
ಮುಂಬೈ. ನ 12 ವರ್ಲಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ (ರಿ), 29ನೇ ಶ್ರೀ ಅಯ್ಯಪ್ಪ ಸ್ವಾಮಿಯ29 ವರ್ಷದ ಮಹಾಪೂಜೆಯ ಪ್ರಯುಕ್ತ
ನ ತ.17 ನೇ ಶುಕ್ರವಾರದ ಶುಭದಿನದಂದು ಪ್ರಾತಃಕಾಲದಲ್ಲಿ ಅಪ್ಪಾಜಿ ಬೀಡಿನಲ್ಲಿ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ಮಣಿ ಮಾಲೆ ಧಾರಣೆ ಶಿಬಿರ ರಮೇಶ್ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ಫೌಂಡೇಶನ್ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಶಿಬಿರ ಮುಂಜಾನೆ ವಿಶೇಷ ಪೂಜೆಯೊಂದಿಗೆ ಚಾಲನೆ ಒಳಲಿದೆ ಆ ಬಳಿಕ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಗೆ ಮಾಲೆಧಾರಣೆ ಮಾಡಿದ ಸ್ವಾಮಿಗಳ ಶರಣುಘೋಶದೊಂದಿಗೆ ಶ್ರೀ ಗುರುಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆಯು ಜರಗಲಿದೆ.
ಅದೇ ರೀತಿ, ನ.18.ನೇ ಶನಿವಾರದಿಂದ ಮೊದಲ್ಗೊಂಡು ಇರುಮುಡಿ ಕಟ್ಟುವ ತನಕ,ಪ್ರತೀ ಶನಿವಾರದಂದು ಶ್ರೀ ಅಯ್ಯಪ್ಪ ಸ್ವಾಮಿಗೆ ಅತೀ ಪ್ರಿಯವಾದ ಸಾರ್ವಜನಿಕ ಪಡಿಪೂಜೆಯು ವಿಜೃಂಭಣೆಯಿಂದ ಜರಗಲಿರುವುದು.* ಶ್ರೀ ಅಯ್ಯಪ್ಪ ಸ್ವಾಮಿಯ ಎಲ್ಲಾ ಭಕ್ತಾದಿಗಳು ತಮ್ಮ ಮನೋಕಾಮನೆಗಳೆಲ್ಲವನ್ನೂ ಸ್ವಾಮಿಯು ಈಡೇರಿಸಿಕೊಡುವಂತೆ ಪ್ರಾರ್ಥಿಸಿ ನೀಡುವ ಪಡಿಪೂಜೆ ಸೇವೆಯ ಭಾಗ್ಯ ಎಲ್ಲರಿಗೂ ದೊರಕಲು ಅನುಕೂಲವಾಗುವಂತೆ ಪಡಿಪೂಜೆ ನಡೆಯಲಿದೆ .
ನಮ್ಮೀ ಅಪ್ಪಾಜಿ ಬೀಡಿನ ಎಲ್ಲಾ ಭಗವದ್ ಭಕ್ತರು ಹಿತೈಷಿಗಳು ಹಾಗೂ ಮಾಲೆಧಾರಣೆ ಮಾಡಿದ ಸ್ವಾಮಿಗಳು ಪ್ರತಿ ಶನಿವಾರದಂದು ಪಡಿಪೂಜೆ ಯು ಸೇವೆಯನ್ನು ಮಾಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೆೇಶನ್ ಸಂಸ್ಥಾಪಕರು ರಮೇಶ್ ಗುರುಸ್ವಾಮಿ.ಅಧ್ಯಕ್ಷರುಪದ್ಮನಾಭ.ಎಸ್. ಶೆಟ್ಟಿ. ಆಡಳಿತ ವಿಶ್ವಸ್ಥರು ಶಾಂಭವಿ ರಮೇಶ್ ಶೆಟ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಕವಿತಾ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ.
ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್.
9892292449.