24.7 C
Karnataka
April 3, 2025
ಪ್ರಕಟಣೆ

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೊರಿವಿಲಿ 35ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ.



ಬೊರಿವಿಲಿ, ಅ. 2: ಶ್ರೀ ಮಹಿಷಮರ್ಧಿನಿ ದೇವಸ್ಥಾನ ಟ್ರಸ್ಟ್ ( ರಿ), ಶ್ರೀ ಕ್ಷೇತ್ರ  ಜಯರಾಜ್, ವಜೀರ ನಾಕ ಬೊರಿವಲಿ (ಪ),  ಮುಂಬೈ ಇದರ  35ನೇ ವಾರ್ಷಿಕ ದಸರಾ ಮಹೋತ್ಸವವು ದಿನಾಂಕ 03.10.24 ಗುರು ವಾರದಿಂದ ಮೊದಲ್ಗೊಂಡು ದಿನಾಂಕ 12.10.2024 ಶನಿವಾರ  ವಿಜಯದಶಮಿಯವರೆಗೆ   ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 03.10.24 ಗುರುವಾರ ಬೆಳಿಗ್ಗೆ 7:30 ರಿಂದ ನಾಗದೇವರ ಸನ್ನಿಧಿಯಲ್ಲಿ ತನು ತಂಬಿಲ ಪಂಚಾಮೃತ ಅಭಿಷೇಕ ದೇವತಾ ಪ್ರಾರ್ಥನೆ ಗಣ ಹೋಮ  ನವಕ ಕಲಶಾಭಿಷೇಕ ಪ್ರಧಾನ ಹೋಮ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಜರಗಿದ ಬಳಿಕ ಸಂಜೆ ಗಂಟೆ 5 ರಿಂದ  ಶ್ರೀ ವಿಠಲ ಭಜನಾ ಮಂಡಳಿ ಮೀರಾ ರೋಡ್ ಇವರಿಂದ ಭಜನೆ‌ 

    ಅ. 3. ಗುರವಾರದಿಂದ ಅ. 11 ರ ವರೆಗೆ ಶುಕ್ರವಾರ ತನಕ ರಾತ್ರಿ 7:30 ರಿಂದ 8.30ರ ತನಕ ಮಹಿಷಮರ್ಧಿನಿ ಭಜನಾ ಮಂಡಳಿಯವರಿಂದ ನಿತ್ಯ ಭಜನೆ ದೇವಸ್ಥಾನದ ವತಿಯಿಂದ ದಿನ ನಿತ್ಯ ನವರಾತ್ರಿಯ ಅಂಗವಾಗಿ   ಮಹಾಪೂಜೆ ನವರಾತ್ರಿ ಪೂಜೆ ಮಂಟಪ ರಂಗ ಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

    ಅ. 4 ಶುಕ್ರವಾರ ಸಂಜೆ 4ರಿಂದ ಸ್ನೇಹವರ್ಧಕ ಮಹಿಳಾ ಭಜನಾ ಮಂಡಳಿ ಬೊರಿವಿಲಿ, ಸರಸ್ವತಿ ಭಜನಾ ಮಂಡಳಿ ದಹಿಸರ್ ಇವರಿಂದ ಭಜನೆ. ಅ. 5 ಶನಿವಾರ ಸಂಜೆ ಗಂಟೆ  4ರಿಂದ  ಅಮ್ರಿಣಿ ಭಜನ ಮಂಡಳಿ ಭಜನೆ, ಸಂಜೆ 5ರಿಂದ ಕಾಂದಿವಲಿ ಕನ್ನಡ ಸಂಘ ಭಜನೆ.  ಅ. 6 ಸಂಜೆ 4:30ರಿಂದ ಬಂಟರ ಸಂಘ ಮುಂಬೈ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ಸದಸ್ಯರಿಂದ ಭಜನೆ. 

     ಅ. 7ರಂದು. ಸೋಮವಾರ ಸಂಜೆ ಗಂಟೆ 5.30ರಿಂದ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ, ತೀರ್ಥಪ್ರಸಾದ ವಿತರಣೆ . ಅ. 8. ಸಂಜೆ ಗಂಟೆ 4ರಿಂದ ಚಾರ್ಕೋಪ್ ಕನ್ನಡಿಗರ ಬಳಗ ಮಹಿಳಾ ಸದಸ್ಯರಿಂದ ಭಜನೆ ಸಂಜೆ ಗಂಟೆ 5ರಿಂದ ಶ್ರೀಮತಿ ಸುಂದರಿ ಗೋಪಾಲಕೃಷ್ಣನ್ ಮತ್ತು ಬಳಗದವರಿಂದ ಭಜನೆ. ಅ. 9.ರಂದು ಸಂಜೆ 4ರಿಂದ ಶ್ರೀ ವೆಂಕಟೇಶ್ ಹೆಗಡೆ ಮತ್ತು ಬಳಗದವರಿಂದ ಭಜನೆ. ‌ಸಂಜೆ ಗಂಟೆ 5ರಿಂದ ಶ್ರೀ ಲಲಿತಾ ಸರಸ್ವತಿ ಬಳಗ ಕಾಂದಿವಿ ಲಿಯವರಿಂದ ಭಕ್ತಿಗೀತೆಗಳು ಅ. 10ರಂದು ಸಂಜೆ 4ರಿಂದ ಶ್ರೀ ಮದ್ವೇಶ ಭಜನಾ ಮಂಡಳಿ ಸಾಂತಾಕ್ರೂಜ್ (ಪೂ)  ಇವರಿಂದ ಭಜನೆ. ಸಂಜೆ ಗಂಟೆ 5ರಿಂದ ಶ್ರೀ ವಾಗ್ದೇವಿ ಭಜನಾ ಮಂಡಲಿಯವರಿಂದ ಭಜನೆ 

     ಅ.11ರಂದು ಶುಕ್ರವಾರ ಬೆಳಿಗ್ಗೆ 9.30ರಿಂದ ಸಾರ್ವಜನಿಕ ಚಂಡಿಕಾ ಹೋಮ ತೀರ್ಥ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನ ಸಂತರ್ಪಣೆ,  ರಾತ್ರಿ ಗಂಟೆ 9 ರಿಂದ ಸಾರ್ವಜನಿಕ ಮಹಾರಂಗ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ  ಅ.12 ರಂದು ಶನಿವಾರ ಬೆಳಿಗ್ಗೆ 9.30ರಿಂದ ಶ್ರೀ ಮಹಿಷಮರ್ಧಿನಿ ಭಜನಾ ಮಂಡಳಿಯವರಿಂದ ಭಜನೆ,  ತುಲಾಭಾರ ಸೇವೆ,  ದಸರಾ ಪೂಜೆ ತೀರ್ಥಪ್ರಸಾದ ವಿತರಣೆ.  

     ನವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಜರಗಲಿರುವ ಸರ್ವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವ ದೈವೀ ಭಕ್ತರು ಕುಟುಂಬ ಸಮೇತರಾಗಿ 9 ದಿನಗಳ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಪರಿವಾರ ಸಹಿತ ಶ್ರೀ ಮಹಿಷಮರ್ಧಿನಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ (ದೇವಸ್ಥಾನದ ಪರವಾಗಿ)  ಶ್ರೀಮತಿ ಮತ್ತು ಶ್ರೀ ಜಯರಾಜ ಶ್ರೀಧರ ಶೆಟ್ಟಿ (ಮೊಕ್ತೇಸರರು, ಆಡಳಿತ ಮೊಕ್ತೇಸರರ ವಂಶಸ್ಥರು)  ಆಡಳಿತ ಮೊಕ್ತೇಸರರಾದ ಶ್ರೀಮತಿ ಮತ್ತು ಶ್ರೀ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ ಶೆಟ್ಟಿ(ಆಡಳಿತ ಮೊಕ್ತೇಸರರು)  ಶ್ರೀಮತಿ ಜಯಪಾಲಿ ಎ ಶೆಟ್ಟಿ (ಮೊಕ್ತೇಸರರು) ಮತ್ತು ಅರ್ಚಕವರಿಂದ ಮಹಿಷಮರ್ಧಿನಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಶ್ರೀ ಮಹಿಷಮರ್ಧಿನಿ ಭಜನಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿಸೆ. 18ರಂದು ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಗುರುವಂದನೆ.

Mumbai News Desk

ಜ.12. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಡೊಂಬಿವಿಲಿ ಸಮಿತಿಯ ವಾರ್ಷಿಕೋತ್ಸವ,

Mumbai News Desk

ಜ. 30, ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಕರ್ನಿರೆ ಎ 1 ರಿಂದ 3 ವರೆಗೆ    ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ,

Mumbai News Desk

SHREE JAI BHAVANI SHANEESHWARA MANDIR – Appeal

Mumbai News Desk

ಶ್ರೀ ಮಣಿಕಂಠ ಸೇವಾ ಸಮಿತಿ ,ವಸಾಯಿ ಡಿ.13ರಂದು 22ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk