
*ನೂತನ ಅಧ್ಯಕ್ಷ ಕುಶಾ ಆರ್ ಮೂಲ್ಯ ಇನ್ನಾ ಅವರಿಗೆ ಮುಂಬೈಯಲ್ಲಿ ಗೌರವ,
ಕಾರ್ಕಳ : ಕಾರ್ಕಳ ಪರಿಸರದ ಕುಲಾಲ ಸಮಾಜ ಬಂಧುಗಳು ಆರ್ಥಿಕವಾಗಿ ಸುದೃಡ ಆಗಬೇಕೆನ್ನುವ ಉದ್ದೇಶದಿಂದ ಸಮಾಜ ಬಾಂಧವರು ಒಗ್ಗಟ್ಟಾಗಿ ಬೆಳ್ಮಣ್ ನಲ್ಲಿ ಕುಂಭ ನಿಧಿ ಕ್ರೆಡಿಟ್ ಕೋ ಅಪರೆಟಿವ್ ಸೂಸೈಟಿ ಸ್ಥಾಪನೆಗೆ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಬಗ್ಗೆ ಮುಂಬೈಗೆ ಆಗಮಿಸಿದ್ದ ಸೊಸೈಟಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕುಶಾ ಆರ್ ಮೂಲ್ಯ ಇನ್ನಾ ಅವರನ್ನು ಕುಲಾಲ ಪ್ರತಿಷ್ಠಾನ ದ ವತಿಯಿಂದ ಪತ್ರಕರ್ತ ಸಂಘಟಕ ದಿನೇಶ್ ಕುಲಾಲ್ ಗೌರವಿಸಿದರು.
ಮುಂಬೈ ನಗರದ ಕುಲಾಲ ಸಮಾಜದಮುಖಂಡರನ್ನು . ಮುಂಬೈಯಲ್ಲಿ ನೆಲೆಸಿರುವ ಕಾರ್ಕಳ ತಾಲೂಕಿನ ಕುಲಾಲ ಬಂಧುಗಳನ್ನು ಹಾಗೂ ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ ಮುಂಡ್ಕೂರು ಇದರ ಪದಾಧಿಕಾರಿಗಳನ್ನು ಕುಶಾ ಮೂಲ್ಯ ಅವರು ಸಂಪರ್ಕಿಸಿ ಸಹಕಾರವನ್ನು ಕೇಳಿಕೊಂಡಿದ್ದಾರೆ.