24.7 C
Karnataka
April 3, 2025
ಪ್ರಕಟಣೆ

ಜು. 7 ರಂದು ಗೊರೆಗಾಂವ್ ಕರ್ನಾಟಕ ಸಂಘದ 66ನೇ ವಾರ್ಷಿಕ ಮಹಾಸಭೆ



ಮುಂಬಯಿ : ಮುಂಬಯಿ ಮಹಾನಗರ ಹಾಗೂ ಉಪನಗರಗಳಲ್ಲಿ ಕಳೆದ ಸುಮಾರು 66 ವರ್ಷಗಳಿಂದ ಕನ್ನಡಾಂಬೆಯ ಸೇವೆಯಲ್ಲಿ ನಿರತವಾದ ಗೋರೆಗಾಂವ್ ಕರ್ನಾಟಕ ಸಂಘ 1958ರಲ್ಲಿ ಮೂರುರು ಸಂಜೀವ ಶೆಟ್ಟಿ ಅವರ ಸಮರ್ಥ ನೇತೃತ್ವ ಹಾಗೂ ಅಂದಿನ ಹಲವಾರು ಮಂದಿ ಹಿರಿಯರ ಪರಿಶ್ರಮದ ಫಲವಾಗಿ ತುಳು ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ಪ್ರಾರಂಭಗೊಂಡಿತು. ಆ ಸಂದರ್ಭದಲ್ಲಿ ಕನ್ನಡ ವಾಚನಾಲಯ ಮತ್ತು ಕನ್ನಡ ಶಾಲೆಯನ್ನು ಪ್ರಾರಂಭಿಸುವ ಮೂಲಕ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತ್ತು. 1965 ರಲ್ಲಿ ನೋಂದಣಿ, 1966 ರಲ್ಲಿ ತನ್ನ ಸ್ವಂಥ ಕಚೇರಿಯನ್ನು ಖರೀದಿಸಿದ್ದು ಅಂದಿನ ಸದಸ್ಯರ ದೊಡ್ಡ ಸಾಧನೆ.

ಇಲ್ಲಿಂದ ಸದಸ್ಯತನ ಹಾಗೂ ಇತರ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಯಿತು. 1985 ರಲ್ಲಿ ಹಿರಿಯಣ್ಣ ಶೆಟ್ಟಿಯವರ ಹಿರಿತನದಲ್ಲಿ ರಜತ ಮಹೋತ್ಸವದ ಕಾಣಿಕೆಯಾಗಿ ಸಂಘದ ಕಾರ್ಯಾಲಯವು ಪ್ರೇಮ ಬಿಂಧು, ಸ್ವಂಥ ಕಚೇರಿಗೆ ಸ್ಥಳಾಂತರಗೊಂಡಿತು. ರವಿ ರಾ. ಅಂಚನ್ ಅವರ ಮಾರ್ಗದರ್ಶನದಲ್ಲಿ 1989ರಲ್ಲಿ ಮಹಿಳಾ ವಿಭಾಗ, 1998ರಲ್ಲಿ ಇನ್ನು ಮೂರು ವಿಭಾಗಗಳು – ರಂಗಸ್ಥಳ , ಗ್ರಂಥಾಲಯ ಮತ್ತು ಯುವ ವಿಭಾಗ ಮತ್ತು ಮುಂಬೆಳಕು ಭಿತ್ತಿ ಫಲಕ ಗಳನ್ನು ಪ್ರಾರಂಭಿಸಿ ತನ್ನ ಚಟುವಟಿಕೆಗಳನ್ನು ಹೆಚ್ಚಿಸಲು ಸಾಧ್ಯವಾಯಿತು. ಇದೀಗ ಮುಂಬಯಿಯಲ್ಲಿನ ಕ್ರಿಯಾಶೀಲ ಕರ್ನಾಟಕ ಸಂಘಗಳಲ್ಲಿ ಗೊರೆಗಾಂವ್ ಕರ್ನಾಟಕ ಸಂಘವು ಒಂದಾಗಿದೆ ಎನ್ನಲು ಅತಿಶಯೋಕ್ತಿಯಾಗಲಾರದು.

ಪ್ರಸ್ತುತ ವರ್ಷದಲ್ಲಿ ತಾ. 19.11.2023ರಂದು ಕಾಸರಗೋಡಿನ ಕರ್ನಾಟಕ ಸಂಘಗಳ ಒಕ್ಕೂಟ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಕೊಡ ಮಾಡುವ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 ನ್ನು ಪಡೆದಿರುತ್ತದೆ. ಸಂಘದ ಅರವತ್ತೈದು ವರ್ಷಗಳ ಕ್ರಿಯಾಶೀಲ ಚಟುವಟಿಕೆಗಳನ್ನು ದಾಖಲಿಸಿದ ಗ್ರಂಥ ಮುಂಬೈಯಲ್ಲಿ ಕನ್ನಡದ ಕಂಪು ಸೂಸುವ ಗೊರೆಗಾಂವ್ ಕರ್ನಾಟಕ ಸಂಘ, ಡಾ. ಜಿ ಎನ್ ಉಪಾಧ್ಯಾಯ, ಮುಖ್ಯಸ್ಥರು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ಸುರೇಖಾ ಹರಿಪ್ರಸಾದ್ ಶೆಟ್ಟಿ ಅವರ ಕೃತಿ ಲೋಕಾರ್ಪಣೆಗೊಂಡಿರುವುದು ನಮಗೆಲ್ಲರಿಗೂ ಅಭಿಮಾನದ ಸಂಗತಿ.

ಗೊರೆಗಾಂವ್ ಕರ್ನಾಟಕ ಸಂಘದಲ್ಲಿ ಕೆಲವು ದಶಕಗಳಿಂದ ಸಮಿತಿಯ ಸದಸ್ಯರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ, ಮುಂಬಯಿಯ ಜಾತೀಯ ಸಂಘಟನೆಯಲ್ಲಿ ಉನ್ನತ ಪದವಿಯನ್ನು ಅಲಂಕರಿಸುವ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿರುವ ಸಂಘಟಕ ನಿತ್ಯಾನಂದ ಡಿ. ಕೋಟ್ಯಾನ್ ಸಂಘದ ಅಧ್ಯಕ್ಷರಾಗಿದ್ದು ಸಂಘದಲ್ಲಿರುವ ಹಾಗೂ ಸಂಘದಿಂದ ದೂರವಿರುವ ಹಿರಿ ಕಿರಿಯ ಸದಸ್ಯರನ್ನು ಒಂದು ಗೂಡಿಸಿ ಪುನರ್ ನಿರ್ಮಾಣ ವಾಗುತ್ತಿರುವ ಸಂಘದ ಪ್ರೇಮ ಬಿಂದು ಕಟ್ಟಡದಲ್ಲಿ ಸಂಘವು ಸುಮಾರು 1500 ಚ.ಅಡಿ. ವಿಸ್ತೀರ್ಣದ ಕಚೇರಿಯಲ್ಲಿ ಸುಸಜ್ಜಿತ ಸಭಾ ಗ್ರಹಗಳೊಂದಿಗೆ ಆದಷ್ಟು ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ. ಸದ್ಯ ಸಂಘದ ಕಚೇರಿಯನ್ನು ಜಿ-02, ಲಕ್ಷ್ಮೀ ನಿವಾಸ, ಜವಾಹರ್ ನಗರ, ಎಸ್ ವಿ ರೋಡ್, ಸದ್ಗುರು ಹೋಟೇಲು ಬಳಿ, ಗೋರಗಾಂವ್ ಪಶ್ಚಿಮ, ಮುಂಬಯಿ – 400104 ಇಲ್ಲಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಸಂಜೆ 5.30 ರಿಂದ 7ರವರೆಗೆ ಪದಾಧಿಕಾರಿಗಳು, ಸದಸ್ಯರುಗಳು ಇಲ್ಲಿ ಇರುತ್ತಾರೆ.

ತಮ್ಮ ವಿಳಾಸ ಬದಲಾವಣೆ ಯಾಗಿದ್ದಲ್ಲಿ ಹೊಸ ವಿಳಾಸ ಹಾಗೂ ಸದಸ್ಯತನದ ನಂಬರ್ ಒಟ್ಟಿಗೆ ಮೊಬೈಲ್ ನಂಬರ್ ನಮಗೆ ತಿಳಿಸಬೇಕಾಗಿ ವಿನಂತಿಸುತ್ತೇವೆ. ಈಗಾಗಲೇ ಸುಮಾರು 200 ಮಂದಿ ವಾಟ್ಸಾಪ್ ಗ್ರೂಪ್ ನಲ್ಲಿ ಇದ್ದೇವೆ. ನಿಮ್ಮ ಮೊಬೈಲ್ ನಂಬರ್ ಸಿಕ್ಕಿದರೆ ಸಂಪರ್ಕಕ್ಕೆ ಅನುಕೂಲವಾಗುತ್ತದೆ.

66ನೇ ವಾರ್ಷಿಕ ಮಹಾಸಭೆ

ದಿ. 07.07.2024 ರಂದು ಆದಿತ್ಯವಾರ ಸಂಜೆ 5.30ಕ್ಕೆ ಸಂಘದ 66ನೆಯ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಕೇಶವ ಗೋರೆ ಸ್ಮಾರಕ ಹಾಲ್ ಅಂಬಾಬಾಯಿ ಮಂದಿರ ಗೋರೆಗಾಂವ್ ಪಶ್ಚಿಮ ಇಲ್ಲಿ ನಡೆಯಲಿದೆ. ಈಗಾಗಲೇ 2023-24ರ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧಕರು ಪರಿಶೀಲಿಸಿದ ಲೆಕ್ಕಪತ್ರಗಳನ್ನು ಸರ್ವ ಸದಸ್ಯರಿಗೆ ಕಳುಹಿಸಲಾಗಿದೆ. ತಾವೆಲ್ಲರೂ ಮಹಾಸಭೆಯಲ್ಲಿ ಉಪಸ್ಥಿತರಿದ್ದು ಮುಂದಿನ ಯೋಜನೆಗಳ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂಬುದಾಗಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಉಪಸಮಿತಿಗಳ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.

Related posts

ಜುಲೈ 21: ಕುರ್ಲಾ ಬಂಟರ ಭವನದಲ್ಲಿ ಗುರು ಪೂರ್ಣಿಮೆ ಆಚರಣೆ, 

Mumbai News Desk

  ನ 14 ರಂದು ಡೊಂಬಿವಲಿ  ಶ್ರೀ ಜಗದಂಬ  ಮಂದಿರದಲ್ಲಿ ದೀಪೋತ್ಸವ

Mumbai News Desk

ಬೈಂದೂರು – ಕುಂದಾಪುರ ಬಿಲ್ಲವರು ಮುಂಬಯಿ. ಜನವರಿ 19 ರಂದು ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ

Mumbai News Desk

ಪೆ  17 :ಶ್ರೀಮದ್ಭಾರತ  ಮಂಡಳಿಯ  146 ನೇ ವಾರ್ಷಿಕೋತ್ಸವ

Mumbai News Desk

ತಥಾಸ್ತು ಫೌಂಡೇಶನ್ ಮಲಾಡ್, ಮೇ 24ರಿಂದ 25ರ ತನಕ ಧಾರ್ಮಿಕ ಉತ್ಸವ, ಕೊರಗಜ್ಜ ನೆಮೋತ್ಸವ.

Mumbai News Desk

ಫೆ.1 ರಿಂದ 3 ರ ವರಗೆ ಶ್ರೀ ಶನೀಶ್ವರ ಮಂದಿರ (ರಿ), ಭಟ್ಟಿಪಾಡದ 40ನೇ ವಾರ್ಷಿಕ ಮಹಾಪೂಜೆ.

Mumbai News Desk