
ಚಿತ್ರ, ವರದಿ : ಸತೀಶ್ ಶೆಟ್ಟಿ.
ಮುಂಬೈ ಮಹಾರಾಷ್ಟ್ರದ ಮಿನಿ ತುಳುನಾಡು ಎಂದೇ ಖ್ಯಾತವಾಗಿರುವ ಡೊಂಬಿವಲಿಯ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ನವರಾತ್ರಿ ಉತ್ಸವವು ವಿವಿಧ ಪೂಜೆ, ಸೇವಾದಿಗಳಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ 24ರ ದಸರದಂದು ನಡೆದ ವೈಭವಯುತ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.






ಮಂಡಳಿಯ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು,
ವಿವಿಧ ವೇಶಭೂಷಣಗಳೊಂದಿಗೆ ನಾಸಿಕ್ ಡೋಲ್, ತಟ್ಟಿರಾಯ, ಸಿಡಿಮದ್ದು, ಬ್ಯಾಂಡುವಾಲಗ, ಕೇರಳ ಚೆಂಡೆ ಕುಣಿತ, ಮಂಡಳಿಯ ಮಹಿಳೆಯರಿಂದೆ ಭಜನೆ, ಮಂಡಳಿಯ ಮಕ್ಕಳಿಂದ ಕುಣಿತ ಭಜನೆ, ಹುಲಿವೇಷ, ಯಕ್ಷಗಾನದ ಪ್ರತ್ಯಕ್ಷತೆ, ಹಾಗೂ ಇನ್ನಿತರ ವೇಷಭೂಷಣಗಳು ಮೆರವಣಿಗೆಗೆ ಮೆರಗನ್ನು ನೀಡಿದವು. ಪರಿಸರದ ತುಳು ಕನ್ನಡಿಗರು ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆಯ ಮೆರೆಗನ್ನು ಹೆಚ್ಚಿಸಿದರು.






ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಪರಿಸರದ ತುಳು ಕನ್ನಡಿಗರು ಪಾಲ್ಗೊಂಡ ಶ್ರೀ ದೇವಿಯ ವೈಭವವಾದ ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಣ್ತುಂಬಿಕೊಂಡು ಪುನೀತರಾದರು.
ಸಂಭ್ರಮ ಉಲ್ಲಾಸ ದಿಂದ ಮೆರವಣಿಗೆ ಮೂಲಕ ತಂದ ದೇವಿಯ ಮೂರ್ತಿಯನ್ನು ಪೂಜೆ, ಪ್ರಾರ್ಥನೆಗೈದು ನದಿಯಲ್ಲಿ ವಿಸರ್ಜಿಸಲಾಯಿತು.