
ಚಿತ್ರ ವರದಿ : ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ನ. 19: ಕರ್ನಾಟಕ ಸಂಘ ಡೊಂಬಿವಲಿ ಶೈಕ್ಷಣಿಕ, ಸಾಹಿತ್ಯ, ಧಾರ್ಮಿಕ, ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದು ಈ ಸಂಸ್ಥೆಯು ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮಂಜುನಾಥ ವಿದ್ಯಾಲಯ ಹಾಗೂ ಮಂಜುನಾಥ ಮಹಾವಿದ್ಯಾಲಯದ ಮೂಲಕ ಸುಮಾರು ಐದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಹಾಗೂ ಸುಮಾರು 100 ಕೋಟಿಗೂ ಮಿಕ್ಕಿ ಅಸ್ತಿಯನ್ನು ಹೊಂದಿರುವ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದೆ.
ಕರ್ನಾಟಕ ಸಂಘ ಡೊಂಬಿವಲಿ ಪ್ರತಿ ವರ್ಷ ಡೊಂಬಿವಲಿ, ಠಾಕುರ್ಲಿ, ಕೋಪರ್ ಪರಿಸರದ ತುಳು- ಕನ್ನಡಿಗರ ಮಕ್ಕಳು ಹಾಗೂ ಹಿರಿಯರು ಕ್ರೀಡೆಯಲ್ಲಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸ ಬೇಕೆಂಬ ಉದ್ದೇಶದಿಂದ ದಂಗಲ್ ಕ್ರೀಡಾ ಕೂಟವನ್ನು ಅದ್ಧೂರಿಯಾಗಿ ಅಯೋಜಿಸುತ್ತಿದೆ.
ಪ್ರತಿವರ್ಷ ಕ್ರೀಡೆಗಳ ಮೂಲಕ ಹಲವಾರು ಕನ್ನಡಿಗ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಬಹುಮಾನವನ್ನು ಗೆಲ್ಲುತ್ತಿದೆ
ದಂಗಲ್ 2024 ರಲ್ಲಿ 13 ತಂಡಗಳು ಪಥ ಸಂಚಲನದಲ್ಲಿ ವಿವಿಧ ವೇಷಭೂಷಣ ದೊಂದಿಗೆ ಪಥ ಸಂಚಲನ ನಡೆಸಿ ಕ್ರೀಡಾ ಕೂಟಕ್ಕೆ ವಿಶೇಷ ಮೆರಗನ್ನು ತಂದಿದ್ದಾರೆ ಫಥ ಸಂಚಲನದಲ್ಲಿ ಶ್ರೀ ಜಗದಂಬಾ ಮಂದಿರ ಪ್ರಥಮ ಬಹುಮಾನದ ಮೊತ್ತ 20000/ ಸಾವಿರ ರೂಪಾಯಿ ಗೆದ್ದರೆ ದ್ವಿತೀಯ ಬಹುಮಾನ 15000/ ಸಾವಿರ ಕುಲಾಲ ಸಂಘ ಮುಂಬಯಿ ಹಾಗೂ ತೃತೀಯ ಬಹುಮಾನ 10000/ ಸಾವಿರವನ್ನು ಸಿರಿನಾಡ ವೆಲ್ಫರ್ ಅಸೋಸಿಯೇಷನ್ ತನ್ನದಾಗಿಸಿ ಕೊಂಡಿದೆ . ಈ ವರ್ಷ ಪ್ರಥಮವಾಗಿ ಖೋ ಖೋ ಸ್ಪರ್ಧೆಯನ್ನು ಅಯೋಜಿಸಿ ಕ್ತೀಡೆಗೆ ಮತ್ತಷ್ಟು ಪ್ರೋತ್ಸಾಹವನ್ನು ಕರ್ನಾಟಕ ಸಂಘ ನೀಡುತ್ತಿದೆ. ಮಕ್ಕಳಿಗೆ ಓಟ, ಗೋಣಿ ಚಿಲ ಓಟ, ಲೆಮನ್ ಸ್ಪೂನ್, ಬಾಲ್ ಥ್ರೊ, ರೀಲೆ, ಹಿರಿಯರಿಗೆ ನಡಿಗೆ, ಶಾಟ್ ಪುಟ್, ಖೋ ಖೋ, ಹಗ್ಗ ಜಗ್ಗಾಟ ಮುಂತಾದ ಕ್ರೀಡೆಗಳನ್ನು ಅಯೋಜಿಸಿ ಉತ್ತಮ ಮಟ್ಟದ ಬಹುಮಾನ, ನಗದು ಬಹುಮಾನವನ್ನು ನೀಡಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದೆ.




ಖೋಖೋ ಮಹಿಳಾ ವಿಭಾಗದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ವಿಜೇತರಾಗಿ20000/ ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿ ಕೊಂಡರೆ ಶ್ರೀ ಜಗದಂಬಾ ಮಂದಿರ 15000/ ಸಾವಿರ ಬಹುಮಾನ ಪಡೆದು ದ್ವಿತೀಯ ಸ್ಥಾನವನ್ನು ಪಡೆದರು, ಪುರುಷರ ವಿಭಾಗದಲ್ಲಿ ಶ್ರೀ ಜಗದಂಬಾ ಮಂದಿರ 20000/ ಸಾವಿರ ಬಹುಮಾನವನ್ನು ಪಡೆದು ಪ್ರಥಮ ಸ್ಥಾನವನ್ನು ಅಲಂಕರಿಸಿದರೆ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ 15000/ ಸಾವಿರ ಬಹುಮಾನವನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದರು, ಎಲ್ಲಾ ಕ್ರೀಡೆಗಳಲ್ಲಿ ಪ್ರತಿಷ್ಠೆಯ ಕ್ರೀಡೆ ಎಂದೇ ಹೆಗ್ಗಳಿಕೆಯನ್ನು ಪಡೆದ ಹಗ್ಗ ಜಗ್ಗಾಟದ ಮಹಿಳಾ ವಿಭಾಗದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ 25000/ ಸಾವಿರ ಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದರೆ ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಸಮಿತಿ 20000/ ಸಾವಿರ ಬಹುಮಾನ ದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಶ್ರೀ ಜೈ ಭವಾನಿ ಶ್ರೀ ಶನೀಶ್ವರ ಮಂದಿರ 25000/ ಸಾವಿರ ಬಹುಮಾನ ದೊಂದಿಗೆ ಪ್ರಥಮ ಸ್ಥಾನ ಪಡೆದರೆ, ಶೆಟ್ಟಿ ಫ್ರೆಂಡ್ಸ್ 20000/ ಸಾವಿರ ಬಹುಮಾನದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆಯಿತು. ರೀಲೆ ಮಹಿಳಾ ವಿಭಾಗದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಪ್ರಥಮ, ಶ್ರೀ ಜಗದಂಬಾ ಮಂದಿರ ದ್ವಿತೀಯ, ಬಿಲ್ಲವರ ಅಸೋಸಿಯೇಷನ್ ತೃತೀಯ ಸ್ಥಾನವನ್ನಿ ಪಡೆದರೆ ಪುರುಷರ ವಿಭಾಗದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಪ್ರಥಮ, ಶ್ರೀ ಜಗದಂಬಾ ಮಂದಿರ ದ್ವಿತೀಯ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ (ಬಿ) ತಂಡ ತೃತೀಯ ಸ್ಥಾನವನ್ನು ಪಡೆಯಿತು. ಕ್ರೀಡಾ ಕೂಟವನ್ನು ಅಯೋಜಿಸಲು ಕರ್ನಾಟಕ ಸಂಘದ ಮಾಜಿ ಕಾರ್ಯದರ್ಶಿ ಜಗತ್ಪಾಲ್ ಶೆಟ್ಟಿಯವರ ಮುಂದಾಳುತ್ವದಲ್ಲಿ 30 ಜನರ ತೀರ್ಪುಗಾರರ ತಂಡವನ್ನು ಹೊರಗಿನಿಂದ ಬರಮಾಡಿಸಿ ಕೊಂಡು ತೀರ್ಪನ್ನು ನೀಡಿದರು ಕೆಲವು ಕ್ರೀಡಾ ಪಟುಗಳು ಕ್ರೀಡಾ ಮನೋಭಾವನೆಯನ್ನು ತೋರಿಸದೆ ತೀರ್ಪುಗಳ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಿರುವುದನ್ನು ಕಂಡರೆ ಕರ್ನಾಟಕ ಸಂಘ ಡೊಂಬಿವಲಿ ಎಲ್ಲಾ ಸಮಾಜ ಬಾಂಧವರಿಗೆ ಅಯೋಜಿಸುತ್ತಿರುವ ಕ್ರೀಡೋತ್ಸವ ಮುಂದಿನ ದಿನಗಳಲ್ಲಿ ಇಲ್ಲಿಗೆ ಸಮಾಪ್ತಿ ಗೊಳಿಸುವ ಸೂಚನೆಯು ಲಭಿಸುತ್ತಿದೆ.
ಬಹುಮಾನ ವಿತರಣಾ ವೇದಿಕೆಯ ಅದ್ಯಕ್ಷ ರಾದ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ತಮ್ಮ ಅದ್ಯಕ್ಷೀಯ ಭಾಷಣದಲ್ಲಿ ತೀರ್ಪುಗಾರರ ತೀರ್ಪನ್ನು ಕ್ರೀಡಾ ಪಟುಗಳು ಸ್ವೀಕರಿಸದಿದ್ದರೆ ಮುಂದಿನ ದಿನಗಳಲ್ಲಿ ಕ್ರೀಡೋತ್ಸವವನ್ನು ಅಯೋಜಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಕುಮಾರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಡೊಂಬಿವಲಿ ಪರಿಸರದ ಕ್ರೀಡಾ ಪಟುಗಳಿಗೆ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಈ ಕ್ರೀಡಾ ಕೂಟವನ್ನು ಅಯೋಜಿಸುತ್ತಿದ್ದೇವೆ ಅದರೆ ಕ್ರೀಡಾ ಪಟುಗಳು ಕ್ರೀಡಾ ಮನೋಭಾವನೆಯಿಂದ ತಮ್ಮ ಅಟಗಳನ್ನು ಪ್ರದರ್ಶಿಸದಿದ್ದರೆ ನಾವು ಮಹಾನಗರದ ಎಲ್ಲಾ ತಂಡಗಳನ್ನು ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅಹ್ವಾನಿಸುವ ಯೋಚನೆಯನ್ನು ಕಾರ್ಯಕಾರಿ ಸಮಿತಿ ಮಾಡ ಬೇಕಾಗುತ್ತದೆ ಎಂದರು.
ಡೊಂಬಿವಲಿ ಪರಿಸರದ ಸರ್ವ ಜಾತೀಯ ಸಂಘ- ಸಂಸ್ಥೆ ಹಾಗೂ ತುಳು- ಕನ್ನಡಿಗರಿಗಾಗಿ ಕರ್ನಾಟ ಸಂಘ ಡೊಂಬಿವಲಿ ವತಿಯಿಂದ ನಡೆದ ಕ್ರೀಡಾ ಕೂಟ ದಂಗಲ್ 2024 ಯಶಸ್ವಿಯಾಗಿದೆ .
ಹಗ್ಗ ಜಗ್ಗಾಟ ಮಹಿಳಾ ವಿಭಾಗದಲ್ಲಿ ದ್ವಿತೀಯ ಬಹುಮಾನ 20000/ ಸಾವಿ ರೂಪಾಯಿ ಬಹುಮಾನ ಪಡೆದ ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಸಮಿತಿ
ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ದ್ವಿತೀಯ 20000/ ಸಾವಿರ ರೂಪಾಯಿ ಬಹುಮಾನ ಪಡೆದ ಶೆಟ್ಟಿ ಫ್ರೆಂಡ್ಸ್ ಡೊಂಬಿವಲಿ
ಖೋಖೋ ಮಹಿಳಾ ವಿಭಾಗದಲ್ಲಿ ದ್ವಿತೀಯ 15000/ ಸಾವಿರ ರೂಪಾಯಿ ಬಹುಮಾನ ಪಡೆದ ಶ್ರೀ ಜಗದಂಬಾ ಮಂದಿರ
ಖೋ ಖೋ ಪುರುಷರ ವಿಭಾಗ ದ್ವಿತೀಯ 15000/ ರೂಪಾಯಿ ಬಹುಮಾನ ಪಡೆದ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ
ಪಥ ಸಂಕಲನದಲ್ಲಿ ದ್ವಿತೀಯ ಬಹುಮಾನ 15000 ಸಾವಿರ ರೂಪಾಯಿ ಪಡೆದ ಕುಲಾಲ ಸಂಘ ಮುಂಬಯಿ
ಪಥ ಸಂಚಲನದಲ್ನೀಡುವ ತೀಯ ಬಹುಮಾನ 10000/ ಸಾವಿರ ರೂಪಾಯಿ ಪಡೆದ ಸಿರಿನಾಡ ವೇಲ್ಪರ್ ಅಸೋಸಿಯೇಷನ್