
ದೇಶದ ಪ್ರತಿಷ್ಠಿತ ಮಲ್ಟಿ ಕೋ.ಅಪರೇಟಿವ್ ಬ್ಯಾಂಕ್ ಗಳಲ್ಲಿ ಒಂದಾದ ಭಾರತ್ ಕೊ.ಅಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ತನ್ನ 46 ನೇ ಸಂಸ್ಥಾಪನಾ ದಿನವನ್ನು ಆ.21 ರಂದು ಬೊರಿವಲಿ ಪಶ್ವಿಮದ ಪ್ರೇಮ್ ನಗರ ಶಾಖೆಯಲ್ಲಿ ಆಚರಿಸಿತು. ಭಾರತ್
ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ ,ಉಪಕಾರ್ಯಧ್ಯಕ್ಷ ಸೋಮನಾಥ್ ಅಮೀನ್, ನಿರ್ದೇಶಕರಾದ ಗಂಗಾಧರ್ ಪೂಜಾರಿ, ಮೋಹನ್ ದಾಸ್ ಪೂಜಾರಿ,ಗ್ರಾಹಕರಾದ ದಯಾನಂದ್ ಪೂಜಾರಿ, ಶೈಲೇಶ್ ಹೆಜ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಉದ್ಯಮಿಗಳೂ, ಗಣ್ಯರು ಆದ ಡಾ. ಹರೀಶ್ ಶೆಟ್ಟಿ, ಡಾ.ಸತೀಶ್ ಶೆಟ್ಟಿ-ಡಿಪೋಡಿಲ್ ಹೋಟೆಲ್ ಬೋರಿವಲಿ, ಗಂಗಾಧರ್ ಎಂ ಕೋಟ್ಯಾನ್, ಕಿಶೋರ್ ಕೋಟ್ಯಾನ್, ಯೋಗೇಶ್ ಪೂಜಾರಿ, ಕರುಣಾಕರ್ ಪೂಜಾರಿ, ರಾಜೇಂದ್ರ ಶೇತಿಯಾ, ಈಶ್ವರ್ಲಾಲ್ ಪಾಂಡ್ಯ, ಡಾ. ರಜತ್ ಮೋದಿ, ಉದ್ಯಮಿ ರಮೇಶ್ ಕೋಟ್ಯಾನ್,ಬಿಲ್ಲವರ ಅಸೋಸಿಯೇಷನ್ ಮುಂಬಯಿ ಬೋರಿವಲಿ ಸ್ಥಳೀಯ ಕಛೇರಿಯ ಕಾರ್ಯಧ್ಯಕ್ಷರಾದ ಮೋಹನ್ ಬಿ ಅಮೀನ್, ಕಾರ್ಯದರ್ಶಿ ರಜಿತ್ ಸುವರ್ಣ,ಹಾಗೂ ಪದಾಧಿಕಾರಿಗಳು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಶಾಖೆಯ ಪ್ರಬಂಧಕಿ ಜಯ ಅವನಿಶ್ ಬಂಗೇರ,ಉಪ ಪ್ರಭಂದಕ ಸುಧೀರ್ ಟಿ ಕುಮಾರ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.