
ಚಿತ್ರ ವರದಿ : ರವಿ.ಬಿ.ಅಂಚನ್ ಪಡುಬಿದ್ರಿ
ಮುಂಬಯಿ ನ.5: ಕರಾವಳಿ ಕರ್ನಾಟಕದ ಜಾನಪದ ಕಲೆಯಾದ ಯಕ್ಷಗಾನ ಕಲೆ ಕನ್ನಡ – ತುಳು ಭಾಷೆಯಲ್ಲಿ ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನು ತಿಳಿಸುವ ಕಾರ್ಯಮಾಡುತ್ತಿದ್ದು ಯಕ್ಷಗಾನದ ನೃತ್ಯ, ನಾಟ್ಯ ಭಾಗವತಿಕೆ ಬಹಳಷ್ಟು ಕಲಾ ಪ್ರೇಮಿಗಳನ್ನು ಅಕರ್ಷಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಚಾರಿಟಬಲ್ ಟ್ರಸ್ಟ್ ಮೂಲಕ ಯಕ್ಷಗಾನದ ಕಲೆ ರಾಷ್ಟ್ರ ಭಾಷೆ ಹಿಂದಿ, ಮರಾಠಿ ಭಾಷೆಯಲ್ಲೂ ಪ್ರದರ್ಶನ ಗೊಳ್ಳುತ್ತಿರುವುದು ಸಂತೋಷದ ವಿಚಾರ. ಈಗಾಗಲೇ ಈ ಸಂಸ್ಥೆ ಅರಣ್ಯರಕ್ಷಕ ಡಸ. ರಾಧಾಕೃಷ್ಣನಾ
ನಾಯರ್ ರವರ ಮುಂದಾಳುತ್ವದಲ್ಲಿ ಗುಜರಾತ್ ನ ಉಮಾರ್ ಗಾವ್ ನಲ್ಲಿ ಹಿಂದಿ ಭಾಷೆಯಲ್ಲಿ ಮೂರು ಪ್ರದರ್ಶನಗಳನ್ನು ನೀಡಿದೆ ಎಂದು ತಿಳಿದು ಸಂತೋಷವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮಭೂಮಿ ಭಾಷೆಯಾದ ಗುಜರಾತಿ ಭಾಷೆಯಲ್ಲಿ ನಮ್ಮ ಕರಾವಳಿ ಯಕ್ಷಗಾನ ವಿಶ್ವಕ್ಕೆ ಪಸರಿಸಿ ವಿಶ್ವಗಾನವಾಗಿ ಮೆರಯಲಿ ನಮ್ಮ ಯಕ್ಷಗಾನದ ಕಲೆ ಇನ್ನೂ ಹೆಚ್ಚಿನ ಭಾಷೆಗಳಿಗೆ ಭಾಷಾಂತರವಾಗಲಿ ಎಂದು ಎಡನೀರು ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು.




ಅವರು ನ. 5 ರ ಬೆಳಿಗ್ಗೆ ಮಾಟುಂಗಾ ಪೂರ್ವದ ಶಂಕರ ಮಠದಲ್ಲಿ ಗುಜರಾತಿ ಭಾಷೆಯ ಯಕ್ಷಗಾನ ಸ್ರೀಪ್ಟ್ ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅಶೀರ್ವಚನ ನೀಡುತ್ತಿದ್ದರು
ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿ ಯಕ್ಷ ಗುರು ಕಟೀಲು ಸದಾನಂದ ಶೆಟ್ಟಿ ಮಾತನಾಡುತ್ತಾ ಗುಜರಾತಿ ಯಕ್ಷಗಾನ ಕಲಾಪ್ರೇಮಿಗಳ ಬಹು ಅಪೇಕ್ಷೆಯ ಮೇರೆಗೆ ಗುಜರಾತಿ ಭಾಷೆಯಲ್ಲೂ ಯಕ್ಷಗಾನ ಪ್ರದರ್ಶನ ಮಾಡುವ ಸಲುವಾಗಿ ಗುಜರಾತಿ ಭಾಷೆಯಲ್ಲಿ ಯಕ್ಷಗಾನದ ಸ್ರೀಪ್ಟ್ ನ್ನು ತಯಾರಿಸಲಾಗಿದೆ ಈ ಕಾರ್ಯದಲ್ಲಿ ತಕ್ಷ ಶಿಲಾ ನವರಾತ್ರಿ ಮಂಡಳಿಯ ಕಾರ್ಯಕರ್ತರ ಸಹಕಾರ ಹಾಗೂ ಪರಿಸರ ಪ್ರೇಮಿ, ಅರಣ್ಯ ರಕ್ಷಕ ಡಾ. ರಾಧಾಕೃಷ್ಣನ ನಾಯರ್ ಪ್ರೋತ್ಸಾಹ ಕಾರಣವಾಗಿದೆ ಎಂದರು.
ಈ ಸಂದರ್ಬದಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷ ಶೇಖರ್ ಪೂಜಾರಿ,, ಅರ್ಚಕ ಅಂಚನ್ ಸ್ವಾಮಿ ಕಟೀಲು ಸದಾನಂದ ಶೆಟ್ಟಿ, ತಕ್ಷಶಿಲಾ ನವರಾತ್ರಿ ಉತ್ಸವ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.