
ಮೊಗವೀರ ಕೋಪರೇಟಿವ್ ಬ್ಯಾಂಕಿನ ಮಾಜಿ ನಿರ್ದೇಶಕ , ಹೆಸರಾಂತ ಸಮಾಜ ಸೇವಕ ದಿವಾಕರ್ ಕರ್ಕೇರಾ ಅವರ 75ನೇ ಜನ್ಮದಿನೋತ್ಸವ ಆಚರಣಾ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡಾದ ಅದ್ಯಕ್ಷ ಮಾಧವ ಶೆಟ್ಟಿ, ಬೊರಿವಿಲಿ ಮಹಿಷಾಮರ್ದಿನಿ ದೇವಸ್ಥಾನದ ಟ್ರಸ್ಟಿ ಪ್ರದೀಪ್ ಶೆಟ್ಟಿ ಹಾಗೂ ಸಮಾಜ ಸೇವಕ ಶಿವರಾಮ್ ಅಮೀನ್ ತಮ್ಮ ಸಂಸ್ಥೆಗಳ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು.
ಅಭಿನಂದನಾ ಕಾರ್ಯಕ್ರಮವನ್ನು ಬೊರಿವಿಲಿ ಹೋಟೇಲಿನ ಸಭಾಗ್ರಹದಲ್ಲಿ ಆಯೋಜಿಸಲಾಗಿತ್ತು. ಪ್ರದೀಪ್ ಶೆಟ್ಟಿ, ಮಾಧವ ಶೆಟ್ಟಿಯವರು ಕರ್ಕೇರರವರ ಸಮಾಜ ಸೇವೆ ಹಾಗೂ ಬದುಕಿನ ಬಗ್ಗೆ ಮಾತನಾಡಿ ಅವರ ಮುಂದಿನ ಬದುಕಿಗೆ ಶುಭಕೋರಿದರು. ದಿವಾಕರ ಕರ್ಕೇರರು ಉಪಸ್ಥಿತರಿದ್ದು ಹರಿಸಿ ಆಶೀರ್ವಾದಿಸಿದ ಎಲ್ಲಾ ಬಂಧು ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದರು.