ಮಹಾರಾಷ್ಟ್ರದ ವಿಧನಾ ಸಭಾ ಕ್ಷೇತ್ರಗಳಿಗೆ ನ.20 ರಂದು ನಡೆಯಲಿರುವ ಚುಣಾವಣೆಯಲ್ಲಿ ಮುಲುಂಡ್ ಕ್ಷೇತ್ರದ 155ರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೇಸ್ ಮಹಾವಿಕಾಶ್ ಅಗಾಡಿ ಪಕ್ಷದ ” ಕೈ” ಚಿಹ್ನೆಯಡಿಯಲ್ಲಿ ಪರಿಸರದ ಜನಪ್ರಿಯಾ ತುಳು ಕನ್ನಡಿಗ ರಾಕೇಶ್ ಶೆಟ್ಟಿಯವರಿಗೆ ಟಿಕೇಟ್ ನೀಡಿ ಕಣಕ್ಕಿಳಿಸಲಾಗಿದೆ .
ಬಾಂಡುಪ್ ನ ಜಿ.ಎಸ್. ಇಂಟರ್ ನ್ಯಾಷನ್ ಸ್ಕೂಲ್ ನ ಆಡಳಿತ ನಿರ್ದೇಶಕ ಹಾಗೂ ಜನಪ್ರಿಯಾ ಸಮಾಜಸೇವಕರಾದ ಶಂಕರ್ ಶೆಟ್ಟಿಯವರ ಸುಪುತ್ರರಾಗಿರುವ ರಾಕೇಶ್ ಶೆಟ್ಟಿಯವರು ಈಗಾಗಲೇ ಮುಲುಂಡ್ ಪರಿದರದಲ್ಲಿ ಅನೇಕ ಸಮಾಜಪರ ಸೇವಾ ಕಾರ್ಯಗಳೊಂದಿಗೆ ತಮ್ಮನ್ನು ತಾವು ಗುರುತಿಸಿ ಕೊಂಡವರಿದ್ದಾರೆ. ಅವರ ಜನಪರ ಸೇವೆಗೆ ಪೂರಕವಾಗಿ ಇದೀಗ ರಾಹುಲ್ ಗಾಂಧಿಯವರ ನೇತ್ರತ್ವದ ಕಾಂಗೇಸ್ ಪಕ್ಷ ಅವರಿಗೆ ಉಮೇದ್ವಾರಿಕೆಯನ್ನು ನೀಡಿದೆ . ಹಾಗೇ ಸ್ವಯಂ ರಾಕೇಶ್ ಶೆಟ್ಟಿಯವರು ಪಕ್ಷ ನೀಡಿರುವ ವಿಶ್ವಾಸಕ್ಕೆ ಬದ್ದರಾಗಿ ಮುಲುಂಡ್ ನ 155 ರ ತನ್ನ ಕ್ಷೇತ್ರದಿಂದ ವಿಜೇತರಾಗುವ ಭರವಸೆಯನ್ನು ಮೂಡಿಸಿದ್ದಾರೆ .ಈಗಾಗಲೇ ಆವರು ತಮ್ಮ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ.
