


————————–
ಅಮೇರಿಕಾ : ಅಂತರರಾಷ್ಟ್ರೀಯ ಮಟ್ಟದ ತುಳು ಸಂಸ್ಥೆ ”ಆಲ್ ಅಮೇರಿಕಾ ತುಳು ಅಸೋಸಿಯೇಷನ್ AATA” ತನ್ನ ಮೂರನೇ ತುಳು ಉಚ್ಚಯ -2023 ನ್ನು ಬರುವ ಭಾನುವಾರ ತಾರೀಖು 29-10-2023 ಬೆಳಿಗ್ಯೆ ಅಮೇರಿಕಾ ಸಮಯ 11-30ಕ್ಕೆ ಸರಿಯಾಗಿ ತುಳುನಾಡಿನ ವಿವಿಧ ಪ್ರತಿಭಾ ಪ್ರದರ್ಶನದೊಂದಿಗೆ ಯೂ ಟ್ಯೂಬ್ ವರ್ಚುವಲ್ ವೇದಿಕೆಯಲ್ಲಿ ಆಚರಿಸಿಕೊಳ್ಳಲಿದೆ . ಭಾರತದ ಕಾಲಮಾನ ರಾತ್ರಿ 9:00 ಗಂಟೆಗೆ ಸರಿಯಾಗಿ ಬಿತ್ತರಗೊಳ್ಳುವ ಈ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ತುಳುವರು ವೀಕ್ಷಿಸಲಿದ್ದಾರೆ .
ಪ್ರತಿ ವರ್ಷ ಅಕ್ಟೊಬರ್ ತಿಂಗಳಿನಲ್ಲಿ ನಡೆಯುವ ಈ ಉತ್ಸವ ತುಳುನಾಡಿನ ವಿಶೇಷ ಪ್ರತಿಭೆಗಳನ್ನು ಗುರುತಿಸಿ ತುಳು ಸಾಹಿತ್ಯ, ನೃತ್ಯ ಸಂಸ್ಕೃತಿ ಮತ್ತು ಸಂಗೀತದ ಸೊಬಗನ್ನು ಪ್ರಪಂಚಕ್ಕೆ ಪರಿಚಯಿಸುವ ಮಹೋನ್ನತ ಕೆಲಸ ಮಾಡುತ್ತಿದೆ .
ಪ್ರತಿ ವರ್ಷದಂತೆ ಈ ಸಾರಿ ಈ ಉತ್ಸವದಲ್ಲಿ ವಿಶೇಷ ವ್ಯಕ್ತಿಗಳಾಗಿ ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್ , ಮಂಗಳೂರು ವಿಶ್ವವಿದ್ಯಾಲಯ ತುಳು ಅಧ್ಯಯನ ಪೀಠದ ಡಾ. ಮಾಧವ ಅಮೀನ್ ಎಂ.ಕೆ , ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ , ಮತ್ತು ತುಳುನಾಡಿನ ಅಭಿಜಾತ ಕಲಾವಿದೆ ವಿನಯಾ ಪ್ರಸಾದ್ ಇವರುಗಳು ತಮ್ಮ ಅನುಭವಾಮೃತದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ AATA ಸಂಸ್ಥೆಯ ಶ್ರೀಮತಿ.ಶ್ರೀವಲ್ಲಿ ರೈ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ .
ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಯಾಕ್ಸೋಫೋನ್ ಕಲಾವಿದ ಪ್ರಕಾಶ್ ಕಾರ್ಕಳ , ಕುಡ್ಲ ಕುಸಲ್ ತಂಡದ ಹಾಸ್ಯ ಕಾರ್ಯಕ್ರಮ, ನಾಟ್ಯ ಮಯೂರಿ ಡಾ. ರಾಧಿಕಾ ಕಲ್ಲೂರಾಯರಿಂದ ನೃತ್ಯ , ಪ್ರಸಿದ್ಧ ಎಮ್ಮೆಕೆರೆ ತಂಡದಿಂದ ಹುಲಿವೇಷ , ಡಾ. ಗುರುದಾಸ ಇವರಿಂದ ಹರಿಕತೆ , ಮತ್ತು ಬೈಲೂರು ದಂಪತಿಗಳಿಂದ ವಿಶೇಷ ಪಾರ್ದನ ಕಾರ್ಯಕ್ರಮಗಳು ನಡೆಯಲಿದೆ.
ಯೂ ಟ್ಯೂಬ್ ಚೆನಲ್ www.aatana.org/tulu_uchchaya_2023 ಯಲ್ಲಿ ಬಿತ್ತರಗೊಳ್ಳುವ ಈ ವಿಶೇಷ ಕಾರ್ಯಕ್ರಮದಲ್ಲಿ ತುಳು ಕನ್ನಡ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತುಳು ಮಣ್ಣಿನ ಸಂಸ್ಕೃತಿ ಮತ್ತು ಸೊಗಡನ್ನು ಉಳಿಸುವ ಪ್ರಯತ್ನಕ್ಕೆ ಪ್ರೋತ್ಸಾಹಕರಾಗಬೇಕೆಂದು AATA ಸಂಸ್ಥೆಯ ಪದಾಧಿಕಾರಿಗಳಾದ ಭಾಸ್ಕರ್ ಶೇರಿಗಾರ್ ಸಿರೀಶ್ ಶೆಟ್ಟಿ , ಸುದರ್ಶನ್ ಶೆಟ್ಟಿ , ಪೂಜಾಶೆಟ್ಟಿ , ಸಂತೋಷ್ ಶೆಟ್ಟಿ , ಡಾ. ಮೋಹ ನ್ ಚಂದ್ರ ಕೆ ಪಿ , ರಂಜನಿ ಅಸೈಗೋಳಿ , ಸುದೀಪ್ ಹೆಬ್ಬಾರ್ , ವಿವಾಸ್ಮಾನ್ ಶೆಟ್ಟಿ , ಆರ್ಯಮಾನ್ ಶೆಟ್ಟಿ ಮತ್ತು ಸಲಹಾ ಸಮಿತಿಯಾ ಎಲ್ಲ ಸದಸ್ಯರು ಆತ್ಮೀಯವಾಗಿ ಭಿನ್ನವಿಸಿಕೊಂಡಿದ್ದಾರೆ. ಐಲೇಸಾ ಡಿ ವಾಯ್ಸ್ ಆಫ್ ಓಷನ್ ರಿ ಸಂಸ್ಥೆ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದೆ.