
ಶ್ರೀ ಸಾಯಿನಾಥ ಮಿತ್ರ ಮಂಡಳಿಯ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಹದಿನೆಂಟನೆಯ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾ ಪೂಜೆಯು ಇದೇ ಬರುವ ತಾರೀಖು 15-08-2024ನೇ ಗುರುವಾರ ಬೆಳಿಗ್ಗೆ 9.30ಕ್ಕೆ ಸರಿಯಾಗಿ ಭಾರತ್ ಭೋಯಿರ್ ಸಭಾಗೃಹ, ರೇತಿ ಭವನ್, 3ನೆಯ ಮಹಡಿ, ರೈಲ್ವೆ ನಿಲ್ದಾಣದ ಬಳಿ, ಎಮ್. ಜಿ. ರೋಡ್, ಡೊಂಬಿವಲಿ (ಪಶ್ಚಿಮ)ದಲ್ಲಿ ಜರುಗಲಿರುವುದು.
ಶ್ರೀ ಸಾಯಿನಾಥ ಮಿತ್ರಮಂಡಳಿಯು ಕಳೆದ ಹಲವಾರು ವರ್ಷಗಳಿಂದ ತನ್ನ ಸಮಾಜಪರ ಕಾರ್ಯಗಳಿಂದ ಡೊಂಬಿವಲಿ ಪರಿಸರದಲ್ಲಿ ಜನಾನುರಾಗಿಯಾಗಿದೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವ ಮಹತ್ವದ ಕಾರ್ಯವನ್ನು ಈ ಮಂಡಳಿಯು ನಿರಂತರವಾಗಿ ಮಾಡುತ್ತಿದೆ. ಪ್ರಸ್ತುತ ಈ ಮಂಡಳಿಯ ಅಧ್ಯಕ್ಷರಾಗಿ ಮೊಹನ ಜಿ. ಸಾಲಿಯಾನ್, ಗೌರವಾಧ್ಯಕ್ಷರಾಗಿ ಗಣೇಶ ಮೊಗವೀರ, ಉಪಾಧ್ಯಕ್ಷರಾಗಿ ಮೋಹನ್ ಪೂಜಾರಿ ಮತ್ತು ಆನಂದ ಶೆಟ್ಟಿ, ಗೌ.ಪ್ರ.ಕಾರ್ಯದರ್ಶಿಯಾಗಿ ಸುರೇಶ ಮೊಗವೀರ, ಕೋಶಾಧಿಕಾರಿಯಾಗಿ ವಾಸು ಮೊಗವೀರ, ಜೊತೆ ಕಾರ್ಯದರ್ಶಿಯಾಗಿ ದಿನಕರ್ ಸಾಲ್ಯಾನ್ ಕಾರ್ಯನಿರ್ವಹಿಸುತ್ತಿದ್ದಾರೆ. ರಘುರಾಮ್ ಶೆಟ್ಟಿ, ವಸಂತ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಅರುಣ್ ಶೆಟ್ಟಿ, ಸೋಮನಾಥ ಪೂಜಾರಿ, ಸುರೇಶ್ ಎನ್.ಬಿ, ಯೋಗೇಶ್ ಶೆಟ್ಟಿಗಾರ್, ಪುರುಷೋತ್ತಮ್ ಪೂಜಾರಿ, ರಮೇಶ್ ಶೆಟ್ಟಿ, ಯಾದವ್ ಕರ್ಕೇರ, ಚಿನ್ಮಯ್ ಸಾಲಿಯಾನ್, ಅಬಿಷೇಕ್ ಮೊಗವೀರ, ಸ್ವರಾಜ್ ಮೊಗವೀರ, ರೋಹಿತ್ ಮೊಗವೀರ, ಚಂದ್ರಹಾಸ್ ಕೋಟ್ಯಾನ್, ರಾಜೇಶ್ ಕೋಟ್ಯಾನ್ ಮತ್ತು ರಾಜು ಮೊಗವೀರ ಮುಂತಾದವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದುಕೊಂಡು ಮಂಡಳಿಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಆಗಸ್ಟ್ ಹದಿನೈದರಂದು ಹದಿನೆಂಟನೆಯ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾ ಪೂಜೆಯ ಅಂಗವಾಗಿ ಮಂಡಳಿಯು ಆಯೋಜಿಸಿರುವ ಕಾರ್ಯಕ್ರಮವನ್ನು ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಿದ್ದಾರೆ. 10.00 ಗಂಟೆಗೆ ಸರಿಯಾಗಿ ಸಾಮೂಹಿಕ ಸತ್ಯನಾರಾಯಣ ಮಹಾ ಪೂಜೆ ಪ್ರಾರಂಭವಾಗಲಿದೆ. 11.30ಕ್ಕೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಭಜನಾ ಮಂಡಳಿಯಿಂದ ಭಜನೆ ನೆರವೇರಲಿದೆ. ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ಮಂಡಳಿಯು ಧಾರ್ಮಿಕ ಸಭೆಯನ್ನು ಕೂಡ ಆಯೋಜಿಸಿದೆ. 12.30 ನಂತರ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವರ ಗಂಧ ಪ್ರಸಾದ ಹಾಗೂ ಮಹಾಪ್ರಸಾದವನ್ನು ಅದರ ಪೂರ್ವಕವಾಗಿ ಸೀಕರಿಸಿ ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಸಾಯಿನಾಥ ಮಿತ್ರ ಮಂಡಳಿ ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಭಕ್ತಾಭಿಮಾನಿಗಳು ರೂ.301/- ಕೊಟ್ಟು ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡಿಸಬಹುದು. ಹಾಗೂ ಇನ್ನಿತರ ಯಾವುದೇ ಸೇವೆಯನ್ನು ಆದರಪೂರ್ವಕವಾಗಿ ಸ್ವೀಕರಿಸಲಾಗುವುದು.