಾಗಿ ಮುಡಿಪಾಗಿಡುತ್ತಾ ಬಂದಿದ್ದು, ನಿರಂತರ ಮುಂಬಯಿ ಹಾಗೂ ತವರೂರಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡ ಕುಟುಂಬದ ವಿವಾಹ ಕಾರ್ಯಗಳಿಗೆ ನೆರವು, ವೈದ್ಯಕೀಯ ನೆರವು, ಕಲೆ ಮತ್ತು ಕಲಾವಿದರಿಗೆ ನೆರವು, ದೈವ – ದೇವಸ್ಥಾನದಗಳ ಜೀರ್ಣೋದ್ಧಾರಕ್ಕೆ, ಹೀಗೆ ವಿವಿಧ ರೀತಿಯ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ x ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಬಂದಿದ್ದಾರೆ.
.
ಸುರೇಶ್.ಆರ್.ಕಾಂಚನ್ ಹಾಗೂ ಅವರ ಧರ್ಮಪತ್ನಿ  ಯಶೋಧ.ಎಸ್.ಕಾಂಚನ್  ಬಾರಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದುಕೊಳ್ಳದೆ ಶಾಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೊತ್ತವನ್ನು ಮತ್ತು ಪರಿಕರಗಳನ್ನು ನೀಡುವ ಉದ್ದೇಶದಿಂದ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ವಿದ್ಯಾರ್ಥಿಗಳ ಪಾಲಕರು ಹಾಗೂ
ಯುವಕ  ಮಂಡಲ ಉಪ್ಪಿನ ಕುದ್ರು ಇದರ ಅಧ್ಯಕ್ಷರಾದ ಗಿರೀಶ್ ಮೊಗವೀರ, ಉಪಾಧ್ಯಕ್ಷ ಮಂಜುನಾಥ ಶಿವಾಜಿಬೆಟ್ಟು, ಕಾರ್ಯದರ್ಶಿ ಆದರ್ಶ ಶೇರುಗಾರ್ , ಪ್ರಧಾನ ಸಂಚಾಲಕರಾದ ಚಂದ್ರ ಕುಂದರ್ ಮತ್ತು ಗೋಪಾಲ (ಗೋಪಿ) ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥರಿದ್ದರು.

B. Dinesh Kulal

Mob.: 9821868674



Related posts

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಕಳ ತಾಲೂಕು  ಯುವ ಪತ್ರಕರ್ತ ಹರಿಪ್ರಸಾದ್ ನಂದಳಿಕೆ  ಅತ್ಯುತ್ತಮ ವರದಿಗಾರ ಪ್ರಸಸ್ತಿ,

Mumbai News Desk

ಆಂಧ್ರಪ್ರದೇಶದ ಪಟಾಕಿ ಘಟಕದಲ್ಲಿ ಭಾರಿ ಸ್ಫೋಟ, 18 ಮಂದಿ ಸಾವು

Mumbai News Desk

ಬಂಟ್ವಾಳ : ಉಡುಪಿ ಶ್ರೀಕೃಷ್ಣ ಮಠಕ್ಕೆ ತೆರಳುತ್ತಿದ್ದ ಕಾರು ಅಪಘಾತ; ಪೊಲೀಸ್ ಅಧಿಕಾರಿ ಪತ್ನಿ ಸೇರಿ ಮೂವರ ದುರ್ಮರಣ

Mumbai News Desk

ಶ್ರೀ ನಾರಾಯಣ ಗುರು ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ರಜತ ಮಹೋತ್ಸವ – ವಿಶ್ವಾಸ, ಸೇವೆ ಮತ್ತು ಬೆಳವಣಿಗೆಯ 25 ವರ್ಷಗಳು

Mumbai News Desk

ಬೊಯಿಸರ್ ಸೋಮೇಶ್ವರ ಮಂದಿರ :17ನೇ ವರ್ಧಂತ್ಯುತ್ಸವ ಸಂಪನ್ನ  

Mumbai News Desk

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಮುಂಬಯಿ ವಿಭಾಗದ ಕಾರ್ಯದರ್ಶಿಯಾಗಿ ಮಹಾದೇವ ಪೂಜಾರಿ ಆಯ್ಕೆ

Mumbai News Desk