24.7 C
Karnataka
April 3, 2025
ಮುಂಬಯಿ

ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ ,



ತುಳುವರಿಗೆ ದೈವ ನಂಬಿಕೆಯೇ ಜೀವಾಳ : ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ ಶೆಟ್ಟಿ.

ಬೊರಿವಲಿ, ಜೂ. 5:   ಶ್ರೀ ಕ್ಷೇತ್ರ ಜಯರಾಜ್ ನಗರ ಬೊರಿವಿಲಿ ಪಶ್ಚಿಮ ಇದರ 34ನೇ ವಾರ್ಷಿಕ ಮಹಾಪೂಜಾ ಮಹೋತ್ಸವದ ಅಂಗವಾಗಿ ಜೂ.  3ರಂದು ರಾತ್ರಿ ದೇವರ ಉತ್ಸವ ಪಲ್ಲಕ್ಕಿ ಶೋಭ ಯಾತ್ರೆ ಹಾಗೂ ಕೊಡಮಣಿತಾಯ ದೈವದೇವರ ಭೇಟಿಯೊಂದಿಗೆ ಸಂಪನ್ನಗೊಂಡಿತು. 

     ಬೆಳಿಗ್ಗೆ ಶ್ರೀ ಮಹಿಷಮರ್ದಿನಿ  ದೇವಸ್ಥಾನದ ಸನ್ನಿಧಾನದಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳವರ ನೇತೃತ್ವದಲ್ಲಿ ಕವಾಟೋದ್ಘಾಟನೆ ಪಂಚಾಮೃತ ಅಭಿಷೇಕ ಪ್ರಸನ್ನ ಪೂಜೆ ಜರುಗಿದ ಬಳಿಕ ಶ್ರೀ ಮಹಿಷ ಮರ್ದಿನಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರುಗಿತು. ಆ ಬಳಿಕ ಶ್ರೀದೇವಿ ಮಹಿಷಮರ್ದಿನಿ ಗೆ ಮಹಾಪೂಜೆ ಚೂರ್ಣೋತ್ಸವ ಹರಿವಾಣ ಕಾಣಿಕೆ ಸಮರ್ಪಿಸಿದ ಬಳಿಕ ಪಲ್ಲಪೂಜೆ ಅನ್ನ ಸಂತರ್ಪಣೆ ಜರುಗಿತು. ದೈವ ದೇವರ ಭೇಟಿಯ ಬಳಿಕ ಅವಭೃತ ಸ್ನಾನ ಧ್ವಜಾವರೋಹಣ ನೆರವೇರಿತು.

      ಬಳಿಕ ತುಳುನಾಡಿನ ಪರಂಪರೆಯ ದೈವ ದೇವರ ಬಗ್ಗೆ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ರಾದ ಕಣಂಜಾರು  ಕೊಳಕೆ ಬೈಲು ಪ್ರದೀಪ್ ಸಿ ಶೆಟ್ಟಿ ಮಾತನಾಡುತ್ತಾ,  ಅನಾದಿಕಾಲದಿಂದಲೂ ತುಳುನಾಡು ದೈವದೇವರ ನೆಲೆವೀಡಾಗಿದೆ.  ದೈವದ ಮೇಲಿನ ಶಕ್ತಿಯಿಂದ ಹಿರಿಯರು ಸಮಾಜಕ್ಕೆ ತುಳು ಮಣ್ಣಿಗೆ ನೀಡಿದ ಗೌರವ ಅಪಾರ.  ತುಳು ನಾಡಿನ ಮಣ್ಣಿನ ಪರಿಮಳದಲ್ಲಿ ನಾಡಿನ ಸಂಸ್ಕಾರ ಸಂಸ್ಕೃತಿ ಬೆಳೆದು ನಿಂತಿದೆ. ಬೆಳೆಯುವ ಪೈರು ಪ್ರಕೃತಿಯ ದೈವ ದೇವರ ಕೊಡುಗೆ ಎಂದು ನಂಬಿದವರು.  ಆ ಮೂಲಕ  ಕೋಲ, ಆಯನ ನಾಗರಾಧನೆ ದೈವಗಳ ನಂಬಿಕೆಗೆ ಜೀವ ತುಂಬಿದ ತುಳುನಾಡ ಜನರು ದೈವದ  ಈ ಮಣ್ಣಿನ ಶಕ್ತಿಗೆ ತಮ್ಮನ್ನು ಅರ್ಪಣೆ ಮಾಡುವ ಮೂಲಕ ನಮ್ಮ ಜೀವನ ಪಾಠವಾಗಿ ಬೆಳೆದು ಬಂದ ನಾಡಾಗಿದೆ ಎಂದು ಹೇಳಿದರು. 

     ಕಾರ್ಯಕ್ರಮದಲ್ಲಿ ದೇವಸ್ಥಾನದ ವಂಶಸ್ಥ ಸ್ಥಾಪಕ ಮೊಕ್ತೇಸರರಾದ ಕಲ್ಲಮುಂಡ್ಕೂರು ಹರಿಯಾಳಗುತ್ತು ಜಯರಾಜ್ ಶ್ರೀಧರ್ ಶೆಟ್ಟಿ ದಂಪತಿಗಳು,  ಶಾಲಿನಿ ಪ್ರದೀಪ್ ಶೆಟ್ಟಿ,  ಧನ್ಯ ಶೆಟ್ಟಿ, ಅಶೋಕ್ ಶೆಟ್ಟಿ ಜಯಪಾಲಿ ಶೆಟ್ಟಿ, ಟಿಯಾರ ಶೆಟ್ಟಿ ಬಾಲಕೃಷ್ಣ ರೈ ರಜನಿ ರೈ ಪೇಟೆಮನೆ ಪ್ರಕಾಶ್ ಶೆಟ್ಟಿ ಪ್ರೇಮ್ ನಾಥ್ ಶೆಟ್ಟಿ ರವೀಂದ್ರ ಶೆಟ್ಟಿ,  ವೆಜ್ ಟ್ರೀಟ್ ಗ್ರೂಪ್   ಆಪ್ ಹೋಟೆಲ್ಸ್, ಪಟೇಲ್ ಸದಾನಂದ ಶೆಟ್ಟಿ, ಕಸ್ತೂರಿ ಸದಾನಂದ ಶೆಟ್ಟಿ ಉದ್ಯಮಿ ಸದಾಶಿವ ಶೆಟ್ಟಿ, ಉದ್ಯಮಿ ರಘುನಾಥ ಶೆಟ್ಟಿ ದಂಪತಿ, ಅಂಕಲೇಶ್ವರ್,  ಪದ್ಮನಾಭ ಎಸ್ ಪಯ್ಯಡೆ ಮುಂಡಪ್ಪ ಎಸ್ ಪಯ್ಯಡೆ ಪೇಟೆಮನೆ ರವೀಂದ್ರ ಶೆಟ್ಟಿ ದಿವಾಕರ್ ಮ್ಹಾತ್ರೆ ಕುಟುಂಬಸ್ಥರು ಕಮಲೇಶ್ ಶೆಟ್ಟಿ ಶಿವಾನಂದ ಶೆಟ್ಟಿ ದೇವರಾಜ್ ನೆಲ್ಲಿಕಾರು, ಕೃಷ್ಣ ಹೊಳ್ಳ , ಆದರ್ಶ್ ಹಾಗೂ ಸಮಸ್ತ ಅರ್ಚಕ ವೃಂದ ಪ್ರಕಾಶ್ ಹೊಳ್ಳ, (ಬಲಿಮೂರ್ತಿ) ಸುನಿಲ್ ಶೆಟ್ಟಿ ಮಾರೂರು (ದೈವದ ಪಾತ್ರಿ) ಭಾಗವಹಿಸಿದರು.  ಹಾಗೂ ಬಹು ಸಂಖ್ಯೆಯಲ್ಲಿ ತುಳು ಕನ್ನಡಿಗರು  ಉಪಸ್ಥಿತರಿದ್ದರು.

Related posts

ಬಂಟರ ಸಂಘದಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ,

Mumbai News Desk

ಮಕ್ಕಳು ತಮ್ಮ ಮಾತ- ಪಿತರ ಬಗ್ಗೆ ಅಭಿಮಾನವಿಟ್ಟಲ್ಲಿ ಸಮಾಜ ಮತ್ತಷ್ಟು ಸುಧಾರಣೆ ಯಾಗಬಹುದು – ಧರ್ಮದರ್ಶಿ ಅಶೋಕ್ ಶೆಟ್ಟಿ

Mumbai News Desk

ದಹಿಸರ್ ಪೂರ್ವ :ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ, 18ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಪನ್ನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ ಕೋಟ್ಯಾನ್ ಆಯ್ಕೆ.

Mumbai News Desk

ಮುಂಬೈ : ಘಾಟ್ಕೋಪರ್ ನಲ್ಲಿ ಪಾದಚಾರಿಗಳ ಮೇಲೆ ಟೆಂಪೋ ಡಿಕ್ಕಿ 1 ಸಾವು, 5 ಮಂದಿಗೆ ಗಾಯ.

Mumbai News Desk

ಸ್ಮಿತಾ ಬೆಳ್ಳೂರ್ ಯವರು  ಸಂಗೀತ  ಕಛೇರಿ ಮೂಲಕ ಸಂಗೀತಕಲಾ ರಸಿಕರನ್ನು ಮನಮೋಹಕಗೊಳಿಸಿದರು

Mumbai News Desk