
ನಿಮ್ಮೆಲ್ಲರ ಸಹಕಾರದಿಂದ ಆದಷ್ಟು ಬೇಗನೆ ನೂತನ ಮಂದಿರ ಸ್ಥಾಪನೆಯ ಕನಸು ನನಸಗಲಿ : ಸೋಮನಾಥ್ ಪೂಜಾರಿ.
ಚಿತ್ರ, ವರದಿ : ಧನಂಜಯ್ ಪೂಜಾರಿ.
ಮನೆಯಲ್ಲಿಯೂ ನಾವು ದೇವರಿಗೆ ಕೈ ಮುಗಿಯುತ್ತೇವೆ, ಒಂದು ಧಾರ್ಮಿಕ ಕ್ಷೇತ್ರಕ್ಕೆ ಹೋಗಿ ನಾವು ದೇವರ ಸೇವೆ ಮಾಡುತ್ತೇವೆ ಎಂದಾದರೆ ಅದರ ಫಲ ಹತ್ತಕ್ಕೆ ನೂರಾಗುತ್ತದಂತೆ, ಏಕೆಂದರೆ ಅದು ನೂರಾರು ಜನರು ಕೈ ಮುಗಿದು ಪ್ರಾರ್ಥಿಸುವ ಸ್ಥಳ. ನಮ್ಮಲ್ಲಿ ಉತ್ತಮ ದೈವ ಭಕ್ತರಾದ ಸಲಹೆಗಾರರ, ಕಾರ್ಯಕರ್ತರ ತಂಡವೇ ಇದೆ. ಅವರೆಲ್ಲರಿಗೂ ನಾನು ಚಿರಋಣಿ ಯಾಗಿರುವೆ. ಬಹಳ ಸಮಯದಿಂದ ನಾವು ಮಂದಿರಕ್ಕಾಗಿ ಜಾಗದ ಹುಡುಕಾಟದಲ್ಲಿ ಇದ್ದೇವೆ, ಸ್ಥಳೀಯ ನಗರಸೇವಕರ ಸಹಕಾರದಿಂದ ಇಲ್ಲಿ ಸಮೀಪದಲ್ಲಿ ಜಾಗ ಸಿಗುವ ಭರವಸೆ ಸಿಕ್ಕಿದೆ, ದೇವರ ಅನುಗ್ರಹ ಹಾಗೂ ನಿಮ್ಮೆಲ್ಲರ ಸಹಕಾರ ನಮಗೆ ಇದ್ದಲ್ಲಿ ಆದಷ್ಟು ಕ್ಷೀಘ್ರದಲ್ಲಿ ನಮ್ಮ ಮಂದಿರದ ಕನಸು ನನಸಾಗುವುದು, ನಾವೆಲ್ಲರೂ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಗೊಣ ಎಂದು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷರಾದ ಸೋಮನಾಥ್ ಪೂಜಾರಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು. ಅವರು ನವಂಬರ್ 4 ರ ಶುಕ್ರವಾರ ಡೊಂಬಿವಲಿ ಟೆಲ್ಕ್ ಸ್ ವಾಡಿಯ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ 65ನೇ ವಾರ್ಷಿಕ ಮಂಗಳೋತ್ಸವದ ಕಿರುಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಾರತ್ ಬ್ಯಾಂಕ್ ಡೊಂಬಿವಲಿ ಶಾಖೆಯ ಪ್ರಬಂಧಕ ರಮೇಶ್ ಸುವರ್ಣ ಮಾತನಾಡುತ್ತ ಭಜನಾ ಮಂಡಳಿ ಅಂದರೆ ನನಗೆ ತುಂಬಾ ಇಷ್ಟ, ನಮ್ಮ ಮನೆಯಲ್ಲಿಯು ಭಜನೆ ನಡೆಯುತ್ತದೆ, ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎನ್ನುತ್ತಾರೆ, ಹತ್ತು ತಾಯಿಯ ಮಕ್ಕಳು ಒಟ್ಟು ಸೇರಿ ಮಾಡುವ ಭಜನೆ ದೇವರಿಗೆ ಅತ್ಯಂತ ಪ್ರಿಯ ಎಂದರು.
ಮಂದಿರದ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ, ಬಂಟರ ಸಂಘ ಪೂರ್ವ ವಲಯದ ಸಮನ್ವಯಕರಾದ ಸುಬ್ಬಯ್ಯ ಶೆಟ್ಟಿ ಯವರು ಮಾತನಾಡುತ್ತ ನಮಗೆ ರಾಧಾಕೃಷ್ಣ ದೇವರ ಮೇಲೆ ಹಾಗೂ ಈ ಸಮಿತಿಯ ಮೇಲಿನ ಪ್ರೀತಿ ಯಿಂದ ತುರ್ತು ಕೆಲಸವಿದ್ದರು ಈ ಕಾರ್ಯಕ್ರಮಕ್ಕೆ ಮೊದಲು ಬರುವಂತೆ ಪ್ರೇರಣೆ ನೀಡಿತು, ರಾಧಾಕೃಷ್ಣ ಹಾಗೂ ಶನೀಶ್ವರ ದೇವರ ಆಶೀರ್ವಾದ ವಿದ್ದರೆ ಯಾವ ಕಡೆಯದರು ಒಳ್ಳೆಯ ಜಾಗ ಸಿಕ್ಕಿ ಮಂದಿರದ ಕಾರ್ಯ ಖಂಡಿತ ಆಗುವುದು, ಇದಕ್ಕಾಗಿ ನಾವೆಲ್ಲರೂ ಒಟ್ಟಿಗೆ ಸೇರಿ ನಗರಸೇವಕರ ಆಫೀಸಿಗೆ ಹೋಗಿ ಮಾತನಾಡುವ ಎಂದರು.

ಇನ್ನೊಬ್ಬ ಸಲಹೆಗಾರ, ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ ಯವರು ಮಾತನಾಡುತ್ತ ಕಳೆದ 65 ವರ್ಷದಿಂದ ಈ ಕಾರ್ಯಕ್ರಮವನ್ನು ಬಹಳ ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ ಅವರಿಗೆ ಮೊದಲಾಗಿ ಅಭಿನಂದನೆಗಳು. ಪ್ರತಿಯೊಂದು ಮಂದಿರದಲ್ಲಿ ಮಕ್ಕಳು ಈಗ ಹೆಚ್ಚಾಗಿ ಬರಲು ಆರಂಭಿಸಿದ್ದಾರೆ ಇದು ಉತ್ತಮ ಸಂಕೇತ. ನಮ್ಮ ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಿ ಅವರನ್ನು ಈ ಕಾರ್ಯಕ್ಕೆ ತಯಾರು ಮಾಡುವ ಜವಾಬ್ದಾರಿ ನಮ್ಮದು, ನಾವು ಮಾಡುವ ಕೆಲಸ ನಿಷ್ಠೆಯಿಂದ ಮಾಡಿದರೆ ಆ ದೇವರು ಖಂಡಿತ ಒಳ್ಳೇದು ಮಾಡುತ್ತಾನೆ ಎಂದರು.
ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಸ್ಥಳೀಯ ನಗರ ಸೇವಕರಾದ ರಮೇಶ್ ಮ್ಹಾತ್ರೆ ಮಾತನಾಡುತ್ತ ಆದಷ್ಟು ಬೇಗ ಜಾಗದ ವ್ಯವಸ್ಥೆ ಮಾಡಿ ಕೊಡುವ ಭರವಸೆ ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದ ಎನ್ ಸಿ ಪಿ ಮುಂಬಯಿಯ ಉಪಾಧ್ಯಕ್ಷರಾದ ಲಕ್ಷಣ್ ಪೂಜಾರಿ, ಹಾಗೂ ವಾಮನ್ ಶೇಟ್ ಅವರನ್ನು ಹಾಗೂ ಊರಿನಿಂದ ಪೂಜೆಗಾಗಿ ಆಗಮಿಸಿದ ಸದಸ್ಯರಾದ ಆನಂದ್ ಪುತ್ರನ್ ಮತ್ತು ಮಹಿಳಾ ವಿಭಾಗದ ಸದಸ್ಯೆಯರನ್ನು ಗೌರವಿಸಲಾಯಿತು.
ವೈಭವಿ ಭಾಸ್ಕರ್ ಸಾಲ್ಯಾನ್, ಅಭಿಷೇಕ್ ಭರತ್ ಕುಮಾರ್ ಶೆಟ್ಟಿಗಾರ್, ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಉಪಾಧ್ಯಕ್ಷ ರವಿ ಸನಿಲ್ ಸ್ವಾಗತಿಸಿದರೆ, ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ವಂದಿಸಿದರು. ಜೊತೆ ಕಾರ್ಯದರ್ಶಿ ವಸಂತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ನಿಟ್ಟೆ, ಗಂಗಾಧರ್ ಕಾಂಚನ್, ಪುರಂದರ ಕೋಟ್ಯಾನ್, ಪ್ರಾರ್ಥಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶೇಖರ್ ಪುತ್ರನ್, ಪ್ರದಾನ ಅರ್ಚಕರಾದ ಪ್ರಕಾಶ್ ಭಟ್ ಕಾನಂಗಿ, ಪ್ರಧಾನ ಭುವಜಿ ಶೇಖರ್ ಕೋಟ್ಯಾನ್ ಉಪಸ್ಥಿತರಿದ್ದರು.




ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ 65ನೇ ವಾರ್ಷಿಕ ಮಂಗಳೋತ್ಸವವು ನವಂಬರ್ 3 ರ ಶುಕ್ರವಾರ 4 ರ ಶನಿವಾರ ದೇವಸ್ಥಾನದ ಪ್ರದಾನ ಅರ್ಚಕ ಪ್ರಕಾಶ್ ಭಟ್ ಕಾನಂಗಿ ನೇತೃತ್ವದಲ್ಲಿ ಜರುಗಿತು.
ಶುಕ್ರವಾರ ಬೆಳಿಗ್ಗೆ ತೋರಣ ಮುಹೂರ್ತ, ಗಣಹೋಮ, ನವಕ ಪ್ರದಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ಅಲಂಕಾರ ಪೂಜೆ ನಡೆದು ಮಂಗಳಾರತಿ ನಡೆಯಿತು.
ಶನಿವಾರ ಬೆಳಿಗ್ಗೆ ಬೆಳಗಿನ ಪೂಜೆ, ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆದು ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.




ಮಧ್ಯಾಹ್ನ ಮಹಾಮಂಗಳಾರತಿ, ಮಹಾಪೂಜೆ ನಡೆಯಿತು.
ನಂತರ ಶ್ರೀ ಶನಿ ದೇವರ ಗ್ರಂಥ ಪಾರಾಯಣವು ಯಕ್ಷಗಾನ ರೂಪದಲ್ಲಿ ಜರುಗಿತು.




ಗ್ರಂಥ ಪಾರಾಯಣದಲ್ಲಿ ವಾಚಕರುಗಳಾಗಿ ಆನಂದ್ ಪುತ್ರನ್, ಭರತ್ ಪುಂಜಲ್ ಕಟ್ಟೆ, ಸುರೇಶ್ ಶೆಟ್ಟಿ ಶೃಂಗೇರಿ, ನಾರಾಯಣ ಸುವರ್ಣ , ಲಕ್ಷ್ಮಣ್ ಚಿತ್ರಾಪು, ಅಣ್ಣಪ್ಪ ಮೊಗವೀರ, ರಾಜೇಶ್ ಕೋಟ್ಯಾನ್, ಮಾಧವ ಪೂಜಾರಿ, ಶೇಖರ್ ಪುತ್ರನ್, ಅಜೇಕರ್ ಜಯಶೆಟ್ಟಿ, ಸುಜಾತ, ಭಾಗವತರುಗಳಾಗಿ ರವಿ ಆಚಾರ್ಯ, ಜಗದೀಶ್ ನಿಟ್ಟೆ, ನಾರಾಯಣ ಪೂಜಾರಿ, ಮದ್ದಳೆಯಲ್ಲಿ ಹರೀಶ್ ಸಾಲ್ಯಾನ್, ಸುರೇಶ್ ಶೆಟ್ಟಿ, ಚಂಡೆಯಲ್ಲಿ ಪ್ರವೀಣ್ ಶೆಟ್ಟಿ, ಅರ್ಥದಾರಿಗಳಾಗಿ ಸೋಮನಾಥ ಪೂಜಾರಿ, ರವಿ ಸುವರ್ಣ, ಭಾಸ್ಕರ್ ಅಮೀನ್, ಪ್ರಕಾಶ್ ಭಟ್ ಕಾನಂಗಿ, ಅಶೋಕ್ ಶೆಟ್ಟಿ, ಸುರೇಶ್ ಕರ್ಕೇರ, ಜಗದೀಶ್ ಕೋಟ್ಯಾನ್, ಲಕ್ಷ್ಮಣ್ ಪೂಜಾರಿ, ಕಿಶೋರ್ ಸಾಲ್ಯಾನ್, ಪಾಲ್ಗೊಂಡಿದ್ದರು.
ರಾತ್ರಿ ರಂಗಪೂಜೆ, ಮಹಾ ಮಂಗಳಾರತಿ ನಡೆದು ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ನೆರವೇರಿತು. ನೂರಾರು ಭಕ್ತರು ಮಹಾಪೂಜೆಯಲ್ಲಿ ಉಪಸ್ಥಿತರಿದ್ದು, ತೀರ್ಥ ಪ್ರಸಾದ ಸ್ವೀಕರಿಸಿ, ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.






ಮಂದಿರದ ಗೌರವ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ಇಂದ್ರಾಲಿ, ಅಧ್ಯಕ್ಷರಾದ ಸೋಮನಾಥ ಪೂಜಾರಿ, ಉಪಾಧ್ಯಕ್ಷರುಗಳಾದ ರವಿ ಸನಿಲ್, ಶೇಖರ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿ ಕೋಟ್ಯಾನ್, ಜೊತೆ ಕಾರ್ಯದರ್ಶಿ ವಸಂತ್ ಎನ್ ಸುವರ್ಣ, ಕೋಶಾಧಿಕಾರಿ ಪ್ರಸಾದ್ ಪೂಜಾರಿ, ಜೊತೆ ಕೋಶಾಧಿಕಾರಿ ದಿನಕರ್ ಮೆಂಡನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುಂದರ ಪುತ್ರನ್, ಲಲಿತ್ ಚಂದ್ರ ಸುವರ್ಣ, ಮಾಧವ್ ಆರ್ ಪೂಜಾರಿ, ಸುಧಾಕರ್ ಮಂಡನ್, ಆನಂದ್ ಬಂಗೇರ, ಆಶಾ ಕೋಟ್ಯಾನ್, ಸುಜಾತಾ ಪೂಜಾರಿ, ಸಲಹಾ ಸಮಿತಿಯ ಕಾರ್ಯಧ್ಯಕ್ಷರಾದ ಸುಬ್ಬಯ್ಯ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರುಗಳಾದ ರಾಜೀವ್ ಭಂಡಾರಿ, ಸುಕುಮಾರ್ ಎನ್ ಶೆಟ್ಟಿ, ಆನಂದ್ ಶೆಟ್ಟಿ ಎಕ್ಕಾರ್, ಕರುಣಾಕರ್ ಶೆಟ್ಟಿ ಕಲ್ಲಡ್ಕ, ರವೀಂದ್ರ ವೈ ಶೆಟ್ಟಿ, ಯು ಎಲ್ ಸುವರ್ಣ ಆಂತರಿಕ ಲೆಕ್ಕಪರಿಶೋಧಕರಾದ ಪ್ರಕಾಶ್ ಭಂಡಾರಿ ಪ್ರಧಾನ ಭುವಜಿಯವರಾದ ಶೇಖರ್ ಕೋಟ್ಯಾನ್, ಭುವಾಜಿಗಳಾದ ಅಶೋಕ್ ಮೆಂಡನ್, ಪುರಂದರ ಕೋಟ್ಯಾನ್, ಜಗದೀಶ್ ನಿಟ್ಟೆ, ಗಂಗಾಧರ ಕಾಂಚನ್, ಶರತ್ ಮೆಂಡನ್, ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ ಕಾನಂಗಿ, ಸಹ ಅರ್ಚಕರಾದ ಭರತ್ ಕುಮಾರ್ ಪುಂಜಲ್ ಕಟ್ಟೆ, ಮತ್ತು ಮಹಿಳಾ ವಿಭಾಗ ಹಾಗೂ ಸರ್ವಸದಸ್ಯರ ಸಹಕಾರದಿಂದ 65 ನೇ ಮಹಾಪೂಜೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.