September 6, 2026
Mumbai News Kannada
ಪ್ರಕಟಣೆ

ಹಿಂದೂ ಸಂಗಮ ಆಯೋಜನಾ ಸಮಿತಿ ಮೂಲ್ಕಿ : ಜ. 25ರಂದು “ಭವ್ಯ ಹಿಂದೂ ಸಂಗಮ”





(ಬಪ್ಪನಾಡು, ಮಾನಂಪಾಡಿ, ಚಿತ್ರಾಪು ಮತ್ತು ಕಾರ್ನಾಡು ಭಾಗದ ಹಿಂದೂ ಬಾಂಧವರ ಗ್ರಾಮೋತ್ಸವ)

ಹಿಂದೂ ಸಂಗಮ ಆಯೋಜನಾ ಸಮಿತಿ ಮುಲ್ಕಿ ತಾಲೂಕು ಮತ್ತು ಮುಲ್ಕಿ ನಗರದ ವತಿಯಿಂದ ಬಪ್ಪನಾಡು, ಮಾನಂಪಾಡಿ, ಚಿತ್ರಾಪು ಮತ್ತು ಕಾರ್ನಾಡು ಭಾಗದ ಹಿಂದೂ ಬಾಂಧವರಿಗಾಗಿ “ಹಿಂದೂ ಸಂಗಮ” ಎಂಬ ಭವ್ಯ ಗ್ರಾಮೋತ್ಸವವನ್ನು ಆಯೋಜಿಸಲಾಗಿದೆ. ಭಾರತೀಯ ಸಂಸ್ಕೃತಿಯ “ವಸುಧೈವ ಕುಟುಂಬಕಂ” ಎಂಬ ಉದಾತ್ತ ತತ್ವದಡಿ, ಹಿಂದೂ ಸಮಾಜದ ವಿವಿಧ ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಪುನರುತ್ಥಾನ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಈ ಸಮಾವೇಶವು ದಿನಾಂಕ 25-01-2026ನೇ ಭಾನುವಾರದಂದು ಸಂಜೆ ಗಂಟೆ 4:00ಕ್ಕೆ ಬಪ್ಪನಾಡು ಕ್ಷೇತ್ರದ ಮೈದಾನದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಅಂದು ಮಧ್ಯಾಹ್ನ ಸರಿಯಾಗಿ 3:00 ಗಂಟೆಗೆ ಮುಲ್ಕಿ ಬಸ್ ಸ್ಟ್ಯಾಂಡ್ ಬಳಿಯ ಶಿವಾಜಿ ಮಂಟಪದಿಂದ ಬಪ್ಪನಾಡು ಮೈದಾನದವರೆಗೆ “ಭವ್ಯ ಶೋಭಾಯಾತ್ರೆ” ಜರುಗಲಿದೆ. ವೇದಮೂರ್ತಿ ಶ್ರೀ ಹರಿ ನಾರಾಯಣದಾಸ ಅಸ್ರಣ್ಣ ಕಟೀಲು ಅವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಮುಲ್ಕಿ ಭಾಗದ ಪ್ರಮುಖ ಗಣ್ಯರ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿದ್ದು, ಅನೇಕ ಪದಾಧಿಕಾರಿಗಳು ಮತ್ತು ಸದಸ್ಯರು ಇದರ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಇದು ಪ್ರತಿಯೊಬ್ಬ ಹಿಂದೂ ಬಾಂಧವರ ಮನೆಯ ಕಾರ್ಯಕ್ರಮವಾಗಿದ್ದು, ಸರ್ವರೂ ತಮ್ಮ ಕುಟುಂಬದ ಸದಸ್ಯರೊಡನೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು
ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ವೇ|ಮೂ| ಶ್ರೀ ಹರಿನಾರಾಯಣದಾಸ ಅಸ್ರಣ್ಣ, ಕಟೀಲು
ಉಪಾಧ್ಯಕ್ಷರುಗಳಾದ ಎಮ್. ಹೆಚ್. ಅರವಿಂದ ಪುಂಜಾ, ಮುಲ್ಕಿ, ಪಾಂಡುರಂಗ ಭಟ್, ಎಸ್.ವಿ.ಟಿ., ಮುಲ್ಕಿ, ಜಯಕೃಷ್ಣ ಕೋಟ್ಯಾನ್, ಹಳೆಯಂಗಡಿ,
ಧನಂಜಯ ಸಾಗರಿಕ ಪಕ್ಷಿಕೆರೆ, ಶಂಕರ್ ಮಾಸ್ಟರ್, ಗೋಳಿಜೋರ, ಪೃಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ,
ಸಂಯೋಜಕ ಸಂಪತ್ ಕಾನಾಡ್, ಮೂಲ್ಕಿ ಸಹ ಸಂಯೋಜಕ ಮಾಧವ ಕೆರೆಕಾಡು, ಕುಮಾರಿ ದಿವ್ಯಶ್ರೀ ಆರ್., ಹಳೆಯಂಗಡಿ, ಕೋಶಾಧಿಕಾರಿ ನೂತನ್ ಕುಮಾರ್ ಶಿಮಂತೂರು, ಜತೆ ಕೋಶಾಧಿಕಾರಿಗಳಾದ ಶ್ರೀವತ್ಸ ಕಟೀಲು,ಹರೀಶ್ ಹೊಸಕಾಡು ಮತ್ತು ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.



Related posts

ಮುಂಬಯಿ ಕನ್ನಡ ಸಂಘ : ಜ.18 ರಂದು ಶ್ರೀ ಪುರಂದರದಾಸರ ಆರಾಧನೆ

Mumbai News Desk

ಜ. 14 ರಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಜು 21 ರಂದು ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರುಪೂರ್ಣಿಮೆ

Mumbai News Desk

ದಹಿಸರ್ ಪೂರ್ವ, ರಾವಲ್ಪಾಡ: ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ ಆ. 22ರಂದು 27ನೇ ವರ್ಷದ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ. ಡಿ 7ರಂದು ಮುಂಬೈಯಲ್ಲಿ  ವಿಶ್ವಬಂಟರ ಸಮಾಗಮ  ಬಂಟರ  ಒಗ್ಗಟ್ಟಿಗೆ ಸಾಕ್ಷಿಯಾಗಲಿದೆ: ಐಕಳ ಹರೀಶ್ ಶೆಟ್ಟಿ

Mumbai News Desk

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ-ಭಾಯಂದರ್ : ಸೆ. 14ರಂದು ಶ್ರೀ ಶನಿಗ್ರಂಥ ಪಾರಾಯಣ ಮತ್ತು 171ನೇ ಗುರು ಜಯಂತಿ ಆಚರಣೆ

Mumbai News Desk