
ಚಿತ್ರ, ವರದಿ : ರಮೇಶ್ ಉದ್ಯಾವರ
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಬೊರಿವಿಲಿ- ದಹಿಸರ್ ಸ್ಥಳೀಯ ಕಚೇರಿ ಗುರುಸನ್ನಿಧಿ ಬೆಸ್ಟ್ ಕ್ವಾರ್ಟ್ರಸ್ ಬಿಎಂಸಿ ಗ್ಯಾರೇಜಿನ ಹತ್ತಿರ ಶಿಂಪೋಲಿ ರೋಡ್ ಗೊರಾಯಿ1, ಬೊರಿವಿಲಿ ಪಶ್ಚಿಮ ಇದರ ವತಿಯಿಂದ ಜೂ. 6ರಂದು ಕಚೇರಿಯಲ್ಲಿ ಗುರುಮೂರ್ತಿ ಪ್ರತಿಷ್ಠಾನೆಯ ಉಳ್ತೂರು ಶೇಖರ ಶಾಂತಿ ಪೌರೋತ್ಯದಲ್ಲಿ ಗುರು ಮೂರ್ತಿ ಪ್ರತಿಷ್ಠಾಪನೆಯ 16ನೇ ವಾರ್ಷಿಕ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿತು.

ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂರ್ತಿ ಶುದ್ಧಿ, ಹಾಲು, ಸಿಯಾಳ, ಪಂಚಾಮೃತ ಇನ್ನಿತರ ದ್ರವ್ಯಾಧಿಗಳ ಅಭಿಷೇಕದ ನೆರವೇರಿದ ನಂತರ ವಿಶೇಷವಾಗಿ ಅಲಂಕೃತ ಗುರುಮೂರ್ತಿಯ ಪ್ರತಿಬಿಂಬಕ್ಕೆ ಪೂಜಾ ವಿಧಿ ವಿಧಾನಗಳು ನೆರವೇರಿಸಿದರು, ತದನಂತರ ಮಂಗಳಾರತಿ ಜರುಗಿತು . ಧಾರ್ಮಿಕ ಕಾರ್ಯಕ್ರಮದ ಪೂಜಾ ವಿಧಿವಿಧಾನದಲ್ಲಿ ಸ್ಥಳೀಯ ಕಚೇರಿಯ ಹಿರಿಯ ಸದಸ್ಯರಾದ ಕೃಷ್ಣರಾಜ್ ಸುವರ್ಣ ದಂಪತಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಿಂದ ಭಜನ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದ ಕೊನೆಯಲ್ಲಿ ಮಂಗಳಾರತಿ ನೆರವೇರಿದ ನಂತರ ನೆರೆದ ಸದಸ್ಯ ಬಾಂಧವರಿಗೆ ಗುರುದೇವರಿಂದ ಪ್ರಸಾದ ವಿತರಣೆ ನೀಡಿದರು..
ಬಿಲ್ಲವರ ಎಸೋಶಿಯೇಶನ್ ಕೇಂದ್ರ ಕಚೇರಿಯ ಉಪಾಧ್ಯಕ್ಷರಾದ ಧರ್ಮಪಾಲ ಅಂಚನ್, ಜತೆ ಕಾರ್ಯದರ್ಶಿ ಕೇಶವ ಕೋಟ್ಯಾನ್ ವಿದ್ಯಾ ಉಪ ಸಮಿತಿಯ ಕಾರ್ಯದರ್ಶಿ ಹರೀಶ್ ಪೂಜಾರಿ ಕೊಕ್ಕರ್ಣೆ, ಉಪಕಾರ್ಯಾಧ್ಯಕ್ಷ ಆರ್ ಡಿ ಕೋಟ್ಯಾನ್ ಕಾರ್ಯದರ್ಶಿ ರಜಿತ್ ಎಲ್ ಸುವರ್ಣ ಜತೆ ಕೋಶಾಧಿಕಾರಿ ಉಮೇಶ್ ಜಿ ಕೋಟ್ಯಾನ್ ರಾಘು ಜಿ ಪೂಜಾರಿ ವಾರಿಜಾ ಸನಿಲ್ ಸುಂದರಿ ಪೂಜಾರಿ ಸುಜಾತಾ ಪೂಜಾರಿ ಕರುಣಾಕರ ಪೂಜಾರಿ ಚಂದ್ರಶೇಖರ್ ಬಿಎನ್ ಗಿರಿಜಾ ಚಂದ್ರಶೇಖರ್ ಅಶೋಕ್ ಸಾಲ್ಯಾನ್ ಕರುಣಾಕರ ಪೂಜಾರಿ ಜ್ಯೋತಿ ಪೂಜಾರಿ ಪ್ರೇಮ್ ನಾಥ್ ಪಿ ಕೋಟ್ಯಾನ್ ಪ್ರೀತಿ ಅಮೀನ್ ಡಾI ಶೃತಿ ಪೂಜಾರಿ, ಜಿ. ಎಮ್. ಕೋಟ್ಯಾನ್, ಶ್ರೀ ಧರ ಸುವರ್ಣ ಲೇಖಕ ಚಂದ್ರಹಾಸ ಸುವರ್ಣ ಕೃಷ್ಣ ಸಾಲ್ಯಾನ್ ಸುಗುಣ ಪೂಜಾರಿ ಶಿವ ಪೂಜಾರಿ ಕೃಷ್ಣ ಸಾಲ್ಯಾನ್ ಕೇಶರಂಜನ್ ಮುಲ್ಕಿ ಪಿ ಎ ಪೂಜಾರಿ ಯಶೋದಾ ಸಾಲ್ಯಾನ್ ಮೋಹಿನಿ ಕರ್ಕೇರ ಮತ್ತು ಸಮಿತಿಯ ಸದಸ್ಯರು ಮತ್ತು ಯುವ ವಿಭಾಗದ ಸದಸ್ಯರು ಇನ್ನಿತರ ಸದಸ್ಯರು ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಾಧ್ಯಕ್ಷ ಮೋಹನ್ ಬಿ ಅಮೀನ್ ಇಂದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಭೋಧನೆಯಂತೆ ಸಂಘಟನೆಯಿಂದ ಬಲಯುತರಾಗಿರಿ ಎಂಬ ಭೋಧನೆಯ ತತ್ವದಲ್ಲಿ ತಾವೆಲ್ಲರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಿ ಎಂದು ಹೇಳಿ, ಸದಸ್ಯರೆಲ್ಲರನ್ನು ಅಭಿನಂದಿಸಿದರು.
(BOX) ಜ್ಞಾನ ಸಂಘಟನೆ ಸೌಹಾರ್ದತೆಯ ಮೂಲಕ ಶ್ರೀ ನಾರಾಯಣ ಗುರುಗಳ ಸಂದೇಶದಿಂದ ಸಮಸ್ತ ಬಿಲ್ಲವ ಸಮಾಜದ ಒಗ್ಗಟ್ಟು ಹಾಗೂ ದಿನದಲಿತರ, ಶೋಷಿತರ ಉದ್ಧಾರಕ್ಕಾಗಿ ಶ್ರಮಿಸಿದ ನಾರಾಯಣ ಗುರುಗಳು ಇಂದು ಸಮಾಜದ ಸಮಸ್ತರಿಗೆ ಬುದ್ಧಿ ಜ್ಞಾನ ವಿದ್ಯೆಯ ಬೆಳಕನ್ನು ನೀಡಿದ ಮಹಾನುಭಾವ. ಮಹಾನಗರದ ಕರ್ಮ ಭೂಮಿಯ ಬೊರಿವಲಿ ಪರಿಸರದಲ್ಲಿ ಇಂದು ಜರಗಿದ 16ನೇ ವಾರ್ಷಿಕ ಪ್ರತಿಷ್ಠಾಪನೆಯಯಲ್ಲಿ ಭಾಗವಹಿಸಿದ ಸರ್ವ ಸಮಾಜ ಬಾಂಧವ ಸದ್ಭಕ್ತರಿಗೆ ನಾರಾಯಣ ಗುರುಗಳು ಆರೋಗ್ಯ ಶಾಂತಿ ನೆಮ್ಮದಿ ದೊರೆಯಲಿ ಎಂದು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ ಉಳ್ತೂರು ಶೇಖರ್ ಶಾಂತಿ ಅನುಗ್ರಹಿಸಿದರು.