
ಮಕ್ಕಳು ಸಮಾಜದ ಸದೃಢ ಪ್ರಜೆಗಳಾಗಿ ಭವ್ಯ ಬದುಕನ್ನು ಕಟ್ಟಿಕೊಳ್ಳಲು ನಮ್ಮದು ಪ್ರೋತ್ಸಾಹ : ಕೆ ರಾಜೇಗೌಡ
ಮುಂಬಯಿ, ಎ.9- ಬಾಲ್ಯಾವಸ್ಥೆ ಯಲ್ಲಿ ಮಕ್ಕಳ ಬುದ್ದಿ ತೀಕ್ಷ್ಯವಾಗಿದ್ದು, ಮಕ್ಕಳಲ್ಲಿನ ಅರಿವಿನ ಮಿತಿಯನ್ನು ಅಂದಾಜಿಸಿ ಮಕ್ಕಳನ್ನು ಪ್ರೋತ್ಸಾಹಿಸ ಬೇಕೇ ಹೊರತು ಪೋಷಕರ ಇಚ್ಛೆಯಂತೆ ಬಲವಂತವಾಗಿ ಎಂದಿಗೂ ನಡೆಸಿಕೊಳ್ಳಬಾರದು. ಎಂದು ಬೊರಿವಲಿ ಪೂರ್ವದಲ್ಲಿನ ವೀಣಾ ಕಾಲೇಜ್ ಆಫ್ ಕಾಮರ್ಸ್ ಎಂಡ್ ಸಾಯನ್ಸ್ ಇದರ ಪ್ರಾಂಶುಪಾಲ ಡಾ| ರಿತೇಶ್ ಸಿರಂಗೇಕರ್ ತಿಳಿಸಿದರು.
ಏಪ್ರಿಲ್ ,7 ರಂದು ಒಕ್ಕಲಿಗರ ಸಂಘ ಮಹಾರಾಷ್ಟ್ರ (ರಿ.)
[ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ]
ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ವಿದ್ಯಾರ್ಥಿ ಶಿಕ್ಷಣದ ಬಗ್ಗೆ ವಿಶೇಷ ಮಾಹಿತಿ ಶಿಬಿರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಡಾ| ಸಿರಂಗೇಕರ್ ಮಾತನಾಡಿದರು,
ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಕೆ.ರಾಜೇಗೌಡ ಸಭಾಧ್ಯಕ್ಷತೆ ವಹಿಸಿ ದೂರು,
ಸಂಘಟನಾ ಕಾರ್ಯಧ್ಯಕ್ಷ ರಂಗಪ್ಪ ಸಿ.ಗೌಡ, ಉಪ ಉಪ ಕಾರ್ಯಾಧ್ಯಕ್ಷ ಜಿತೇಂದ್ರ ಜೆ.ಗೌಡ, ಗೌ। ಪ್ರಧಾನಕಾರ್ಯದರ್ಶಿ ಗಂಗಾಧರ್ ಎನ್.ಗೌಡ, ಗೌ। ಕೋಶಾಧಿಕಾರಿ ದೀಪಕ್ ಆರ್. ಗೌಡ, ಜೊತೆ ಕಾರ್ಯದರ್ಶಿ ರವಿ ಪಿ.ಗೌಡ, ಜೊತೆ ಕೋಶಾಧಿಕಾರಿ ಅಶೋಕ್ ಕೆ.ಗೌಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮಂಜುನಾಥ್ ಸಿ.ಗೌಡ, , ಧನಂಜಯ ಗೌಡ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತಾ ದೀಪಕ್ ಗೌಡ, ಉಪ ಕಾರ್ಯಾಧ್ಯಕ್ಷೆ ಉಷಾ ವೆಂಕಟೇಶ್ ಗೌಡ ಮತ್ತಿತರ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ವೇದಿಕೆಯಲ್ಲಿನ ಗಣ್ಯರು ಸಂಪನ್ಮೂಲವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಿದರು
ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಉಚಿತ ಲೇಖನಿ ಪುಸ್ತಕಗಳನ್ನು ವಿತರಿಸಿದರು
ಸಂಘದ ಅಧ್ಯಕ್ಷರಾದ ಕೆ ರಾಜೇಗೌಡ ಅವರು ಮಾತನಾಡುತ್ತಾ ಸಮಾಜದ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇದು ವರ್ಷಂಪ್ರತಿ ನಡೆಸಲು ಯೋಚಿಸಿದ್ದೇವೆ. ಮಕ್ಕಳು ಸಮಾಜದ ಸದೃಢ ಪ್ರಜೆಗಳಾಗಿ ಭವ್ಯ ಬದುಕನ್ನು ಕಟ್ಟಿಕೊಳ್ಳಲು ನಮ್ಮದು ಪ್ರೇರಣಾಶಕ್ತಿಯಷ್ಟೇ ಎಂದು ತಿಳಿಸಿದರು.
ಮಹಿಳಾ ವಿಭಾಗದ ಸದಸ್ಯರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು ,
ಪ್ರೊ| ಡಾ| ಬಲರಾಮ ಗೌಡ ಅವರು ಡಾ| ಸಿರಂಗೇಕರ್ ಅವರನ್ನು ಪರಿಚಯಿಸಿ , ಪುಷ್ಪಲತಾ ಗೋವಿಂದ ಗೌಡ ಕಾರ್ಯಕ್ರಮ ನಿರೂಪಿಸಿದರು. ಪ್ರೊ| ಚೇತನ್ ಗೌಡ ಪ್ರಸ್ತಾವನೆಗೈದು ವಂದಿಸಿದರು.
ಕಾರ್ಯಕ್ರಮ ಯಶಸ್ವಿ ಆಗುವಲ್ಲಿ ಸಂಘದ ಪದಾಧಿಕಾರಿಗಳಾದ ರಂಗಪ್ಪ ಗೌಡ, ಜಿತೇಂದ್ರ ಜೆ.ಗೌಡ,.
ಕೆ.ರಾಜೇಗೌಡ ಅಧ್ಯಕ್ಷರು. . ಎ.ಕೆಂಪೇಗೌಡ .ಸುರೇಶ ಗೌಡ, ಗಂಗಾಧರ ಗೌಡ , ದೀಪಕ್ ರಂಗಪ್ಪ ಗೌಡ -.
.ರವಿ ಪುಟ್ಟಸ್ವಾಮಿಗೌಡ ,
.ಅಶೋಕ್ ಗೌಡ – ಮಂಜುನಾಥ್ ಗೌಡ-
ಚಂದ್ರಶೇಖರ ಗೌಡ –
ಮಂಜುನಾಥ್ ಗೌಡ
ಕುಮಾರ್ ಆರ್ ಗೌಡ
ರೋಹಿತ್ ಗೌಡ,
ಬಲರಾಮ್ ಸಿ ಗೌಡ,
ಚೇತನ್ ಗೌಡ, ಮತ್ತಿತರ ಸದಸ್ಯರು ಮಹಿಳಾ ವಿಭಾಗದ ಸದಸ್ಯರು ಸಹಕರಿಸಿದರು